April 26, 2024

Bhavana Tv

Its Your Channel

ಜನತಾ ವಿದ್ಯಾಲಯ ಪ್ರೌಢಶಾಲಾ ವಿಭಾಗ ಶಿರಾಲಿಯಲ್ಲಿ ಕಟ್ಟಡಗಳ ನವೀಕರಣಕ್ಕಾಗಿ ತನು-ಮನ-ಧನದಿಂದ ಸಹಕರಿಸಿದ ದಾನಿಗಳಿಗಾಗಿ ಅಭಿನಂದನಾ ಕಾರ್ಯಕ್ರಮ

ಶಿರಾಲಿ:- ಕೆನರಾ ವೆಲ್ವೇರ್ ಟ್ರಸ್ಟ್ ನ ಜನತಾ ವಿದ್ಯಾಲಯ ಶಿರಾಲಿಯ ಪ್ರೌಢಶಾಲಾ ವಿಭಾಗದ ಶಾಲಾ ಕಟ್ಟಡಗಳಿಗೆ ಸುಣ್ಣ-ಬಣ್ಣ ಮಾಡಿಸಲು, ತರಗತಿ ಕೋಣೆಗಳಿಗೆ ನೆಲಹಾಸು ಮಾಡಿಸಲು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸಿ ತನು-ಮನ ಧನದಿಂದ ಸಹಕರಿಸಿದ ದಾನಿಗಳಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಶನಿವಾರದಂದುಜನತಾ ವಿದ್ಯಾಲಯ ಶಿರಾಲಿಯ ದಿನಕರ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ರೂವಾರಿಗಳಾದ ಗೋವಿಂದ್ರಾಯ ಭಟ್ ಅವರು ಜ್ಯೋತಿ ಬೆಳಗಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸುಮಾರು 25 ವರ್ಷಗಳಿಂದ ಶಾಲಾ ಕಟ್ಟಡಗಳಿಗೆ ಸುಣ್ಣಬಣ್ಣವಿಲ್ಲದೆ ಹಳೆಯ ಕಟ್ಟಡಗಳಂತೆ ಕಾಣುತ್ತಿತ್ತು. ಮುಖ್ಯಾಧ್ಯಾಪಕಿಯಾದ ಆಶಾ ಭಟ್ ಅವರು ನನ್ನನ್ನು ಕೇಳಿಕೊಂಡಾಗ ನಾನು ಅವರಿಗೆ ದಾನಿಗಳನ್ನು ಹುಡುಕಿ ಬಣ್ಣ ಹಚ್ಚುವ ಭರವಸೆ ನೀಡಿದೆ ಎಂದರು. ದಾನಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ.ಕೆ ನಾಯ್ಕ ಅವರು
ಉಪಾಧ್ಯಕ್ಷರಾದ ಶ್ರೀ ಬಿ.ಕೆ ನಾಯ್ಕ ಅವರು ಮಾತನಾಡುತ್ತಾ ಕನ್ನಡ ಮಾಧ್ಯಮದ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದಕ್ಕೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕಾರಣವಾಗಿವೆ ಎಂದರು. ಮಕ್ಕಳ ಸಂಖ್ಯೆ ಹೆಚ್ಚಿಸಲು ನಮ್ಮ ಶಾಲಾಭಿವೃದ್ಧಿ ಸಮಿತಿಯಿಂದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು. ಪೂರ್ವ ವಿದ್ಯಾರ್ಥಿಗಳ ಪರಿವಾರದ ಗೌರವ ಅಧ್ಯಕ್ಷರಾದ ಡಿಜೆ ಕಾಮತ್ ಅವರು ಮಾತನಾಡಿ ಶಿರಾಲಿಯಲ್ಲಿ ದಾನಿಗಳಿಗೆನೂ ಕೊರತೆಯಿಲ್ಲ.ನಾವೆಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು. ಬೆಂಗಳೂರಿನಿAದ ಆಗಮಿಸಿದ ಹಳೆಯ ವಿದ್ಯಾರ್ಥಿ ಹಾಗೂ ದಾನಿಗಳಾದ ಅಶೋಕ್ ಶಾನಭಾಗ ಅವರು ಮಾತನಾಡುತ್ತಾ ಶಾಲೆಯ ಅಭಿವೃದ್ದಿಗಾಗಿ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ನಾವೆಲ್ಲರೂ ಗೆಟ್ ಟು ಗೆದರ್ ಮಾಡೋಣ ಎಂದು ಕರೆ ನೀಡಿದರು. ಇನ್ನು ಸರ್ವರನ್ನು ಸ್ವಾಗತಿ, ಪ್ರಾಸ್ತಾವಿಕ ಮಾತನಾಡಿದ ಆಶಾ ಭಟ್ ಅವರು ಒಂದು ಘನಕಾರ್ಯಕ್ಕೆ ಸಹಕಾರ ನೀಡಿದ ಸರ್ವರನ್ನು ಸ್ಮರಿಸುತ್ತಾ ತಮ್ಮ ಸಹಾಯ ಸಹಕಾರ ನಮ್ಮೊಂದಿಗೆ ಸದಾ ಹೀಗೆ ಇರಲೆಂದು ವಿನಂತಿಸಿಕೊAಡರು.ಶಾಲಾ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಕೂಡ ಎಲ್ಲ ಶಿಕ್ಷಕರು ಸೇರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಷ್ಣು ಶಾನ ಭಾಗ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಲೀಲಾವತಿ ಮೊಗೇರ್ ನಿರೂಪಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಅರುಣ್ ಗೌಡರು ಬಂದAತಹ ಸರ್ವರನ್ನು ವಂದಿಸಿದರು.

error: