April 30, 2024

Bhavana Tv

Its Your Channel

ಹೆಬ್ಬಾರವರೇ, ರಾಜ್ಯ ಪ್ರಶಸ್ತಿಗೆ ಅರ್ಹ ಓರ್ವ ಶಿಕ್ಷಕರು ಜಿಲ್ಲೆಯಲ್ಲಿ ಇಲ್ಲವೇ?

ಶಿರಸಿ: ಪ್ರಸಕ್ತ ವರ್ಷದ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ ಓರ್ವ ಶಿಕ್ಷಕರು ಆಯ್ಕೆ ಆಗದಕ್ಕೆ ಸಾರ್ವಜನಿಕ ಹೋರಾಟಗಾರ ರವೀಂದ್ರ ನಾಯ್ಕ ಬೇಸರ ವ್ಯಕ್ತಪಡಿಸುತ್ತ ರಾಜ್ಯ ಸರಕಾರದ ಸಂಪುಟದ ಜಿಲ್ಲೆಯ ಪ್ರತಿನಿಧಿ ಅರೆಬೈಲ್ ಶಿವರಾಮ ಹೆಬ್ಬಾರ ಅವರಿಗೆ ರಾಜ್ಯ ಪ್ರಶಸ್ತಿಗೆ ಅರ್ಹ ಓರ್ವ ಶಿಕ್ಷಕರು ಜಿಲ್ಲೆಯಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಿಭಿನ್ನ ಜಾಗೋಲಿಕ ಪರಿಸರ ಮತ್ತು ಇತ್ತೀಚಿನ ಶೈಕ್ಷಣಿಕ ಸಮಸ್ಯೆಗಳೊಂದಿಗೆ ರಾಜ್ಯ ಮಟ್ಟದಲ್ಲಿಯೇ ಶ್ರೇಷ್ಠ ಮಟ್ಟದ ಕಾರ್ಯ ನಿರ್ವಹಿಸುವ ಜಿಲ್ಲೆಯ ಶಿಕ್ಷಕರನ್ನು ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಗುರುತಿಸದೇ ಇರುವುದು ಖೇದಕರ ಎಂದು ಅವರು ಹೇಳಿದರು.
ಮಕ್ಕಳಲ್ಲಿ ಶಿಕ್ಷಣ ಮಟ್ಟ ಹೆಚ್ಚಿಸುವ ಗಮನಾರ್ಹ ಕಾರ್ಯದೊಂದಿಗೆ ಮಕ್ಕಳನ್ನು ತರಗತಿಯಿಂದ- ತರಗತಿಗೆ ಪಾಸುಮಾಡುವ ಶಿಕ್ಷಕರು ಇಂದು ಉತ್ತಮ ಶಿಕ್ಷಕರನ್ನು ಗುರುತಿಸುವಲ್ಲಿ ಸರಕಾರ ‘ಫೇಲ್’ ಆಗಿದೆ ಎಂದು ಶಿಕ್ಷಕರಿಗೆ ಆಗಿರುವ ಅನ್ಯಾಯದ ಕುರಿತು ಖಾರವಾಗಿ ಪ್ರತಿಕ್ರೀಯಿಸಿದ್ದಾರೆ.
ಪ್ರಥಮ ಬಾರಿಗೆ ಇಲ್ಲ: ರಾಷ್ಟ್ರ ಮತ್ತು ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪಾತ್ರವಾದ ಜಿಲ್ಲೆಯ ಶಿಕ್ಷಕರು ಪ್ರಥಮ
ಭಾರೀಗೆ ಪ್ರಶಸ್ತರಹಿತವಾದ ಜಿಲ್ಲೆ ಆಗಿರುವದು ಖೇದಕರ. ಇದರಿಂದ ಶಿಕ್ಷಕರ ನೈತಿಕ ಮತ್ತು ಮಾನಸಿಕ ಸ್ಥೇರ್ಯ ಕುಂದುವದು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

error: