April 29, 2024

Bhavana Tv

Its Your Channel

ಭೀತಿ ಇಲ್ಲದ ಶಾಸನ – ನೀತಿ ಇಲ್ಲದ ಶಿಕ್ಷಣ ಸಂಸ್ಕಾರ ರೂಪಿಸದು— ಬಾಲಚಂದ್ರ ಶಾಸ್ತ್ರಿ ಕರಸುಳ್ಳಿ

ವರದಿ:ವೇಣುಗೋಪಾಲ ಮದ್ಗುಣಿ

ಶಿರಸಿ. ನೆಮ್ಮದಿ ಕುಟೀರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತನವರು ಏರ್ಪಡಿಸಿದ ಮಾಸದ ಮಾತು ಕಾರ್ಯಕ್ರಮದಲ್ಲಿ ವಿದ್ವಾನ್ ಬಾಲಚಂದ್ರ ಶಾಸ್ತ್ರಿ ಕರಸುಳ್ಳಿ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತ ಒಳ್ಳೆ ಸಂಸ್ಕಾರಗಳೇ ಜೀವನ ಧರ್ಮ. ಆಡುವ ಮಾತು, ನೋಡುವ ನೋಟಗಳು ಜೀವನ ಧರ್ಮಕ್ಕನುಗುಣವಾಗಿದ್ದರೆ ಬದುಕು ಮೌಲ್ಯಯುತಗೊಳ್ಳುತ್ತದೆ ಎಂದರಲ್ಲದೆ ನಾವು ಎಷ್ಟು ಕಾಲ ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಬದುಕುಳಿದಷ್ಟು ಕಾಲ ಎಷ್ಟು ಜೀವನ ಧರ್ಮವನ್ನು ರೂಪಿಸಿಕೊಂಡಿದ್ದೇವೆ ಎನ್ನುವುದು ಮುಖ್ಯ. ಪ್ರಕೃತಿಯಲ್ಲಿ ಬೆಳಗನ್ನು ಸಾರುವ ಕೋಳಿ.ಕಾಗೆಗಳೂ ಕೂಡ ಕೀಳಲ್ಲ. ಪ್ರಕೃತಿಯ ಕಾಲ ಧರ್ಮ ಬದುಕಿಗೆ ಒಂದು ಪಾಠವೆ. ಭೀತಿ ಇಲ್ಲದ ಶಾಸನ.. ನೀತಿ ಇಲ್ಲದ ಶಿಕ್ಷಣ ಎಂದಿಗೂ ಯೋಗ್ಯ ಸಂಸ್ಕಾರವನ್ನು ರೂಪಿಸಲಾರದು ಎಂದು ಪ್ರಸ್ತುತ ಪಡಿಸಿದರು.

ವ್ಯಕ್ತಿಯ ಜೀವನವೇ ಪ್ರಧಾನ. ಸಂಸ್ಕಾರಯುತ ಶ್ರೇಷ್ಕತೆ ಬದುಕನ್ನು ಎತ್ತರಕ್ಕೆ ಏರಿಸುತ್ತದೆ. ಸಂಪ್ರದಾಯಗಳು ವೈಜ್ಞಾನಿಕ ದೃಷ್ಟಿಕೋನದಿಂದ ಕೂಡಿದ್ದರೂ ವ್ಯತಿರಿಕ್ತವಾದ ಅತಿಶಯೋಕ್ತಿಗಳು ಪ್ರಶ್ನೆಯನ್ನು ಹುಟ್ಟು ಹಾಕುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ ಡಿ.ಎಸ್.ನಾಯ್ಕ ಮಾತನಾಡಿ ಸಂಸ್ಕಾರ ಮಾತು ಬಂದಾಗ ಷೋಡಶ ಸಂಸ್ಕಾರಗಳು ವಿಚಾರ ಮುಂಚೂಣಿಯಲ್ಲಿ ಬರುತ್ತದೆ. ಅತ್ಯಂತ ಸರಳವಾಗಿ ಆ ಎಲ್ಲ ವಿಚಾರಗಳನ್ನು ಕ್ರೋಡಿಕರಿಸಿ ಮಾತನಾಡಿದ ಬಾಲಚಂದ್ರ ಶಾಸ್ತ್ರಿ ಕರಸುಳ್ಳಿ ಅಭಿನಂದನಾರ್ಹರು ಎಂದು ಹೇಳಿದರು.ಗಣಪತಿ ಭಟ್ ವರ್ಗಾಸರ ಅವರು ತಮ್ಮ ಪ್ರಾಸ್ತವಿಕ ಮಾತಿನಲ್ಲಿ ಸಂಪ್ರದಾಯ ಮತ್ತು ರೂಢಿಗಳ ವ್ಯತ್ಯಾಸವನ್ನು ಪ್ರಶ್ನಿಸಿದರು.

ಎ.ರಾಮ ಭಟ್, ಜಯಪ್ರಕಾಶ ಹಬ್ಬು, ವಿಮಲಾ ಭಾಗ್ವತ, ಜನಮೇಜರಾವ, ಡಿ.ಎಮ್.ಭಟ್, ಹೆಚ್.ಆರ್.ಅಮರನಾಥ್. ಉಮೇಶ ಕೆ. ದೈವಜ್ಞ. ಜಿ.ಎನ್.ಭಟ್. ಅನಂತ ಹೆಗಡೆ. ಡಾ.ಜಿ.ಎ.ಹೆಗಡೆ ಸೋಂದಾ.. ನಾಗರಾಜ ಜೋಶಿ. ವಿ.ಪಿ.ಹೆಗಡೆ ವೈಶಾಲಿ. ಸುಮುಖ ಭಟ್,ಕೃಷ್ಣ ಪದಕಿ. ಯಶವಂತ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಯಶಸ್ವಿಗೆ ಜಗದೀಶ ಭಂಡಾರಿ,ಡಾ.ಶೈಲಜಾ ಮಂಗಳೂರಕರ ಕಾರಣಿಕರ್ತರಾದರು. ಕೃಷ್ಣ ಪದಕಿ ಅವರು ಸ್ವಾಗತಿಸುತ್ತಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮ ನಿರೂಪಣೆ ಮಾಡಿದರು.
ವಿಮಲಾ ಭಾಗ್ವತ ಅವರು ಪ್ರಾರ್ಥಿಸಿದರು. ಡಿ.ಎಮ್.ಭಟ್ ಕುಳವೆಯವರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

error: