May 3, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದಿOದ ಅತಿಕ್ರಮಣ ಸಕ್ರಮಣಕ್ಕೆ ಮುಖ್ಯಮಂತ್ರಿಗೆ ಮನವಿ.

ಯಲ್ಲಾಪುರ:- ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಧರ್ಮ ಜಾತಿಯ ಪಂಗಡದ ಜನಾಂಗಕ್ಕೂ ಸರಕಾರದ ವಿವಿಧ ಸೌಲಭ್ಯ ಸಿಗಬೇಕೆಂದು ಮುಖ್ಯ ಮಂತ್ರಿಗಳನ್ನು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ ಕುಚಗಾಂವ,ಸಹಸ್ರಳ್ಳಿ ಯಲ್ಲಾಪುರ ಇವರು ಅಧ್ಯಕ್ಷರಾದ ಬೇನಿತ ಅಂತೋನಿ ಸಿದ್ದಿ ನೇತ್ರತ್ವದಲ್ಲಿ ತಹಶೀಲ್ದಾರ ಶ್ರೀಕ್ರಷ್ಣಕಾಮಕರ ರವರಿಗೆ ಮನವಿ ನೀಡಿದರು.

ನೂರಾರು ವರ್ಷಗಳಿಂದ ಅರಣ್ಯದಲ್ಲಿ ಅತಿಕ್ರಮಣ ಮಾಡಿಕೊಂಡು ಜೀವಿಸುತ್ತಿದ್ದರೂ ಅವರಿಗೆ ಜೀವನದ ಭದ್ರತೆಯಿಲ್ಲ ಯಾಕೆಂದರೆ ಕೆಲವರಿಗೆ ಪಟ್ಟ ಇನ್ನು ಕೆಲವರಿಗೆ ಕೇವಲ ಜಿ ಪಿ ಎಸ್ ಮಾಡಿದ್ದಾರೆ ಅದರಲ್ಲೂ ವ್ಯತ್ಯಾಸ ಕಂಡುಬರುತ್ತದೆ .ಅದು ಸಮರ್ಪಕ ವಾಗಿಲ್ಲ ಪಟ್ಟ ನೀಡಿದರೂ ಸರಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಬಡವರು ಮಾಡಿಕೊಂಡ ಪೂರ್ತಿ ಅತಿಕ್ರಮಣವನ್ನು ಆದಷ್ಟು ಬೇಗ ಮಂಜೂರಿಮಾಡಿಸಿ ಕೋಡುವಂತೆಯೂ ಕೇಳಿದ ಇವರು ಮಂಜೂರಿಯಾಗಿ ಬಂದರೂ ಫಲಾನುಭವಿಗಳಿಗೆ ಬಳಸಿಕೊಳ್ಳಲು ಸಾದ್ಯವಾಗುತ್ತಿಲ್ಲ ಈ ಕಾರಣದಿಂದ ಸಂಬAದಪಟ್ಟ ಅದಿಕಾರಿಗಳು ಹೆಚ್ಚಿನ ಆಸಕ್ತಿವಹಿಸಿ ಕೆಲಸ ಮಾಡಿಕೊಡಬೇಕು ಉದ್ಯೋಗ ಖಾತ್ರಿ ಯೊಜನೆ ಅಥವಾ ಗಂಗಾ ಕಲ್ಯಾಣದಂತಹ ಯೊಜನೆ ಬಳಸಿಕೊಳ್ಳಲು ಪಹಣಿ ಪತ್ರ ಕೆಳುತ್ತಾರೆ ಆದರೆ ಕಾಲಂ ನಂಬರ ೯ ರಲ್ಲಿ ಕ್ಷೇತ್ರ ದಾಖಲಿರುವದಿಲ್ಲ ಇದರಿಂದ ಬಹಳ ಕಷ್ಟವಾಗಿದೆ.ಪರಿಶಿಷ್ಟ ಜಾತಿ,ಪಂಗಡದ ಎಲ್ಲಾಯೋಜನೆಯ ಸೌಲಭ್ಯ ಬಳಸಿಕೊಳ್ಳುವದಕ್ಕೆ ಅವಕಾಶ ಕಲ್ಪಿಸಿ ಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ನಮ್ಮ ಸಮುದಾಯದ ಜನರು ದೌರ್ಜನ್ಯಕ್ಕೆ ಒಳಗಾದಾಗ ವಿಳಂಬ ಮಢದೇ ಪ್ರಕರಣವನ್ನು ಇತ್ಯರ್ತ ಮಾಡಿ ನ್ಯಾಯವದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ..
ಮನವಿ ನೀಡಲು ಸಂಘದ ಪ್ರಮುಖರಾದ ಜೋನ್ ಕೋಸ್ತಾ ಸಿದ್ದಿ,ಅಲ್ಲಾಬಕ್ಷ ಅಲ್ಲಿ ಸಾಬ್ ಪಾಟೀಲ್,ಲಾರೆನ್ಸ್ ಕೈತಾನ ಸಿದ್ದಿ,ಸಂತೋಷ ಜೆ,ಮೌಲಾಲಿ ಅಜಗಾಂವಕರ,ವಿಲ್ಸನ ಬಸ್ತಾಂವ ಡಿಸೋಜಾ ಸಿದ್ದಿ, ತೆರೇಜಾ ಸಿದ್ದಿ ಜುಲಿಯಾ ರುಜಿಯಾ ಸಿದ್ದಿ,ಶಂಕರ ನಾರಾಯಣ ಸಿದ್ದಿ ,ಮನವೇಲ ಮಾತೇಸ್ ಸಿದ್ದಿ,ಸೇರಿದಂತೆ ೨೦ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ವರದಿ ವೇಣು ಗೋಪಾಲ ಮದ್ಗುಣಿ

error: