May 19, 2024

Bhavana Tv

Its Your Channel

ಬಾಳೆಗದ್ದೆ ಹುಡುಗರ ಮತ್ತೊಂದು ಕಿರುಚಿತ್ರ ಕಾಟೇರಾ.? ಬಿಡುಗಡೆಗೆ ಸಿದ್ಧ

ವರದಿ :- ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಉಮ್ಮಚಗಿ ಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯ ನಾಲ್ಕಾರು ಹುಡುಗರು ಸೇರಿ ಎರಡನೇ ಲಾಕ್ ಡೌನ್ ಸಮಯದಲ್ಲಿ ತಯಾರಿಸಿದ ‘ಮರ್ಕ್ಯೂರಿ’ ಎಂಬ ಕಿರುಚಿತ್ರ ಯೂಟ್ಯೂಬ್ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಅದೇ ತಂಡದಿAದ ಮತ್ತೊಂದು ಕಿರುಚಿತ್ರ’ಕಾಟೇರಾ?’
ನಿರ್ಮಾಣಗೊಂಡಿರುತ್ತದೆ. ಕೆಲದಿನಗಳ ಹಿಂದೆ ಅದರ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು ಬಿಡುಗಡೆಗೊಂಡ ಎರಡೇ ದಿನದಲ್ಲಿ ಸಾಕಷ್ಟು ನೋಡುಗರಲ್ಲಿ ಕುತೂಹಲವನ್ನೂ ಹುಟ್ಟಿಸಿರುತ್ತದೆ.ಸೈಲೆಂಟ್ ಮತ್ತು ಸಷ್ಪೆನ್ಸ್ ಕಥಾ ಹಂದರ ಹೊಂದಿರುವ ‘ಕಾಟೇರಾ?’ ಈಗಾಗಲೇ ಯೂಟ್ಯೂಬ್ ಚಾನೆಲ್ ಮೂಲಕ ನೋಡುಗರಿಗೆ ತಲುಪಲಿದೆ.’ಮರ್ಕ್ಯೂರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅವಿ ಡಾರ್ಲಿಂಗ್ (ಅವಿನಾಶ ಬಾಳೆಗದ್ದೆ) ಈ ಚಿತ್ರಕ್ಕೂ ನಿರ್ದೇಶನದ ಹೊಣೆ ಹೊತ್ತಿದ್ದು, ಚಿತ್ರ ಸುಂದರವಾಗಿ ಮೂಡಿಬಂದಿದೆ.
ತಾರಾಗಣದಲ್ಲಿ ಪ್ರಕಾಶ ಪಟಗಾರ, ಗಣೇಶ ಪಟಗಾರ,ನಂದನ ಪಟಗಾರ, ಚೌಡು ಪಟಗಾರ, ನಾಗರಾಜ, ಸಂತೋಷ, ಕಾವ್ಯ, ನಾಗಶ್ರೀ ಮೊದಲಾದವರು ಅಭಿನಯಿಸಿರುತ್ತಾರೆ.ಸಾರ್ವಜನಿಕರು ಈ ಬಗ್ಗೆ ಅಭಿಪ್ರಾಯ ತಿಳಿಸಬೇಕೆಂದು ಗಣಪತಿ ಬಾಳೆಗದ್ದೆ ತಿಳಿಸಿದ್ದಾರೆ.

error: