April 26, 2024

Bhavana Tv

Its Your Channel

ಕೇಂದ್ರ ಸರ್ಕಾರದ ಎ.ಪಿ.ಎಂ.ಸಿ ಕಾಯ್ದೆ ವಿರುದ್ಧ ಕಾಂಗ್ರೆಸ ಕಿಸಾನ್ ಸೇಲ್ ವತಿಯಿಂದ ಪ್ರತಿಭಟನೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕೇಂದ್ರದ ಕಾಂಗ್ರೆಸ ಪಕ್ಷದ ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಹಾಗೂ ರಾಜ್ಯ ಕಿಸಾನ ಅಧ್ಯಕ್ಷರಾದ ಸಚಿನ ಮೇಘ ಅವರ ನಿರ್ದೇಶನದಂತೆ ರೈತ ವಿರೋಧಿ ಕಾಯ್ದೆ ವಿರುದ್ಧ ಕರ್ನಾಟಕ ಬಂದಗೆ ಕರೆ ನೀಡಿದ್ದರು. ರೈತವಿರೋಧಿ ಕಾಯ್ದೆಯ ವಿರುಧ್ದ ಪ್ರತಿಭಟಿಸುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.ಕೇಂದ್ರ ಸರ್ಕಾರ ತಂದ ಎ.ಪಿ.ಎಂ.ಸಿ ಕಾಯ್ದೆ ವಿರುದ್ಧ ಕಾಂಗ್ರೆಸ ಕಿಸಾನ್ ಸೇಲ್ ವತಿಯಿಂದ ಪ್ರತಿಭಟಣೆ ನಡೆಯಿತು. ರೈತ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದು ಇದು ರೈತರಿಗೆ ಮರಣ ಶಾಸನವಾಗಿದೆ. ರೈತರು ತಮ್ಮ ಮಹಾಸೂಲನ್ನು ದೇಶದ ಯಾವುದೇ ಭಾಗಕ್ಕೆ ಕೊಂಡೊಯ್ದು ಮಾರಾಟ ಮಾಡಲು ಅವಕಾಶ ಕೊಟ್ಟಿದ್ದು, ರೈತರಿಗೆ ಮುಂದಿನ ದಿನಗಳಲ್ಲಿ ಕಾಯ್ದೆಯ ದುರುಪಯೋಗ ವಾಗಿ ರೈತರು ಬದುಕನ್ನು ಅವನತಿಗೆ ತಳ್ಳಲಿದೆ. ಸಹಕಾರಿ ಸಂಘಗಳ ಮುಖಾಂತರ ವ್ಯವಹರಿಸುತ್ತಿರುವ ರೈತರು ತುಂಬುವ ಸಾಲವನ್ನು ಗಣನೆಗೆ ತೆಗೆದುಕೊಳ್ಳದೆ, ಸಹಕಾರಿ ಸಂಘದಿAದ ವಿಮುಖವಾಗಿ ಸಹಕಾರಿ ಸಂಘಗಳು ಇದರಿಂದ ಮುಚ್ಚಲ್ಪಡುತ್ತದೆ. ಸಹಕಾರಿ ಸಂಘದ ಅವಲಂಬನೆ ಮೇಲೆ ಇರುವ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಹಕಾರಿ ಸಂಘಗಳು ಮುಚ್ಚಲ್ಪಡುತ್ತದೆ.ಇವೆಲ್ಲದುದರಿಂದ ಬಂಡವಾಳಶಾಹಿಯವರ ಹಾಗೂ ಉದ್ಯಮಿಗಳ ಕಪಿಮುಷ್ಠಿಗೆ ರೈತರು ಸಿಲುಕುವಂತಾಗುತ್ತಾನೆ. ಕೃಷಿ ಜಮೀನು ಮಾಡುವವರು ಕಡಿಮೆಯಾಗಿ ದೇಶದಲ್ಲಿ ಆಹಾರದ ಕೊರತೆಯಾಗುತ್ತದೆ.ಕೇಂದ್ರ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ಹಿಂತೆದುಕೊಳ್ಳ ಬೇಕೆಂಬ ಮನವಿಯನ್ನು ಯಲ್ಲಾಪುರ ತಾಲೂಕಿನ ತಹಶಿಲ್ದಾರ ಸಿ.ಜಿ.ನಾಯ್ಕರವರ ಮೂಲಕ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ ಅಧ್ಯಕ್ಷರಾದ ಡಿ.ಎನ್.ಗಾಂವಕರ,ಕಿಸಾನ ಸೇಲ್ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ,ಲಾರೇನ್ಸ ಸಿದ್ದಿ,ದೀಲಿಪ ರೋಖಡೆ, ಎನ್.ಕೆ.ಭಟ್ಟ, ಬಾಬು ಸಿದ್ದಿ,ಅಮೀನಾ ಶೇಖ,ಪೂಜಾ ನೇತ್ರೇಕರ,ಗಣೇಶ ರೋಖಡೆ, ಟಿ.ಸಿ.ಗಾಂವಕರ,ರವಿನಾಯ್ಕ,ಕೈಸರ ಅಲಿ,ಗಜಾನನ ಭಟ್ಟ ಉಪಸ್ಥಿತರಿದ್ದರು.ಅನೂಕೂಲ ರೈತರು ಹಾಗೂ ಸರ್ಕಾರದ ವಿರುದ್ಧ ಈ ಕಾರ್ಯಕ್ರಮಕ್ಕೆ ಪಂಚಾಯತ ಘಟಕ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು ರೈತ ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ವಿವಿಧ ಸೇಲ್ ಗಳು ಅಧ್ಯಕ್ಷರು ಉಪಸ್ಥಿತರಿದ್ದರು.

error: