April 26, 2024

Bhavana Tv

Its Your Channel

ವಿವೇಕ ಹೆಬ್ಬಾರರಿಗೆ ತಿರುಗೇಟು ಕೊಟ್ಟ ಕಾಂಗ್ರೇಸ್ ಮುಖಂಡರು

ಯಲ್ಲಾಪುರ: ವಿವೇಕ ಹೆಬ್ಬಾರ ಹೇಳಿಕೆ ನೀಡಿ ಆರ್ ವಿ.ದೇಶಪಾಂಡೆಯವರು ಯಲ್ಲಾಪುರ ಕ್ಷೇತ್ರಕ್ಕೆ ಎನು ಮಾಡಿದ್ದಾರೆ ಎಂದು ಪ್ರಶ್ನಿಸುವುದಕ್ಕಿಂತ ಕೊವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡಬೇಕಾಗಿದ್ದ ಕಿಟ್ ಎಲ್ಲಿ ಹೋಯಿತೆಂದು ತಮ್ಮ ತಂದೆಯನ್ನು ಕೇಳಿ ತಿಳಿದುಕೊಳ್ಳಿ ಎಂದು ಯಲ್ಲಾಪುರ ತಾಲೂಕು ಕಾಂಗ್ರೆಸ ಅಧ್ಯಕ್ಷರಾದ ಡಿ ಎನ್ ಗಾಂವಕರ, ಮುಂಡಗೋಡ ತಾಲೂಕ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣಾ ಹೀರಹಳ್ಳಿ ಹಾಗು ಬನವಾಸಿ ಬ್ಲಾಕ್ ಅಧ್ಯಕ್ಷರಾದ ಸಿ ಎಫ್ ನಾಯ್ಕ ವಿವೇಕ ಹೆಬ್ಬಾರವರನ್ನು ಪ್ರಶ್ನಿಸಿದ್ದಾರೆ.

ಅವರು ಸಿರ್ಸಿಯ ಪತ್ರಿಕಾ ಭವನದಲ್ಲಿ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವೇಕ ಹೆಬ್ಬಾರವರ ಹೇಳಿಕೆಯನ್ನು ಖಂಡಿಸಿ, ದೇಶಪಾಂಡೆಯವರಿಗೆ ಮಾಡಿದ ಟೀಕೆಗೆ ಉತ್ತರ ನೀಡುತ್ತ ದೇಶಪಾಂಡೆಯವರು ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ.ಇದನ್ನು ಸ್ವತಹ ಶಿವರಾಂ ಹೆಬ್ಬಾರವರಿಗೆ ಗೊತ್ತಿದೆ.ಅವರ ಮಗನಾದವನು ತಂದೆಯಿAದ ಇದೆಲ್ಲವನ್ನು ಕೇಳಿ ತಿಳಿದುಕೊಳ್ಳಲೆಂದು ಹೇಳಿದರು. ಈ ಕ್ಷೇತ್ರಕ್ಕೆ ೧೦೦ ಹಾಸಿಗೆಯುಳ್ಳ ಆಸ್ಪತ್ರೆ,ಅಗ್ನಿಶಾಮಕ ದಳ,ಬಸ್ ಸ್ಟ್ಯಾಂಡ್, ತಹಶೀಲ್ದಾರ ಕಚೇರಿ,ಪಟ್ಟಣ ಪಂಚಾಯತ ಕಟ್ಟಡ, ಪಿ ಯು ಕಾಲೇಜು,ಬೇಡ್ತಿ ಬ್ರಿಜ್,ಬನವಾಸಿಯಲ್ಲಿ ಕೆರೆಗಳಿಗೆ ನೀರು ತುಂಬವ ಏತ ನೀರಾವರಿ ಯೋಜನೆ,ಬನವಾಸಿ ಅಭಿವೃದ್ದಿ ಪ್ರಾಧಿಕಾರ,ಹಳ್ಳಿಹಳ್ಳಿಗೆ ಕಾಂಕ್ರೀಟ್ ರಸ್ತೆ ಹೀಗೆ ಹಲವಾರು ಕೆಲಗಳನ್ನು ಮಾಡಿದ್ದಾರೆ.ಇದನ್ನು ಸ್ವತಃ ಸಚಿವರೇ ಕಾಂಗ್ರೆಸ್ ನಲ್ಲಿದ್ದ ಸಂಧರ್ಭದಲ್ಲಿ ದೇಶಪಾಂಡೆಯವರ ಕೆಲಸದ ಬಗ್ಗೆ ಹಾಡಿ ಹೊಗಳಿದ್ದಾರೆಂದು ಹೇಳಿದರು. ಪ್ರಶಾಂತ ದೇಶಪಾಂಡೆಯವರ ರಾಜಕೀಯ ನೆಲೆಯ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನಗೆ ಉತ್ತರಿಸಿದ ಮೂರು ಬ್ಲಾಕ್‌ನ ಅದ್ಯಕ್ಷರು ಪ್ರಶಾಂತ ದೇಶಪಾಂಡೆಯವರು ಯಲ್ಲಾಪುರ ಕ್ಷೇತ್ರದ ಒಮ್ಮತದ ಅಭ್ಯರ್ಥಿ. ಇದಕ್ಕೆ ಮೂರು ಬ್ಲಾಕಿನ ಅದ್ಯಕ್ಷರ ಸಹಮತಿಯಿದೆ.ಪಕ್ಷ ಅಂದ ಮೇಲೆ ಸಣ್ಷಪುಟ್ಟ ಬಿನ್ನಮತಗಳಿರುವುದು ಸಹಜ ಅದೆಲ್ಲವೂ ಸರಿ ಹೋಗುತ್ತದೆ.ಬಿನ್ನಮತ ಬೇಗ ಉಪಶಮನ ವಾಗಬೇಕಾದರೆ ಟೆಕೇಟ್ ಆದಷ್ಟು ಬೇಗ ಘೋಷಣೆಯಾಗಬೇಕೆಂದರು. ಪ್ರಶಾಂತ ದೇಶಪಾಂಡೆಯವರು ನಾನು ಗುಂಡಿಗೆ ಎದೆ ನೀಡಲು ಸಿದ್ದ, ಗುಂಡು ಹೊಡೆಯಲು ಸಿದ್ದ ಎಂದಿದ್ದು ಕಾಂಗ್ರೆಸ್ ಸಂಸ್ಕçತಿಯೆ ಎಂದು ಮಾದ್ಯಮದವರು ಕೇಳಿದ ಪ್ರಶ್ನಗೆ ಅವರು ಪ್ರಶಾಂತರವರು ಆ ಅರ್ಥದಿಂದ ಹೇಳಿಲ್ಲಾ. ಅವರು ಮಾತನಾಡುವಾಗ ಮಾತಿನ ಗುಂಡನ್ನು ಬಳಸಿದ್ದಾರೆ. ಕೆಲವೊಮ್ಮೆ ಪಕ್ಷದಲ್ಲಿ ದೈರ್ಯ ಮೂಡಿಸುವಾಗ ಹೀಗೆ ಮಾತನಾಡುವ ಸಂಧರ್ಭ ಬರುತ್ತದೆ. ಅದಕ್ಕೆ ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವದಿಲ್ಲಾ. ವಿರೋದ ಪಕ್ಷದವರು ಕೂಡಾ ತಲೆ ಕೆಡಿಸಿಕೊಳ್ಳಬಾರದೆಂದರು. ದಾಸನಕೊಪ್ಪದಲ್ಲಿ ನಡೆದ ಸಭೆಯಲ್ಲಿ ಘಟಕಾಧ್ಯಕ್ಷರ ಗೈರಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರ ಒಪ್ಪಿಗೆ ಪಡೆದೆ ಸಭೆ ಆಯೋಜಿಸಲಾಗಿತ್ತು. ಅದರಲ್ಲಿ ಕೆಲವರು ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲವೆಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ದೀಪಕ ದೊಡ್ಡೂರ, ಬಸವರಾಜ ದೊಡ್ಮನೆ, ಎಸ್ ಜಿ ಹೆಗಡೆ ಹಾಗು ಶ್ರೀಲತಾ ಶಿವಾಜಿ ಕಾಳೆರಮನೆ ಉಪಸ್ಥಿತರಿದ್ದರು.

ವರದಿ:ವೇಣುಗೋಪಾಲ ಮದ್ಗುಣಿ.

error: