May 2, 2024

Bhavana Tv

Its Your Channel

ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ವಿಶ್ವಸಂತ ಭಾರತದ ಸನಾತನ ಧರ್ಮದ ಸಿಡಿಲ ಮರಿ ಸ್ವಾಮಿ ವಿವೇಕಾನಂದರ ಜೀವನದ ಚಿಂತನ ಅವಧಿ ನಿಜವಾದ ಸಾರ್ಥಕ್ಯದ ಕ್ಷಣವಾಗಿದೆ ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ನಿಜವಾದ ಆನಂದದ ಅನುಭೂತಿ ಆಗುತ್ತದೆ. ಇದರಿಂದ ನಮ್ಮ ಪರಿಮಿತಿಯನ್ನು ಮೀರಿ ಪರಿಸರದಲ್ಲಿ ಭ್ರಾತೃತ್ವ ಪಸರಿಸಲು ಸಾಧ್ಯವಾಗುತ್ತದೆ ಮಾನವ ವಿಶ್ವಮಾನವ ಆಗುವ ಸಂದೇಶವನ್ನು ವಿವೇಕಾನಂದರ ಜೀವನ ನಮಗೆ ಕಲಿಸುತ್ತದೆ ಎಂದು ವಿದ್ವಾನ್ ಗಣಪತಿ ಭಟ್ಟ ಕೋಲಿ ಬೇಣ ಕಾರ್ಯದರ್ಶಿಗಳು ಗೋವರ್ಧನ ಗೋ ಸೇವಾ ಸಮಿತಿ ಕರೊಡೊಳ್ಳಿ ಅವರು ನುಡಿದರು.
ಅವರು ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ಇಂದು ಪ್ರಾತಃಕಾಲ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ನೀಡಿ ಮಾತನಾಡುತ್ತಿದ್ದರು. ನಾವು ಜೀವಿತದ ಪ್ರತಿ ಕ್ಷಣವನ್ನು ಅನುಭವಿಸಬೇಕು ಆಸ್ವಾದಿಸಬೇಕು ನನ್ನಿಂದ ನನ್ನ ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ. ವಿ ಹೆಗಡೆಯವರು ವಿವೇಕಾನಂದರ ಜಯಂತಿಯಂತಹ ಕಾರ್ಯಕ್ರಮಗಳನ್ನು ಆಚರಿಸುತ್ತಾ ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ವಿ.ಕೆ ಭಟ್ಟ ಶೀಗೆಪಾಲ, ಮಹಿಳಾ ಪ್ರಭಾರಿ ಶೈಲಶ್ರೀ ಭಟ್ಟ, ಪತಂಜಲಿ ಯೋಗ ಸಮಿತಿ ಉತ್ತರಕನ್ನಡ ಯುವ ಪ್ರಭಾರಿ ದಿವಾಕರ ಮರಾಠಿ, ಪತಂಜಲಿ ಯೋಗ ಸಮಿತಿ ಯಲ್ಲಾಪುರ ಉಪಾಧ್ಯಕ್ಷ ನಾಗೇಶ ರಾಯ್ಕರ ಕಾರ್ಯದರ್ಶಿ ಸತೀಶ ಹೆಗಡೆ ಸುಬ್ರಾಯ ಭಟ್ಟ ಜಿ ಎಸ್ ಭಟ್ಟ ಹಳವಳ್ಳಿ ರಾಮಕೃಷ್ಣ ಕವಡಿಕೆರೆ ಹಾಗೂ ಎಲ್ಲಾ ಯೋಗ ಬಂಧುಗಳು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ವಿಶೇಷ ಸೂರ್ಯನಮಸ್ಕಾರ ಕಾರ್ಯಕ್ರಮ ಯೋಗ ಉಪನ್ಯಾಸ ಹಾಗೂ ಕೊನೆಯಲ್ಲಿ ಅಗ್ನಿಹೊತ್ರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ದಿವಾಕರ ಮರಾಠಿ ಕಾರ್ಯಕ್ರಮ ನಡೆಸಿಕೊಟ್ಟರು ಜಿ ಎಸ್ ಭಟ್ಟ ವಂದಿಸಿದರು.

error: