May 19, 2024

Bhavana Tv

Its Your Channel

ರೈತರಿಗೆ ಬೆಳೆಸಾಲ ಹೆಚ್ಚಿಸಲು ರೈತ ಮುಖಂಡ ಲಕ್ಷ್ಮೀನಾರಾಯಣ ತೋಟಮನೆ ಒತ್ತಾಯ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಜಿಲ್ಲೆಯ ರೈತರು ಪ್ರಕೃತಿ ವಿಕೋಪ,ಬೆಳೆ ನಷ್ಟ,ಇತ್ಯಾದಿ ಕಾರಣಗಳಿಂದ ತೊಂದರೆಯಲ್ಲಿದ್ದಾರೆ.ಕಾರಣ ರೈತರಿಗೆ ಸಹಕಾರಿ ಸಂಘಗಳ ಮೂಲಕ ನೀಡುವ ಬೆಳೆಸಾಲದ ಪ್ರಮಾಣವನ್ನು ಹೆಚ್ಚಿಗೆ ಮಾಡಬೇಕೆಂದು ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ ಭಟ್ಟ ತೋಟಮನೆ ಒತ್ತಾಯಿಸಿದ್ದಾರೆ.
ಅವರು ಹೇಳಿಕೆ ನೀಡಿ,ರೈತರ ಪರವಾಗಿರುವ ಸರಕಾರ ರೈತರ ಸಂಕಷ್ಟಗಳಿಗೂ ಸ್ಪಂದಿಸಬೇಕು.ಫಸಲಭೀಮಾ ಯೋಜನೆಯ ಮೂಲಕ ಕೇಂದ್ರ ಸರಕಾರ ನೆರವು ನೀಡುತ್ತಿದ್ದು,ಆದರೆ ರಾಜ್ಯ ಸರಕಾರದ ನೆರವು ಕಾಲಕಾಲಕ್ಕೆ ಸರಿಯಾಗಿ ಬರುತ್ತಿಲ್ಲ.ಈ ಹಿಂದೆ ಘೋಷಿಸಿದಂತೆ ಫಸಲ್ ಭೀಮಾ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ನೆರವನ್ನು ಸಕಾಲದಲ್ಲಿ ನಿಯಮಿತವಾಗಿ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.
ಉತ್ತರ ಕನ್ನಡ ಜಿಲ್ಲೆಯಲ್ಲಿನ ರೈತರು ಸಹಕಾರಿ ಸಂಘಗಳಲ್ಲಿ ಹೊಂದಿರುವ ಅಸಾಮಿ ಸಾಲ ಬಡ್ಡಿಯ ಬಾರದಿಂದ ಹೆಚ್ಚುತ್ತಲೇ ಹೋಗುತ್ತಿದೆ.ಇದರಿಂದ ಅಸಾಮಿ ಸಾಲ ತುಂಬಲಾಗದೇ ರೈತರು ತೊಂದರೆಯಲ್ಲಿದ್ದಾರೆ.ಕಾರಣ ಅಸಾಮಿಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಬೇಕೆಂದು ಅವರು ಸಹಕಾರ ಸಚಿವರನ್ನು ಕೋರಿದ್ದಾರೆ.

error: