May 19, 2024

Bhavana Tv

Its Your Channel

ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಇಡಿಯಲ್ ಅಬಾಕಸ್ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ವನಜಾಕ್ಷಿ ಹೆಬ್ಬಾರ ಉದ್ಘಾಟಣೆ.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ‘ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳು ಹೊರ ಬರಲು ಇಂತಹ ಶಿಬಿರಗಳು ಸಹಕಾರಿ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಪತ್ನಿ ವನಜಾಕ್ಷಿ ಹೆಬ್ಬಾರ್ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಇಡಿಯಲ್ ಅಬಾಕಸ್ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಮಕ್ಕಳು ರಜೆಯ ಕಳೆಯಲು ಮೊಬೈಲ್, ಟಿವಿ ಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ತರಬೇತಿ ನೀಡುವುದಲ್ಲದೆ, ಅವರಲ್ಲಿ ಅಡಗಿರುವ ಕಲೆಯನ್ನು ಹೊರ ಹಾಕುವ ಕಾರ್ಯ ಇಂತಹ ಬೇಸಿಗೆ ಶಿಬಿರಗಳು ನಡೆಸುತ್ತಿರುವುದು ಅಭಿನಂದನಾರ್ಹ’ ಎಂದರು
ಡಾ.ಸೌಮ್ಯ ಕೆ.ವಿ ಮಕ್ಕಳ ಆರೋಗ್ಯ ಮತ್ತು ಸ್ವಚ್ಚತೆ ಕುರಿತು ಉಪನ್ಯಾಸ ನೀಡಿ ‘ ಅತಿಯಾದ ಕಾಳಜಿ ನಮ್ಮ ಮಕ್ಕಳ ವೈಯಕ್ತಿಕ ಬೆಳವಣಿಗೆ ಕುಂಟಿತಗೊಳಿಸುತ್ತದೆ. ಅಲ್ಲದೇ ನಮ್ಮ ಮಕ್ಕಳಿಗಾಗಿ ಪಾಲಕರು ತಮ್ಮ ಸಮಯವನ್ನು ಮೀಸಲು ಇಡುವ ಮೂಲಕ ಭಾಂದವ್ಯ ಬೆಳೆಯುತ್ತದಲ್ಲದೇ, ಮಕ್ಕಳಲ್ಲಿ ಸಂಸ್ಕಾರ ಮೂಡಲು ಕಾರಣವಾಗುತ್ತದೆ’ ಎಂದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ಮಾತನಾಡಿ, ಅತಿಯಾದ ಅಂಕಗಳ ವ್ಯಾಮೋಹದಿಂದಾಗಿ ಮಕ್ಕಳ ಮೇಲೆ ಪಾಲಕರು ಒತ್ತಡ ಹೇರುತ್ತಿರುವುದು ವಿಷಾದನೀಯವಾಗಿದ್ದು, ಮಕ್ಕಳ ಕಲಿಗೆ ಇಂತಹ ಶಿಬಿರಗಳು ನೆರವಾಗುವಂತೆ, ಮಕ್ಕಳ ಬೆಳವಣಿಗೆ ಹೇಗೆ ಮಾಡಬೇಕು ಎಂಬುದಕ್ಕೂ ಪಾಲಕರಿಗೆ ಶಿಬಿರಗಳನ್ನು ಏರ್ಪಡಿಸುವ ಅಗತ್ಯತೆ ತೀರಾ ಇದೆ ಎಂದರು.
ವೈ.ಟಿ.ಎಸ್.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಾಣೀಶ್ರೀ ಹೆಗಡೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶೈಲ್ ಮಾದಣ್ಣನವರ ಮಾತನಾಡಿದರು.
ಈಡಿಯಲ್ ಅಬಾಕಸ್ ನ ಮುಖ್ಯಸ್ಥ ಮುಖೇಶ ಪ್ರಭು ಅಬಾಕಸ್ ಕುರಿತು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಕ್ಲಾಸ್ 1 ಗುತ್ತಿಗೆದಾರ ಶಿವಲಿಂಗಯ್ಯ ಅಲ್ಲಯ್ಯನವರಮಠ ವೇದಿಕೆಯಲ್ಲಿದ್ದರು. ಶಿಬಿರಲ್ಲಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಬಿರದ ಮಕ್ಕಳು ಶಿಬಿರ ಗೀತೆ ಹಾಡಿದರು. ಉನ್ನತಿ ಮತ್ತು ಶ್ರೀಪ್ರದಾ ಪ್ರಾರ್ಥಿಸಿದರು, ಸನಾ ಅಸುಕರ ಸ್ವಾಗತಿಸಿದರು, ಮಾರುತಿ ಗೋವೇಕರ್ ನಿರೂಪಿಸಿದರು, ಐಡಿಯಲ್ ಅಬಾಕಸ್ ನ ಜ್ಯೋತಿ ನಾಯ್ಕ ವಂದಿಸಿದರು.

error: