May 19, 2024

Bhavana Tv

Its Your Channel

ಶಿಕ್ಷಕರ “ಕಲಿಕಾ ಚೇತರಿಕೆ” ತರಬೇತಿ ಕಾರ್ಯಾಗಾರ ಉದ್ಘಾಟನೆ.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಪ್ರಸಕ್ತ ವರ್ಷದ ಶಿಕ್ಷಣ ಇಲಾಖೆಯ “ಕಲಿಕಾ ಚೇತರಿಕೆ” ತರಬೇತಿ ಕಾರ್ಯಾಗಾರವನ್ನು ಯಲ್ಲಾಪುರದ ಕ್ಷೇತ್ರ ಸಮನ್ವಯಾಧಿಕಾರಿಗಳು ಆದ ರಾಮ ಹೆಗಡೆಯವರು ಯಲ್ಲಾಪುರದ ಮಾದರಿ ಉರ್ದುಶಾಲೆಯಲ್ಲಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು.ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಮಹಾಮಾರಿ ಕರೋನಾದಿಂದ ಎರಡು ವರ್ಷಗಳ ಕಾಲ ನಮ್ಮ ಮಕ್ಕಳ ಕಲಿಕೆಯಲ್ಲಾದ ನಷ್ಟವನ್ನು ತುಂಬುವ ಉದ್ದೇಶದಿಂದ ನಮ್ಮ ಶಿಕ್ಷಣ ಇಲಾಖೆಯು ಜಾರಿಗೆ ತಂದ ವಿನೂತನ ಯೋಜನೆಯೇ ಈ “ಕಲಿಕಾ ಚೇತರಿಕೆ”ಯಾಗಿದೆ ಎಂದು ಶಿಬಿರಾರ್ಥಿಗಳಿಗೆ ಕಲಿಕಾ ಚೇತರಿಕೆಯ ಉದ್ದೇಶ, ಮತ್ತು ಅದರ ಮಹತ್ವವನ್ನು ತಿಳಿಸಿದರು.ಈ ಸಂದರ್ಭದಲ್ಲಿ ಯಲ್ಲಾಪುರದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಉಮಾಪತಿ ಎನ್ ಎಚ್,ಬಿ,ಆರ್,ಪಿ ಗಳಾದ ಪ್ರಶಾಂತ ಪಟಗಾರ, ಸಂತೋಷ ಜಿಗಳೂರ ಹಾಗೂ ಎಲ್ಲಾ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು,ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.
ಪ್ರಶಾಂತ ಪಟಗಾರ ಕಾರ್ಯಕ್ರಮ ನಿರೂಪಿಸಿದರು, ಸಂತೋಷ ಜಿಗಳೂರರವರು ವಂದಿಸಿದರು.

error: