April 27, 2024

Bhavana Tv

Its Your Channel

ಕುಂದರಗಿಯಲ್ಲಿ “ಗ್ರಾಮ ಚದುರಂಗ” ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಕುಂದರಗಿ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಮತ್ತು ತಾಳ್ಮೆ ಹೆಚ್ಚಿಸಲು ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮಗಳ ಅಂಗವಾಗಿ “ಗ್ರಾಮ ಚದುರಂಗ ಆಡೋಣ” ಪಂದ್ಯಾವಳಿಗೆ ಕುಂದರಗಿ ಗ್ರಾಮ ಪಂಚಾಯತ ಸದಸ್ಯರಾದ ರಾಮಕೃಷ್ಣ ಹೆಗಡೆ ಹಾಗೂ ಪ್ರಕಾಶ ನಾಯ್ಕ ಪಿ. ಡಿ. ಓ. ರವಿ ಪಟಗಾರ ಮತ್ತು ಕುಂದರಗಿ ಕ್ಲಸ್ಟರ್ ಶಿಕ್ಷಕರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಪ್ರೌಢಶಾಲಾ ವಿಭಾಗದಲ್ಲಿ ಪ್ರಗತಿ ವಿಧ್ಯಾಲಯ ವಿದ್ಯಾರ್ಥಿಗಳಾದ ಲಕ್ಷ್ಮಿನಾರಾಯಣ ದೆವಡಿಗ ಪ್ರಥಮ ಸಂದೀಪ್ ದೆವಡಿಗ ದ್ವಿತೀಯ ಮತ್ತು ತೃತೀಯ ಸ್ಥಾನ ರಾಮದಾಸ್ ಡೊಯೀಫಡೆ ಹಾಗೂ ಹಿರಿಯರ ವಿಭಾಗದಲ್ಲಿ ಪ್ರಥಮ ಹಿರಿಯ ಪ್ರಾಥಮಿಕ ಶಾಲೆ ಭರತನಹಳ್ಳಿ ವಿದ್ಯಾರ್ಥಿ ಶಶಾಂಕ್ ನಾಯ್ಕ ದ್ವಿತೀಯ ಸ್ಥಾನ ತರುಣ ನಾಯ್ಕ ತೃತೀಯ ಸ್ಥಾನ ಕುಂದರಗಿ ಹಿರಿಯ ಪ್ರಾಥಮಿಕ ಶಾಲೆಯ ಜೀವನ ನಾಯ್ಕ ಪಡೆದರು.

ವಿಜೇತರಿಗೆ ಪ್ರಶಸ್ತಿ ಯನ್ನು ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಲಾಗುವುದಾಗಿ ಸಂಘಟಕರು ತಿಳಿಸಿದರು. ಪಂದ್ಯದ ನಿರ್ಣಾಯಕ ರಾಗಿ ಪ್ರಗತಿ ವಿಧ್ಯಾಲಯದ ಶಿಕ್ಷಕಿ ವೀಣಾಶ್ರೀ ಭಾಗ್ವತ ಹಾಗೂ ಕುಂದರಗಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಗಿರೀಜಾ ಪಟಗಾರ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕಿ ಮತಿ ರೀಟಾ ರೋಖಡೆ ನಿರೂಪಿಸಿದರು. ಕುಂದರಗಿ ಗ್ರಾಮ ಪಂಚಾಯತ ಪರ ದತ್ತಾತ್ರೇಯ ನಾಯ್ಕ ಧನ್ಯವಾದಗಳನ್ನು ಸಲ್ಲಿಸಿದರು

error: