May 22, 2024

Bhavana Tv

Its Your Channel

ಯಶಸ್ಸಿನ ಕನಸು ಕಾಣುವುದು ಸಹಜ . ಕನಸನ್ನು ನನಸಾಗಿಸುವುದು ಸಾಹಸ- ನಾರಾಯಣ ಯಾಜಿ

ಯಲ್ಲಾಪುರದ ವಿಶ್ವದರ್ಶನ ಪಿ.ಯು ಕಾಲೇಜಿನ ವಿಧ್ಯಾರ್ಥಿಗಳಿಗೆ ಕರಿಯರ್ ಅಕಾಡೆಮಿ ಸಂಯೋಜನೆಯಲ್ಲಿ ಸಿಏ, ಸಿಎಸ್ ಹಾಗೂ ಬ್ಯಾಂಕಿAಗ್ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ವನ್ನ ಇಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ವಿಶೇಷ ಸಂಪನ್ಮೂಲ ಉಪನ್ಯಾಸಕರಾಗಿ ಆಗಮಿಸಿದ ಕೆ ವಿ ಜಿ ಬ್ಯಾಂಕ್ ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ನಾರಾಯಣ ಯಾಜಿ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡುತ್ತಾ, ಯಲ್ಲಾಪುರ ದಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಿರುವುದು ಹೆಮ್ಮೆಯ ಸಂಗತಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಗಳಿಸುವುದು ಸುಲಭವಲ್ಲ. ವಿದ್ಯಾರ್ಥಿಗಳು ಪದವಿ ಪೂರ್ವ ತರಗತಿಗಳಲ್ಲಿ ಓದುತ್ತಿರುವಾಗ ಬ್ಯಾಂಕಿAಗ್, ಸಿ.ಏ, ಸಿಎಸ್ ನಂತಹ ಪರೀಕ್ಷೆಗಳಿಗೆ ತರಬೇತಿ ಪಡೆದರೆ ತಮ್ಮ ಪದವಿ ತರಗತಿಗಳು ಮುಗಿಯುತ್ತಿದ್ದಂತೆಯೇ ಧೈರ್ಯವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಅತೀ ಕಡಿಮೆ ವಯಸ್ಸಿನಲ್ಲೇ ಉತ್ತಮ ಗುಣಮಟ್ಟದ ಜೀವನ ಹಾಗೂ ವ್ಯವಸ್ಥಿತ ಜೀವನ ಹೊಂದಬಹುದು. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಈ ತರಬೇತಿ ಪಡೆದು ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯದ ಮುಂದಾಲೋಚನೆಯಿAದ ನೀಡುತ್ತಿರುವ ವಿವಿಧ ತರಬೇತಿಗಳ ಪ್ರಯೋಜನ ಪಡೆಯಬೇಕು.ನಾವು ಕನಸು ಕಾಣುವುದು ಸಹಜ ಆದರೆ ನಮ್ಮ ಕನಸನ್ನು ನನಸಾಗಿ ಮಾಡುವುದೇ ಸಾಹಸ. ಹಾಗಾಗಿ ನಿಮ್ಮ ಕನಸು ಈಡೇರಲು ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಬ್ಯಾಂಕುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ, ಪರೀಕ್ಷೆಗಳು ಯಾವ ರೀತಿ ಇರುತ್ತವೆ, ಹೇಗೆ ತಯಾರಿ ಮಾಡಿಕೊಳ್ಳಬೇಕು ಹಾಗೂ ಚಾರ್ಟೆಡ್ ಅಕೌಂಟೆAಟ್ ಆಗಬೇಕಾದರೆ ಹೇಗೆ ಮತ್ತು ಯಾವಾಗ ಅಧ್ಯಯನ ಪ್ರಾರಂಭಿಸಬೇಕು ಎನ್ನುವ ವಿಷಯಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಚಾರ್ಟೆಡ್ ಅಕೌಂಟೆAಟ್ ಆದ ವಿಘ್ನೇಶ್ವರ ಗಾಂವ್ಕರ್ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಬಹಳ ಪುಣ್ಯವಂತರು.ಇAತಹ ತರಬೇತಿಗಳು ಇಂದಿನ ದಿನದಲ್ಲಿ ನಮ್ಮ ಹತ್ತಿರದಲ್ಲೇ ವ್ಯವಸ್ಥೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಿ.ಏ, ಸಿಎಸ್, ಬ್ಯಾಂಕಿAಗ್ ಕ್ಷೇತ್ರದಲ್ಲಿ ಪರೀಕ್ಷೆ ಎದುರಿಸಬಹುದು.ಯಶಸ್ಸು ಗಳಿಸಬಹುದು. ವಿಶ್ವದರ್ಶನ ಶಿಕ್ಷಣ ಸಂಸ್ಥೆ ಈ ಭಾಗದ ಜನರ ಅವಶ್ಯಕ ತರಬೇತಿ ವಿಭಾಗ ಕಾರ್ಯಾರಂಭ ಮಾಡಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಚಾರ್ಟೆಡ್ ಅಕೌಂಟೆAಟ್ ಆದ ಅಶ್ವಿನಿ ಹೆಗಡೆ ಮಾತನಾಡಿ , ಹಿಂದೆ ವಿದ್ಯಾರ್ಥಿಗಳು ಬಲು ದೂರದ ಊರುಗಳಲ್ಲಿ ದುಬಾರಿಯಾದ ಇಂತಹ ತರಬೇತಿ ಪಡೆಯುವುದು ಕಷ್ಟ ಆಗಿತ್ತು. ಆದರೆ ಇಂದು ಯಲ್ಲಾಪುರದ ಸುತ್ತಲಿನ ಜನರಿಗೆ ಪುಣ್ಯದ ದಿನ ಆಗಿದೆ.ಏಕೆಂದರೆ ಈ ಸಂಸ್ಥೆ ಈಗಿನ ಅವಶ್ಯಕ ವ್ಯವಸ್ಥೆ ಇಲ್ಲಿಯೇ ಕಲ್ಪಿಸಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗುವ ಸಾಧ್ಯತೆ ಹೆಚ್ಚಿದೆ ಎಂದರು.
ಸAಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಸಂಸ್ಥೆ ನಮ್ಮ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ತರಬೇತಿ ನೀಡಿ ಅವರ ಬದುಕಿಗೆ ಭದ್ರ ಬುನಾದಿಯನ್ನು ಇಲ್ಲಿಯೇ ಹಾಕಿಕೊಡುವ ಕೆಲಸ ಮಾಡುತ್ತಿದೆ . ಉತ್ತಮ ವ್ಯಕ್ತಿಗಳನ್ನಾಗಿಸಲು ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದೇವೆ.ಇವುಗಳ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆನೀಡಿದರು. ಮಕ್ಕಳಲ್ಲಿ ಕಲಿಯುವ ತುಡಿತ ಇರಬೇಕು.ಸಂಸ್ಥೆಗೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತರಬೇಕು ಎಂದರು.
ಕುಮಾರಿ ವಿನುತಾ ಗಾಂವ್ಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉಪನ್ಯಾಸಕಿ ವಿದ್ಯಾ ಹೆಗಡೆ ಎಲ್ಲರನ್ನೂ ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಪೃಥ್ವಿ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ತರಬೇತಿ ತರಗತಿಗಳ ಕುರಿತು ಉಪನ್ಯಾಸಕ ಸಚಿನ್ ಭಟ್ ಪ್ರಸ್ತಾಪಿಸಿದರು. ಕುಮಾರಿ ಚೇತನಾ ಭಟ್ ವಂದಿಸಿದರು.
ಉಪನ್ಯಾಸಕ ನಾಗರಾಜ ಹೆಗಡೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರಿತು.
ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಉಪಸ್ಥಿತರಿದ್ದರು.
ಪಿ ಯು ಕಾಲೇಜಿನ ಉಪನ್ಯಾಸಕರುಗಳಾದ ನಾಗರಾಜ ಹೆಗಡೆ, ಸಚಿನ್ ಭಟ್, ಕವಿತಾ ಹೆಬ್ಬಾರ,ವಿದ್ಯಾ ಹೆಗಡೆ, ಕರಿಯರ್ ಅಕಾಡೆಮಿ ಕೋ_ ಅರ್ಡಿನೇಟರ್ ಪ್ರಸನ್ನ ಭಟ್ ಹಾಗೂ ಎಲ್ಲಾ ಉಪನ್ಯಾಸಕ ಬಳಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ವರದಿ: ವೇಣುಗೋಪಾಲ ಮದ್ಗುಣಿ, ಯಲ್ಲಾಪುರ

error: