May 21, 2024

Bhavana Tv

Its Your Channel

ಗ್ರಾಮದ ಅಭಿವೃದ್ಧಿ ವಿಚಾರವಾಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಭೇಟಿಯಾಗಿ ಸಮಸ್ಯೆ ಮನವರಿಕೆ ಮಾಡಿದ ಗ್ರಾ.ಪಂ. ಪ್ರತಿನಿಧಿ ಒಕ್ಕೂಟ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಗ್ರಾಮ ಪಂಚಾಯತನ ಕೆಲವೊಂದು ಅಭಿವೃದ್ಧಿಯ ವಿಚಾರವಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿಯವರಾದ ಎಲ್. ಕೆ. ಅತಿಕ್ .ಅವರನ್ನು ಯಲ್ಲಾಪುರ ತಾಲೂಕಿನ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ಎಂ ಕೆ ಭಟ್ ಯಡಳ್ಳಿ ಇವರು ಭೇಟಿಯಾಗಿ, ಯಲ್ಲಾಪುರ ತಾಲೂಕಿನ ಚಂದುಗುಳಿ ಗ್ರಾಮ ಪಂಚಾಯತದ ನಾಲ್ಕು ವಾರ್ಡಿನ ಸಮಸ್ಯೆ ಕುರಿತು ಸವಿಸ್ತಾರವಾಗಿ ಅತಿಕ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಕೂಡಲೇ ತಮ್ಮ ಕಾರ್ಯದರ್ಶಿಯವರನ್ನು ಕರೆದು ಯಾಕೆ ಹೀಗಾಗಿದೆ ಎಂಬುದನ್ನು ವಿಚಾರಿಸಿ ಕೂಡಲೇ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಆದೇಶವನ್ನು ನೀಡಿದರು.

ಹಾಗೆ ಪಂಚಾಯತಕ್ಕೆ ಬಿಡುಗಡೆಯಾದ 15ನೇ ಹಣಕಾಸಿನಲ್ಲಿ ನೀವು ಮೇಲಿಂದಲೇ ಕಡಿತಗಳನ್ನ ಹಾಕಿ ಕಳಿಸುವುದರಿಂದ ನಮಗೆ ಅಭಿವೃದ್ಧಿಗೆ ಕುಂಠಿತವಾಗುತ್ತಿದೆ . ಹಾಗೆ ಅನುದಾನವು ಕೂಡ ಕಡಿಮೆ ಬರ್ತಾ ಇದೆ. ಅಲ್ಲದೆ ಪಂಚಾಯತವನ್ನು ರಚನೆ ಮಾಡುವಾಗ 10 ಕಿ.ಮೀ ವ್ಯಾಸವನ್ನ ಇಟ್ಟು ರಚನೆ ಮಾಡಿರುತ್ತೀರಿ. ಆದರೆ ಅನುದಾನವನ್ನ ಹಂಚುವಾಗ ಜನಸಂಖ್ಯೆ ಆಧಾರದ ಮೇಲೆ ಬಿಡುಗಡೆ ಮಾಡುತ್ತೀರಿ. ಕಾರಣ ಹತ್ತು ಕಿಲೋಮೀಟರ್ ವ್ಯಾಸದಲ್ಲಿ ರಚನೆಯಾದಂತಹ ಪಂಚಾಯಿತಗಳಿಗೂ ಕೂಡ ಸಮ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕು.
ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲಿ 1 ಕಿ.ಮೀ ರಸ್ತೆಯನ್ನು ಮಾಡಿದರೆ ಒಂದು ಮನೆ ಸಿಗಬಹುದು.
ಅದೇ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಒಂದು ಕಿಲೋಮೀಟರ್ ರಸ್ತೆ ಮಾಡಿದರೆ 100 ಮನೆ ಸಿಗಬಹುದು. ಆದರೆ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಮೂಲ ಸೌಕರ್ಯವನ್ನು ಒದಗಿಸುವುದು ಪಂಚಾಯತದ ಜವಾಬ್ದಾರಿ ಕೆಲಸವಾದ್ದರಿಂದ ,ಅಲ್ಲಿಯೂ ಕೂಡ ಹಣವನ್ನು ವಿನಿಯೋಗಿಸ ಬೇಕಾಗುತ್ತದೆ .
ಹಾಗಾಗಿ ಎಲ್ಲ ಪಂಚಾಯತಗಳಿಗೂ ಅನುದಾನವನ್ನು ಸಮಪ್ರಮಾಣವಾಗಿ ಬಿಡುಗಡೆ ಮಾಡಬೇಕೆಂದು ಕೇಳಲಾಯಿತು. ಹಾಗೆ ಪಂಚಾಯತಕ್ಕೆ ಹೆಚ್ಚಿನ ಅನುದಾನವನ್ನು ನೀಡುವ ಬಗ್ಗೆ ಪ್ರಸ್ತಾವನೆ ಇಟ್ಟಾಗ ಚುನಾವಣೆ ಬಂದಿರುವುದರಿAದ ಎಲ್ಲ ರಾಜಕಾರಣಿಗಳ ತಮ್ಮ ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹಣವನ್ನು ಕೊಡುವುದಕ್ಕೆ ಸಾಕಾಗುವುದಿಲ್ಲ ಎಂಬ ವಿಚಾರವನ್ನು ಕೂಡ ಪ್ರಸ್ತಾಪಿಸಿದರು.
ಮುಂದಿನ ತಿಂಗಳದಲ್ಲಿ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ದಿಂದ ಜಿಲ್ಲಾ ಮಟ್ಟದ ಚುನಾಯಿತ ಗ್ರಾಮ ಪ್ರತಿನಿಧಿಗಳ ಕಾರ್ಯಾಗಾರವನ್ನ ಇಟ್ಟುಕೊಳ್ಳುತ್ತೇವೆ. ತಾವು ಉದ್ಘಾಟನೆಗೆ ಬರಬೇಕೆಂದು ಕೇಳಿಕೊಂಡಾಗ ,ಪ್ರೀತಿಯಿಂದ ಬರುವುದಾಗಿ ತಿಳಿಸಿದರು.
ಹಾಗೆ ಉದ್ಯೋಗ ಖಾತ್ರಿಯಲ್ಲಿ 20 ಕೆಲಸಗಳನ್ನು ಮಾತ್ರ ಮಾಡಬೇಕೆಂಬ ಆದೇಶವಿರುವುದರಿಂದ ಅಭಿವೃದ್ಧಿಯು ಕೂಡ ಕುಂಠಿತ ಆಗ್ತಾಯಿದೆ 20 ಕೆಲಸಗಳನ್ನ ಮಾಡಬೇಕೆಂಬ ಆದೇಶಗಳನ್ನು ರದ್ದುಪಡಿಸಬೇಕೆಂದು ಕೇಳಿಕೊಂಡರು

error: