May 22, 2024

Bhavana Tv

Its Your Channel

ಹುಬ್ಬಳಿ-ಅಂಕೋಲಾ ರೈಲು ಯೋಜನೆಗೆ ಸ್ಪಂದಿಸಿದ ಕೇಂದ್ರ ಸರ್ಕಾರ , ಸೆಪ್ಟೆಂಬರ್.26, 27, 28 ಜಿಲ್ಲೆಗೆ ತಜ್ಞರ ತಂಡ ಭೇಟಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಸೆಪ್ಟೆಂಬರ್.24 : ಹುಬ್ಬಳಿ-ಅಂಕೋಲಾ ರೈಲು ಯೋಜನೆ ಶೀಘ್ರದಲ್ಲಿ ಜಾರಿಗೆ ಬರಬೇಕೆಂಬ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂಧಿಸಿ ಕೇಂದ್ರ ಸರ್ಕಾರ ತಜ್ಞರ ತಂಡ ರಚಿಸಿ ಜಿಲ್ಲೆಗೆ ಇದೇ ಸೆಪ್ಟೆಂಬರ್.26, 27, 28 ರಂದು ಕಳಿಸುತ್ತಿದೆ. ಆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲರು ಒಗ್ಗಟ್ಟಿನಿಂದ ಈ ಯೋಜನೆಯ ಪರವಾಗಿ ಹಕ್ಕೊತ್ತಾಯ ಮಾಡಲು ಸೆಪ್ಟೆಂಬರ್.28 ರಂದು ಕಾರವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬರಬೇಕೆಂದು ಹೋರಾಟ ಸಮಿತಿಯ ಅಧ್ಯಕ್ಷ ರಾಮು ನಾಯ್ಕ ವಿನಂತಿಸಿದ್ದಾರೆ.

ಅವರು ಸೆಪ್ಟೆಂಬರ್.24 ರಂದು ಅಡಿಕೆ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಸೆಪ್ಟೆಂಬರ್.27 ರಂದು ಬೆಳಿಗ್ಗೆಯಿಂದ ಮಧ್ಯಾನದವರೆಗೆ ಅಂಕೋಲಾದಲ್ಲಿ, ಯಲ್ಲಾಪುರದಲ್ಲಿ ಮಧ್ಯಾಹ್ನ ಮಾರ್ಗಪರಿಶೀಲನೆ ನಡೆಸಲಿದ್ದಾರೆ. ಆ ಸಂಧರ್ಭದಲ್ಲಿ ನಮ್ಮ ಹಕ್ಕೋತ್ತಾಯವನ್ನು ಯಲ್ಲಾಪುರದಲ್ಲಿ ಮತ್ತು ಕಾರವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಈ ಯೋಜನೆ ಜಾರಿಯಾಗುವುದು ನಿಶ್ಚಿತ ಎಂಬ ವಾತಾವರಣ ನಿರ್ಮಾಣವಾಗುವುದರಿಂದ ಕೆಲ ವಿಘ್ನ ಸಂತೋಷಿಗಳು ಕಳವಳಗೊಂಡಿದ್ದಾರೆ. ಕದ್ದುಮುಚ್ಚಿ ಫೇಸ್‌ಬುಕ, ವಾಟ್ಸ್ ಆ್ಯಫ್ ಗಳಲ್ಲಿ ಈ ಯೋಜನೆಗಳ ಕುರಿತು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಇವರು ಅಭಿವೃದ್ಧಿಯ ವಿರೊಧಿಗಳು ಎನ್ನುವುದರಲ್ಲಿ ಅನುಮಾನವಿಲ್ಲ. ನಮ್ಮ ಹಾಗೆ ನೇರವಾಗಿ ಎದುರಿಗೆ ಬಾರದೆ ತೆರೆಮರೆಯಲ್ಲಿ ಗೊಂದಲ ಸೃಷ್ಟಿಸಿ ಸ್ವಾರ್ಥತೆಯಿಂದ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಜನ ಮಾನ್ಯತೆ ನೀಡಬಾರದು ಎಂದರು.
ಈಗಾಗಲೇ ಯಲ್ಲಾಪುರದಿಂದ ಸಂಘ ಸಂಸ್ಥೆಗಳು ಯೋಜನೆಯ ಪರವಾಗಿ ಲಿಖಿತವಾಗಿ ಬೇಡಿಕೆ ಸಲ್ಲಿಸಿ ಹಕ್ಕೋತ್ತಾಯ ಮಾಡಿವೆ. ಯಲ್ಲಾಪುರದ ಜಿಲ್ಲಾ ಮಟ್ಟದ (ಅ.13 ರ) ಸಭೆಯ ನಿರ್ಣಯದಂತೆ ಕೇಂದ್ರ ಸಚಿವ ಪ್ರಲ್ಲಾದ ಜೋಷಿಯವರನ್ನು ಬೇಟಿಯಾಗಿ ಬೆಡಿಕೆ ಸಲ್ಲಿಸಿದ್ದೆವೆ ಎಂದ ಅವರು, ಈ ತಂಡ ಸೆಪ್ಟೆಂಬರ್. 29, 30 ರಂದು ಧಾರವಾಡ ಜಿಲ್ಲೆಯಲ್ಲಿ ಅಧ್ಯಯನ ಮಾಡಲಿದ್ದಾರೆ, ಜಿಲ್ಲಾಮಟ್ಟದಲ್ಲಿ ರಮಾನಂದ ನಾಯಕ, ರಾಜೀವ್ ಗಾಂವ್ಕರ, ಜಾರ್ಜ ಫರ್ನಾಂಡಿಸ ಮುಂತಾದವರು ಈ ಯೋಜನೆಯ ಬಗ್ಗೆ ಹೊರಾಟ ನಡೆಸುತ್ತಿದ್ದಾರೆ. ನಾವೆಲ್ಲ ಅವರ ಜೊತೆ ಕೈ ಜೊಡಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಬೀರಣ್ಣ ನಾಯ್ಕ ಮೋಗಟಾ, ವೇಣುಗೋಪಾಲ ಮದ್ಗುಣಿ, ಎಂ.ಡಿ.ಮುಲ್ಲಾ, ಮಾಧವ ನಾಯ್ಕ, ಜಗನ್ನಾಥ ರೇವಣಕರ, ಮಾಲತೇಶ್ ಗೌಳಿ ಉಪಸ್ಥಿತರಿದ್ದರು.

error: