May 21, 2024

Bhavana Tv

Its Your Channel

ಮರ್ಚಂಟ್ಸ್ ಕೋ ಆಪ್ ಕ್ರೇಡಿಟ್ ಸೊಸೈಟಿಗೆ 12.75 ಲಕ್ಷ ರೂ ಲಾಭ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಯಲ್ಲಾಪುರದ ಮರ್ಚಂಟ್ಸ್ ಕೋ ಆಪ್ ಕ್ರೇಡಿಟ್ ಸೊಸೈಟಿ ಪ್ರಸ್ತುತ ವರ್ಷ 6 ಕೋಟಿ 63 ಲಕ್ಷ 32 ಸಾವಿರಕ್ಕೂ ಹೆಚ್ಚು ವ್ಯವಹಾರ ನಡೆಸಿ, 12 ಲಕ್ಷ 75 ಸಾವಿರ 565 ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಸುಬ್ರಾಯ ಎಂ ಭಟ್ ಮೂಲೆಗುಂಡ್ಕಲ್ ಹೇಳಿದರು.
ಅವರು ಸೊಸೈಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸಂಘವು 37 ಲಕ್ಷ 23 ಸಾವಿರ 700 ರೂಪಾಯಿ ಶೇರು ಧನವನ್ನು ಹೊಂದಿದ್ದು, 33 ಲಕ್ಷ 39 ಸಾವಿರ 149 ರೂಪಾಯಿ ಕಾಯ್ದಿಟ್ಟ ನಿಧಿ ಹೊಂದಿದೆ. 85 ಲಕ್ಷ 75 ಸಾವಿರ 209 ರೂಪಾಯಿ ಇತರೇ ನಿಧಿ, 4 ಕೋಟಿ 24 ಲಕ್ಷ 54 ಸಾವಿರ 523 ರೂಪಾಯಿ ಠೇವು ಹೊಂದಿದೆ. 3 ಕೋಟಿ 75 ಲಕ್ಷ 32 ಸಾವಿರ 919 ರೂಪಾಯಿ ಗುಂತಾವಣೆ ಮಾಡಲಾಗಿದೆ. ಸಂಘದ ದುಡಿಯುವ ಬಂಡವಾಳವು 6 ಕೋಟಿ 7 ಲಕ್ಷ 80 ಸಾವಿರ 681 ರೂಪಾಯಿ ಇರುತ್ತದೆ ಎಂದು ವಾರ್ಷಿಕ ವ್ಯವಹಾರದ ಕುರಿತು ಮಾಹಿತಿ ನೀಡಿದರು.
ಸಂಘವು ತನ್ನ ಸ್ವಂತ ಭಂಡವಾಳದ ಮೂಲಕ ಚಿಕ್ಕ ವ್ಯವಹಾರಸ್ತರಿಗೆ ವಿವಿದ ರಿತಿಯ ಆರ್ಥಿಕ ಸೌಲಭ್ಯ ಕಲ್ಪಿಸುತ್ತಿದ್ದು, ಯಾವುದೇ ಬ್ಯಾಂಕುಗಳಿAದ ಸಾಲ ಪಡೆದಿಲ್ಲ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹಾಗೂ ಇತರೆಡೆಗಳಲ್ಲಿ ಶಾಖೆ ತೆರೆಯುವುದರೊಂದಿಗೆ, ವಿವಿಧ ನಮೂನೆಯ ಉದ್ಯೋಗಗಳನ್ನು ಆರಂಭಿಸುವ ಯೋಜನೆ ಹೊಂದಿದ್ದೇವೆ. ಸ್ವಂತ ಕಟ್ಟಡ ಹೊಂದಲು ಕಟ್ಟಡ ನಿಧಿಯನ್ನು ಮಾಡಿದ್ದೆವೆ. ಲಾಭದಲ್ಲಿ ಶೇಕಡಾ 8 ರಷ್ಟು ಡಿವಿಡೆಂಡ್ ನೀಡಲಾಗುವುದು.
ಈ ಸಂದರ್ಭದಲ್ಲಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ನಾಗರಾಜ ಮದ್ಗುಣಿ, ಉಪಾಧ್ಯಕ್ಷ ವೇದವ್ಯಾಸ ಹೆಗಡೆ, ನಿರ್ದೇಶಕರುಗಳಾದ ಸಂತೋಷ ಗುಡಿಗಾರ, ಗಣಪತಿ ಬೋಳ್ಗುಡ್ಡೆ, ವೀಣಾ ಯಲ್ಲಾಪುರಕರ, ಪುಂಡ್ಲಿಕ್ ಶೆಟ್ಟಿ ಹಾಗೂ ಇಂದ್ರಜೀತ ಮಹಾಲೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

error: