April 27, 2024

Bhavana Tv

Its Your Channel

ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ – ವಿವೇಕ ಹೆಬ್ಬಾರ

ಯಲ್ಲಾಪುರ : ಮಾತೃಭೂಮಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ತಾಲೂಕಿನ ಸುಮಾರು 70 ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ ಮತ್ತು ಖ್ಯಾತ ಕ್ರೀಡಾಪಟು ಜಿ.ಎಂ.ತಾAಡುರಾಯನ್ ಅವರಿಗೆ 25 ಸಾವಿರ ಬೆಲೆಯ ಅಂತಾರಾಷ್ಟ್ರೀಯ ಗುಣಮಟ್ಟದ ಬಿಲ್ಲು-ಬಾಣ ವಿತರಣೆ ಮಾಡಲಾಯಿತು.
ದೀಪ ಬೆಳಗಿ ಕಾರ್ಯಕ್ರಮನ್ನು ಉದ್ಘಾಟಿಸಿದ ಯುವ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ವಿವೇಕ ಹೆಬ್ಬಾರ, ಪ್ರತಿಯೊಬ್ಬ ನಾಗರಿಕ ನ ಮೇಲೂ ಸಮಾಜದ ಋಣವಿರುತ್ತದೆ. ಈ ಋಣ ತೀರಿಸುವ ಕೈಂಕರ್ಯದಲ್ಲಿ ತಾವು ಹುಟ್ಟಿ ಬೆಳೆದ ಊರಿಗೆ, ನಾಡಿಗೆ ಏನನ್ನಾದರೂ ಒಳ್ಳೆಯದನ್ನು ಮಾಡುವ ಮನೋಭಾವ ಯುವಕರಲ್ಲಿ ಮೂಡಿದಾಗ ಅಂಥ ಸಮಾಜ ಉದ್ಧಾರವಾಗಲು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು
ಈ ದಿಸೆಯಲ್ಲಿ ತಮ್ಮ ಸಂಸ್ಥೆ ಹಲವು ವರ್ಷಗಳಿಂದ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ವಿವರ ನೀಡಿದರು. ಇದೇ ಸಂದರ್ಭದಲ್ಲಿ ವಿವೇಕ ಹೆಬ್ಬಾರ ಮಾತೃಭೂಮಿ ಸಂಸ್ಥೆಗೆ ಒಂದು ಲಕ್ಷ ರೂ.ದೇಣಿಗೆ ನೀಡುವದಾಗಿ ಘೋಷಿಸಿದರು.
ಕ್ರೀಡಾಪಟು ಜಿ.ಎಂ.ತಾAಡುರಾಯನ್ ಜೀವನದಲ್ಲಿ ಪರಿಶ್ರಮದ ಅಗತ್ಯತೆಯನ್ನು ಒತ್ತಿ ಹೇಳಿ ಕ್ರೀಡೆಯಲ್ಲಿ ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡುವದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ಪ್ರಾಂಶುಪಾಲ ಡಿ.ಎಸ್.ಭಟ್ಟ, ವಿದ್ಯಾರ್ಥಿ ವೇತನ ಹಣವನ್ನು ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು. ಇನ್ನೋರ್ವ ಅತಿಥಿ ಚಾರ್ಟರ್ಡ ಅಕೌಂಟAಟ್ ವಿಘ್ನೇಶ್ವರ ಗಾಂವಕರ ವಿದ್ಯಾರ್ಥಿಗಳು ತಮಗೆ ಸಮಾಜದಲ್ಲಿ ದೊರೆಯುವ ಅವಕಾಶಗಳ ಸಹಾಯದಿಂದ ಜೀವನ ದಲ್ಲಿ ಗುರಿ ತಲುಪುವಂತೆ ಕರೆ ನೀಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಮಾತೃಭೂಮಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ಈ ಹಿನ್ನೆಲೆಯಲ್ಲಿ ಮಾತೃಭೂಮಿ ಸಂಸ್ಥೆಯೊAದಿಗೆ ವಿದ್ಯಾರ್ಥಿಗಳು ನಿರಂತರ ಸಂಪರ್ಕ ಸಾಧಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಟಾನದ ವಿದ್ಯಾರ್ಥಿ ಘಟಕ ಅಸ್ತಿತ್ವಕ್ಕೆ ಬಂದಿದೆ ಎಂದು ಘೋಷಿಸಿದ ಶ್ರೀರಂಗ ಕಟ್ಟಿಯವರು ಸಂಸ್ಥೆಯ ಬ್ಯಾನರ್ ನ್ನು ಘಟಕದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪೂರ್ವಿ ಎಸ್.ಕೆ. ( ರಾಜ್ಯಕ್ಕೆ 4ನೇ ರ‍್ಯಾಂಕ್), ಶ್ರೀಧರ ಭಟ್ ( 8ನೆ ರ‍್ಯಾಂಕ್) ಮತ್ತು ಶಶಾಂಕ ಸಭಾಹಿತ ( 8ನೇ ರ‍್ಯಾಂಕ್) ಇವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಮೃತಾ ಹೆಬ್ಬಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಹೇಶ ಗೌಳಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಿ.ಜಿ.ತಾಪಸ ಮತ್ತು ಮಹೇಂದ್ರಕುಮಾರ, ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು. ಸ್ನೇಹಾ ಆಚಾರಿ ವಂದಿಸಿದರು. ಡಾ.ರವಿ ಭಟ್ಟ ಬರಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

error: