April 26, 2024

Bhavana Tv

Its Your Channel

ಮಲೇರಿಯಾ ಕುರಿತು ಪತ್ರಕರ್ತರಿಗೆ ಪ್ರಚಾರ ನಿಮಿತ್ಯ ತರಬೇತಿ ಕಾರ್ಯಕ್ರಮ.

ವಿಜಯಪುರ ; ಜಿಲ್ಲೆಯ ಇಂಡಿ ಪಟ್ಟಣದ ತಾಲೂಕ ಆರೊಗ್ಯ ಅಧಿಕಾರಿಗಳ ಕಛೇರಿಯ ಸಭಾ ಭವನದಲ್ಲಿ ರಾಷ್ರ‍್ಟೀಯ ರೋಗವಾಹಕ ಆಶ್ರಿತ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಮಲೇರಿಯಾ ಕುರಿತು ಪತ್ರಕರ್ತರಿಗೆ ಪ್ರಚಾರ ನಿಮಿತ್ಯ ನಡೆದ ತರಬೇತಿ ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಮಾತನಾಡಿ. ಡೆಂಗ್ಯೂ ರಕ್ತದ ಸಂಗ್ರಹ ೨೩೮ ಜನರಿಗೆ ಮಾಡಲಾಗಿದ್ದು ಅದರಲ್ಲಿ ಖಚಿತ ಪ್ರಕರಣ ೧೬ ಚಿಕನಗುನ್ಯಾ ಬಂದಿದ್ದು, ತಾಲೂಕಿನಲ್ಲಿ ನೆರೆಹಾವಳಿ ಬಂದಾಗ ರೋಗ ತಡೆಯಲು ೨೦೦೦ ಸೊಳ್ಳೆ ಪರದೆ ಹಂಚಿರುವದಾಗಿ ಕುಲಕರ್ಣಿ ತಿಳಿಸಿದರು. ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಬಿ ಎಮ್ ಬಿಳಗಿ. ಹಿರಿಯ ಆರೋಗ್ಯ ನೀರಿಕ್ಷಕ ವಿ ಎಸ್ ಬಂಡಿ ಶಿವಾನಂದ ಬಮ್ಮನಹಳ್ಳಿ ಸುನಂದಾ ಅಂಬಲಗಿ ಮಲೇರಿಯಾ ನಿಯಂತ್ರಣದ ಕುರಿತು ತರಬೇತಿ ನೀಡಿ ಮಾತನಾಡಿ ಪತ್ರಿಕಾ ಮೀತ್ರರರು ಹಾಗೂ ದ್ರಶ್ಯ ಮಾಧ್ಯಮ ಮಿತ್ರರರು ಮಲೇರಿಯಾ ಮಾಸಾಚರಣೆ ಪ್ರಚಾರ ನೀಡಿದರೆ ನಿಯಂತ್ರಣ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಡಾ. ಅರ್ಚನಾ ಕುಲಕರ್ಣಿ.ಡಿ ಎಸ್ ಕರ್ಜಗಿ. ಸುನಂದಾ ಅಂಬಲಗಿ.ವಿರುಪಾಕ್ಷಿ ಬಂಡಿ.ಶಿವಾನAದ ಬೊಮ್ಮನಹಳ್ಳಿ ಎನ್ ಎಂ ನಿಡಗುಂದಿ.ಪತ್ರಿಕಾ ವರದಿಗಾರರು ದ್ರಶ್ಯ ಮಾಧ್ಯಮ ವರದಿಗಾರರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ ಬಿ ಎಸ್ ಹೊಸೂರ.ಇಂಡಿ

error: