May 18, 2024

Bhavana Tv

Its Your Channel

ಇಂಡಿ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ನಡೆದ ಕಾರ ಹುಣ್ಣಿಮೆ ಸಂಭ್ರಮ

ವಿಜಯಪೂರ ಜಿಲ್ಲೆ ಇಂಡಿ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ನಡೆದ ಕಾರ ಹುಣ್ಣಿಮೆ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ ಹುಣ್ಣಿಮೆ ವಿಶೇಷತೆ ಏನೆಂದರೆ:- ಮುಂಗಾರು ಪ್ರಾರಂಭ ನಂತರ ರೈತರು ಮೊಟ್ಟಮೊದಲು ಆಚರಿಸುವ ಹಬ್ಬ ಎಂದರೆ ಅದು ಕಾರ ಹುಣ್ಣಿಮೆ ಹಬ್ಬವಾಗಿದೆ. ಜನರು ಎತ್ತುಗಳಿಗೆ ಬಣ್ಣ ಹಚ್ಚಿ, ಶೃಂಗಾರ ಮಾಡಿ ಎತ್ತುಗಳನ್ನು ಪೂಜೆ ಮಾಡುತ್ತಾರೆ.
ರೈತನಿಗೆ ಬಿತ್ತಲು ಬೆನ್ನೆಲುಬು ಆಗಿರುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಇದಾಗಿದೆ. ಎತ್ತುಗಳನ್ನು & ಹೋರಿಗಳನ್ನು ಬಣ್ಣ ಬಣ್ಣಗಳಾಗಿ ಅಲಂಗಿಕೃತವಾಗಿ ಶೃಂಗಾರ ಮಾಡಲಾಗುತ್ತದೆ. ಹೋಳಿಗೆ & ಇನ್ನಿತರ ಸಿಹಿ ತಿಂಡಿ ಗಳನ್ನೂ ಮಾಡಿ ಎತ್ತುಗಳಿಗೆ ನೈವಿದ್ಯ ಮಾಡಿ ಎತ್ತುಗಳಿಗೆ ಬಾಯಲ್ಲಿ ಹೋಳಿಗೆ ತಿನಿಸಿ ಸಂಭ್ರಮಿಸುತ್ತಾರೆ ಹಳ್ಳಿಯ ಜನ.

ಗ್ರಾಮೀಣ ಭಾಷೆಯಲ್ಲಿ:- ಕಾರ ಹುಣ್ಣಿಮೆ ಕರ್ಕೊಂಡು ಹೋದರ ಯುಗಾದಿ ಇಟ್ಕೊಂಡು ಹೋಯಿತು;
ಎಂದು ಹಿರಿಯರು ಗಾದೆ ಮಾತಿನ ಮೂಲಕ ಹೇಳುತ್ತಾರೆ.ಈ ಗಾದೆ ಮಾತಿನ ಅರ್ಥ ಏನೆಂದರೆ’ ಕಾರ ಹುಣ್ಣಿಮೆ ಯಿಂದ ಪ್ರಾರಂಭವಾಗುವ ಹಬ್ಬಗಳ ಸಾಲು ಯುಗಾದಿಗೆ ಮುಕ್ತಾಯ ವಾಗುತ್ತವೆ ಎನ್ನಲಾಗಿದೆ.ನಮ್ಮ ಗ್ರಾಮೀಣ ಭಾಗದಲ್ಲಿ & ಅನೇಕ ಕಡೆ ಕರಿ ಹರಿಯುವ ಸಂಪ್ರದಾಯ ಸಂಸ್ಕೃತಿ ಇದೆ.

ಕರಿ ಹರಿಯುವ ಸಂಪ್ರದಾಯ ಅಂದರೆ: ಎತ್ತುಗಳ ಓಟದ ಸ್ಪರ್ಧೆ ಹಳ್ಳಿಯ ಪದ್ಧತಿಯಲ್ಲಿ ದೊಡ್ಮನೆ & ಗೌಡರ ಎತ್ತುಗಳನ್ನು ಅವರ ಮನೆಯಿಂದ ಹಲಗೆ, ತಮಟೆ ಬಾರಿಸುವ ಮೂಲಕ ಶೃಂಗಾರ ಮಾಡಿದ ಎತ್ತುಗಳನ್ನು ಕರೆದುಕೊಂಡು ಊರಿನ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮೂಲಕ ಊರಿನ ಅಗಸಿಗೆ ಬಂದು ಅಗಸಿಯಲ್ಲಿ ಬೇವಿನ ಮರದ ತೋರಣವನ್ನು ಕಟ್ಟಿ ಅಲ್ಲಿ ಮುತ್ತೈದೆಯರು ಪೂಜೆ ಮಾಡಿ ನೈವಿದ್ಯ ಮಾಡಿ , ಕಾಯಿ ಒಡೆದಾಗ ಜನರು ಕೂಗು , ಅಲಗೆ ಸಪ್ಪಳ ಮಾಡಿದಾಗ ಎತ್ತುಗಳು ಓಡಲು ಪ್ರಾರಂಭಿಸುತ್ತವೆ. ಆ ಓಡಿದ ಎತ್ತುಗಳಲ್ಲಿ ಹಿಂಗಾರು ಮತ್ತು ಮುಂಗಾರು ಎಂದು ಪರಿಗಣಿಸುತ್ತಾರೆ ಹಳ್ಳಿಯ ಜನತೆ.

(ವರದಿ: ಬಿ ಎಸ್ ಹೊಸೂರ)

error: