May 17, 2024

Bhavana Tv

Its Your Channel

ಆಲಮಟ್ಟಿ ಆಣೆಕಟ್ಟೆಯಿಂದ ಇಂಡಿ ಕಾಲುವೆಗೆ ನೀರು ಬೀಡಲು ಜೆಡಿಎಸ್ ಆಗ್ರಹ.

ವಿಜಯಪೂರ; ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದು. ಮಹಾರಾಷ್ಪ್ರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ಇದರಿಂದ ಆಲಮಟ್ಟಿ ಆಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು. ಇನ್ನು ಇಂಡಿ ಕಾಲುವೆಗೆ ನೀರು ಹರಿಸದೆ ಇರುವುದರಿಂದ, ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳಾದ ರಾಹುಲ್ ಶಿಂದೆ ಅವರಿಗೆ ಮನವಿ ಸಲ್ಲಿಸಿದರು.


ಮನವಿ ಸಲ್ಲಿಸಿ ಬಿ ಡಿ ಪಾಟೀಲ ಮಾತನಾಡಿ ಇಂಡಿ ತಾಲ್ಲೂಕಿನಲ್ಲಿ ಮಳೆ ಕಡಿಮೆ ಪ್ರಮಾಣ ಇದ್ದು, ರೈತರು ಈಗಾಗಲೇ ೧೦,೧೫, ದಿನಗಳ ಹಿಂದೆ ಬಿತ್ತನೆ ಮಾಡಿ.ಮಳೆ ಹಾಗೂ ಕಾಲುವೆ ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಕೂಡಲೆ ಸಂಭAದ ಪಟ್ಟ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ. ನೀರು ಬಿಡಲು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಂಜು ಕಾಮಗೋಂಡ, ಸಿದ್ದು ಡಂಗಾ, ಮಹಿಬೂಬ ಬೇವನೂರ, ಬಾಳು ರಾಠೋಡ,ಮಜಿದ್ ಸೌದಾಗರ,ಖಲಿಲ ತೋಳನೂರ,ಪಜಲು ಮುಲ್ಲಾ,ಹೂವಣ್ಣಾ ಪೂಜಾರಿ, ಸಂತೋಷ ರಾಠೋಡ,ರವಿ ಶಿಂಧೆ,ನಾಗಪ್ಪ ಪೂಜಾರಿ, ರಫೀಕ್ ಸೋಡೆವಾಲೆ,ಅಬುಬಕರ ತಾಂಬೋಳಿ,ಕೀಷನ ರಾಠೋಡ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಬಿ ಎಸ್ ಹೊಸೂರ.

error: