May 18, 2024

Bhavana Tv

Its Your Channel

ವಿಜಯಪೂರ ಪದವಿ ಕಾಲೇಜಿನಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ

ವಿಜಯಪೂರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಸರ್ಕಾರದ ಉದ್ದೇಶ ಸದುಪಯೋಗಪಡಿಸಿ ಕೊಳ್ಳಲು ಶಾಲಾ-ಕಾಲೇಜುಗಳು ಮುಂದೆ ಬರಬೇಕು ಎಂದು ಡಾ ಪ್ರಶಾಂತ್ ಧೂಮಗೊಂಡ ಹೇಳಿದರು

ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಇಂಡಿ,ಆರೋಗ್ಯ ಕೇಂದ್ರ ಚಿಕ್ಕಬೇವನೂರ ಹಾಗೂ ಪಟ್ಟಣದ ಜಿಆರ್ ಗಾಂಧಿ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪದವಿ ಡಿಗ್ರಿ ಕಾಲೇಜ್ ವಿದ್ಯಾರ್ಥಿಳಿಗೆ ಕೋವಿಡ್ ೧೯ ಅಭಿಯಾನ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯದAತೆ ಬೌದ್ಧಿಕಮಟ್ಟ ಹೆಚ್ಚಳವಾಗಲು ನಿರಂತರ ಅಧ್ಯಯನ ಅಭ್ಯಾಸ ತರಗತಿಗಳ ಅಧ್ಯಯನಕ್ಕೆ ಲಸಿಕೆ ಪ್ರಾಮುಖ್ಯತೆವಾಗಿದೆ ಕಾಲೇಜು ಸಂಘ ಸಂಸ್ಥೆಯ ಸಹಕಾರ ಅಗತ್ಯವೆಂದು ಮನವಿ ಮಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ ಎಂ ಪೂಜಾರಿ ಮಾತನಾಡಿ ಲಸಿಕೆ ಪಡೆಯುವುದರಿಂದ ಸಾವನ್ನಪ್ಪುತ್ತಿದ್ದಾರೆ ಎಂದು ತಪ್ಪು ಸಂದೇಶ ಕಿಡಿಗೇಡಿಗಳು ತಪ್ಪು ತಿಳುವಳಿಕೆಯಿಂದ ರವಾನೆ ಮಾಡುತ್ತಿದ್ದಾರೆ ಗ್ರಾಮೀಣ ಭಾಗದಲ್ಲಿ ಕೆಲವು ಕಡೆಗೆ ಗಾಳಿ ಸುದ್ದಿ ಮಾತುಗಳಿಂದ ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಕೊಳ್ಳಲು ತಪ್ಪು ತಿಳುವಳಿಕೆಯಿಂದ ಜನ ಹಿಂದೇಟು ಹಾಕುತ್ತಿದ್ದಾರೆ ಆದರೆ ಲಸಿಕೆ ಪಡೆದ ನಂತರ ಜ್ವರ ಮೈಕೈ ನೋವು ತಲೆನೋವು ಸುಸ್ತು ಕೆಲವರಿಗೆ ಆಗಿದ್ದರೆ ಇನ್ನು ಕೆಲವರಿಗೆ ಆಗಿರುವುದಿಲ್ಲ ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಲಸಿಕೆ ಪಡೆದ ನಂತರ ತಮ್ಮ ಕುಟುಂಬದ ೧೮ ವರ್ಷ ಮೇಲ್ಪಟ್ಟ ಎಲ್ಲ ಸದಸ್ಯರಿಗೆ ಲಸಿಕೆ ಹಾಕಿಸಿ ಜೀವ ಉಳಿಸಿ ಪ್ರಾಣಾಪಾಯವಿಲ್ಲವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ಎಸ್ ಬಿ ಜಾದವ. ರಾಥೋಡ, ಆರೋಗ್ಯ ಎಸ್‌ಎಚ್ ಪತ್ತಾರ. ಎಸ್‌ಎಚ್ ಅತನೂರ ಅಶೋಕ ಬಿರಾದಾರ, ರಾಜು ಬೂದಿಹಾಳ. ಶ್ರೀಮಂತ ಬಡಿಗೇರ, ಶಿವು , ಶೇಕ. ಭುವನೇಶ್ವರಿ. ಮಹಾರಾಜ ಸೇರಿದಂತೆ ಕಾಲೇಜು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು
ವರದಿ ಬಿ ಎಸ್ ಹೊಸೂರ.

error: