May 18, 2024

Bhavana Tv

Its Your Channel

ಪ್ರೀತು ದಶವಂತ ಜನಸೇವಕ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಪ್ರೀತು ದಶವಂತ ಜನಸೇವಕ ಬಳಗದಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು
ಜನರದ್ವನಿ ಆದಂತಹ ಬಾಪೂರಾಯಗೌಡ. ಮ. ಬಿರಾದಾರ. ಇವರ ೪೬ನೇ ಜನ್ಮದಿನದ ನಿಮಿತ್ತವಾಗಿ ಸಾಮಾಜಿಕ ಕಾರ್ಯಕರ್ತ ಅಹಿಂದ ಸಂಘಟಿತ ಪ್ರೀತು ದಶವಂತ ಉಸ್ತುವಾರಿಯೊಂದಿಗೆ ಬಿ ಎಲ್ ಡಿ ಇ ಆಸ್ಪತ್ರೆಯ ರಕ್ತಭಂಡಾರ ವಿಭಾಗದ ಉಪಸ್ಥಿತಿಯಲ್ಲಿ ವಿಶ್ವಜ್ಞಾನಿ ಗ್ರಂಥಾಲಯ ದಶವಂತ ಸಮುದಾಯ ಭವನದಲ್ಲಿ ಸೋಮವಾರ ಸ್ವಯಂಪ್ರೇರಿತ ಬ್ರಹತ್ ರಕ್ತದಾನ ಶಿಬಿರ ಜರುಗಿತು . ರಕ್ತದಾನ ಶಿಬಿರದಲ್ಲಿ ೩೧ ಜನರು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿದರು. ಪ್ರೀತು ದಶವಂತ ಮಾತನಾಡಿ ರಕ್ತದಾನ ಬಹಳ ಅಮೂಲ್ಯವಾದದ್ದು ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರು ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಶವಾಗಿಲ್ಲ ಕೇವಲ ಮನುಷ್ಶ ಜೀವಿಗಳಿಂದ ರಕ್ತ ಸಂಗ್ರಹಮಾಡಿ ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳ ಜೀವ ಉಳಿಸಬೇಕಾಗಿದೆ ಥಲೇಸಿಮೀಯಾ ಅಂತಹ ರೋಗಿಗಳು ರಕ್ತದಾನಿಗಳನ್ನೆ ಅವಲಂಬಿಸಿರುವದರಿAದ ಜನರು ಸ್ವಯಂಪ್ರೇರಿತರಾಗಿ ಮುಂದೆಬAದು ರಕ್ತದಾನ ಮಾಡುವದರಿಂದ ಜೀವ ಉಳಿಸಲು ಸಾಧ್ಶ ರಕ್ತದಾನವು ಜೀವ ಸಂಜೀವಿನಿ ಇದ್ದಂತೆ ಪ್ರೀತು ದಶವಂತ ಜನಸೇವಕ ಬಳಗದಿಂದ ೫ ವರ್ಷದಲ್ಲಿ ೧೧ ಬಾರಿ ರಕ್ತದಾನ ಶಿಬಿರಗಳು ಆಯೋಜಿಸಿ ೬೫೦ಕ್ಕಿಂತ ಅಧಿಕ ರಕ್ತದಾನಿಗಳಿಂದ ರಕ್ತದಾನ ಮಾಡಲಾಗಿದೆ ಇನ್ನು ಮುಂದೆಯು ಕೂಡ ನಾವು ರಕ್ತದಾನ ಮಾಡಲು ಹಿಂಜರಿಯುವದಿಲ್ಲ ಎಂದು ಹೇಳಿದರು

ವರದಿ ಬಿ ಎಸ್ ಹೊಸೂರ.

error: