May 18, 2024

Bhavana Tv

Its Your Channel

ಹೈಸ್ಕೂಲ್‌ನಲ್ಲಿ ಹೈಟೆಕ್ ಗಣಿತ ಪ್ರಯೋಗಾಲಯ ಹಾಗೂ ಗ್ರಂಥಾಲಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಂದ್ರಶೇಖರ ಪುರ ಗ್ರಾಮದಲ್ಲಿರುವ, ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಟೆಕ್ ಗಣಿತ ಪ್ರಯೋಗಾಲಯ ಹಾಗೂ ಗಣಿತ ವಸ್ತು ಸಂಗ್ರಹಾಲಯ ಇದೆ. ಜೊತೆಗೆ ಅದ್ಭುತವಾದ ಗ್ರಂಥಾ ಭಂಡಾರವೇ ಇದೆ.ಅದರ ಕಾರಣ ಕರ್ತೃ ಅದೇ ಪ್ರೌಢಶಾಲೆಯ ಗಣಿತ ಶಿಕ್ಷಕ ಎನ್.ಶ್ರೀಕಾಂತ ರವರಾಗಿದ್ದು,
ಅವರು ತಮ್ಮ ಕರ್ತವ್ಯದೊಂದಿಗೆ ತಮ್ಮ ಅಗಣಿತ ಸೇವೆಗಳ ಮೂಲಕವೇ ತಮ್ಮನ್ನು ವಿಶೇಷವಾಗಿ ಗುರುತಿಸಿಕೊಡಿದ್ದಾರೆ. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಸರ್ಕಾರ ನಿಯಮಿತವಾದ ಗ್ರಂಥಾಲಯ ಸೌಲಭ್ಯ ಒದಗಿಸಿದೆಯಾದರೂ, ಅದನ್ನ ತಮ್ಮ ಸ್ವಂತ ಹಣದಿಂದ ಹಾಗೂ ತಮ್ಮ ನೂರಾರು ಹಳೇ ವಿದ್ಯಾರ್ಥಿಗಳ ನೆರವಿನಲ್ಲಿ, ಹೈಟೆಕ್ ಗಣಿತ ಪ್ರಯೋಗಾಲಯ ಮತ್ತು ಗಣಿತ ವಸ್ತು ಸಂಗ್ರಹ ಆಲಯವನ್ನಾಗಿ ಪರಿವರ್ತಿಸಿದ್ದಾರೆ.
ನೂರಾರು ಮಾದರಿಯ ಗಣಿತ ಪ್ರಯೋಗ ವಸ್ತು ಗಳನ್ನು ಸಂಗ್ರಹಿಸಿದ್ದಾರೆ,ಮುಗ್ದ ಹಾಗೂ ಮಂಧ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಅರ್ಥೈಸುವಂತಹ ರೀತಿಯಲ್ಲಿ ಗಣಿತ ಮಾದರಿಗಳನ್ನ ಸಂಪಾದಿಸಿರಿಸಿದ್ದಾರೆ.ಅಪರೂಪದ ಲೆಕ್ಕ ಮಾದರಿಗಳ ಪರಿಚಯಿಸಲಾಗಿದೆ ಮತ್ತು ಕೆಲ ಹೊಸ ಹೊಸ ಬಗೆಯ ಗಣಿತ ಪ್ರಯೋಗಗನ್ನ ಪ್ರಸ್ಥುತಪಡಿಸಲಾಗಿದೆ.ಒಟ್ಟಾರೆಯಾಗಿ ಹೊಸತಾದ ವಿನೂತನವಾದ ಗಣಿತ ಲೋಕವನ್ನ, ಕೊಠಡಿಯೊಂದರಲ್ಲಿಯೇ ಶಿಕ್ಷಕ ಶ್ರೀಕಾಂತ್ ಪರಿಚಯಿಸುವಲ್ಲಿ ಯಶಸ್ಸುಕಂಡಿದ್ದಾರೆ.ಅದಕ್ಕಾಗಿ ನಿರತ ಶ್ರಮ ತನು ಮನ ಧನ ಅರ್ಪಿಸಿದ್ದಾರೆ,ಇವರೊಂದಿಗೆ ಮುಖ್ಯೋಪಾಧ್ಯಾಯ ಎಸ್.ಜಗದೀಶ ಹಾಗೂ ಪ್ರಾಧ್ಯಾಪಕ ವರ್ಗದ ಸಹಕಾರವಿದೆ ಎನ್ನುತ್ತಾರೆ ಶಿಕ್ಷಕ ಶ್ರೀಕಾಂತ್.


ಗಣಿತ ಪ್ರಯೋಗಾಲಯ ಹಾಗೂ ಗಣಿತ ವಸ್ತು ಸಂಗ್ರಹಾಲಯ- ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆಯಾಗದಿರಲೆಂದು ನೂರಾರು ಪ್ರಯೋಗ ಮಾದರಿಗಳನ್ನು ಸ್ವತಃ ತಯಾರಿಸಿದ್ದಾರೆ.ಇವರು ಹೈಟೆಕ್ ಗ್ರಂಥಾಲಯ ಹಾಗೂ ಹೈಟೆಕ್ ಗಣಿತ ಪ್ರಯೋಗಾಲಯ ನಿರ್ಮಿಸುವಲ್ಲಿ, ಅವರೊಂದಿಗೆ
ಅವರ ಹಳೇ ವಿದ್ಯಾರ್ಥಿಗಳ ನೆರವಿನ ಹಸ್ತವಿದ್ದು, ಇಲಾಖಾ ಉನ್ನತಾಧಿಕಾರಿಗಳು ಮತ್ತು ಹೈಸ್ಕೂಲ್ ಸಿಬ್ಬಂದಿ ಸಹಕಾರ ಕಾರಣ ಎನ್ನುತ್ತಾರವರು. ಪ್ರೌಢಶಿಕ್ಷಣ ಇಲಾಖಾ ಜಿಲ್ಲಾ ಉಪ ನಿರ್ದೇಶಕರು ಬೇಟಿ ನೀಡಿ ಶಹಭಾಸ್ ಗಿರಿ ನೀಡಿದ್ದರೆ,ತಾಲೂಕು ಶಿಕ್ಷಣಾಧಿಕಾರಿಗಳು ಪ್ರೋತ್ಸಾಹಿಸಿದ್ದಾರೆಂದು ಶ್ರೀಕಾಂತ್ ಅವರನ್ನ ಸ್ಮರಿಸುತ್ತಾರೆ.

ಜ್ಞಾನ ಭಂಡಾರ- ಪ್ರತಿನಾಗರೀಕನಿಗೆ “ಓದು ಕಾಲು ಬುದ್ದಿ ಮುಕ್ಕಾಲು” ಅಗತ್ಯ ಎಂಬುದನ್ನರಿತ ಶಿಕ್ಷಕ ಶ್ರೀಕಾಂತರವರು, ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವಂತ ಸಾಮಾನ್ಯ ಜ್ಞಾನ ಭರಿಸುವಂತಹ,ಜ್ಞಾನ ಭಂಡಾರವನ್ನ ನಿರ್ಮಿಸಿದ್ದಾರೆ.ಎಲ್ಲಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದಂತಹ ಪುಸ್ತಕಗಳನ್ನ,ಸಾಮಾನ್ಯ ಜ್ಞಾನ,ರಾಜ್ಯ ಹಾಗೂ ರಾಷ್ಟ್ರೀಯ ಗಣ್ಯಮಾನ್ಯರ ಜೀವನ ಚರಿತ್ರೆಗಳು,ನಾಡಿನ ಇತಿಹಾಸ,ರಾಜಕಿಯ,ಸರ್ಕಾರಿ ಆಡಳಿತ,ಕಾನೂನು,ಶೈಕ್ಷಣಿಕ,ಸಾಹಿತ್ಯ,ಸಮಾಜ ಸೇವಾ ಕ್ಷೇತ್ರ ಸೇರಿದಂತೆ ವಿವಿದ ಕ್ಷೇತ್ರಗಳ ೫೦೦ಕ್ಕೂ ಹೆಚ್ಚು ದುಭಾರಿ ಪುಸ್ತಕಗಳು.ರಾಷ್ಟ್ರದ ಮಹಾಗ್ರಂಥಗಳನ್ನ ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗುವಂತಹ ೧೦೦೦ರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ಒದಗಿಸುವ ಗುರಿಹೊಂದಿದ್ದಾರೆ ಶಿಕ್ಷಕ ಎನ್.ಎಮ್.ಶ್ರೀಕಾಂತ್. ಜೊತೆಗೆ ಗಣಿತ ಪ್ರಯೋಗಾಲಯವನ್ನು ಬಹು ಅದ್ಭುತವಾಗಿ ನಿರ್ಮಿಸಿದ್ದಾರೆ,
ಸ್ಥಳೀಯ ಯುವಕರ ಹಾಗೂ ಸಂಘ ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಮತ್ತು ಎಸ್.ಡಿ.ಎಮ್.ಸಿಯವರ ಸಹಕಾರವೂ ಇದೆ ಎನ್ನುತ್ತಾರೆ ಶಿಕ್ಷಕ ಶ್ರೀಕಾಂತ್.

ನೂರಾರು ಮಕ್ಕಳ ಸುತ,ಹೃದಯ ಶ್ರೀಮಂತ- ನಲವತ್ತರ ಆಸುಪಾಸಿನ ವಯೋಮಾನದ ಯುವಕ,ಗಣಿತ ಶಿಕ್ಷಕ ಶ್ರೀಕಾಂತ್ ನೂರಾರು ಮಕ್ಕಳ ಸುತ..!? ಅಚ್ಚರಿಯಾದರೂ ಸತ್ಯ, ಮಕ್ಕಳ ತಂದೆ ತಾಯಿ ಮಾಡಬೇಕಾಗಿರುವ ಬಹು ಜವಾಬ್ದಾರಿಯುತ ಕಾರ್ಯವನ್ನು,ಶ್ರೀಕಾಂತ್ ಇವರು ತಮ್ಮ ಮಡದಿ ಗಂಗಮ್ಮನಹಳ್ಳಿಯ ಸ.ಶಾಲೆಯ ಸಹ ಶಿಕ್ಷಕಿ ಆರ್.ಗಾಯತ್ರಿರವರ ಸಹಕಾರದೊಂದೆಗೆ ನಿರ್ವಹಿಸಿದ್ದಾರೆ.ನೂರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನ ದಾಸೋಹದೊಂದಿಗೆ ವಸತಿ ಸೇರಿದಂತೆ,ಅಗತ್ಯ ನೆರವು ನೀಡಿ ವಿದ್ಯಾರ್ಥಿಗಳು ನೌಕರಿ ಪಡೆದು ಗುರಿ ತಲುಪಲು ಇವರು ಕಾರಣರಾಗಿದ್ದಾರೆ.ಇದಕ್ಕೆಲ್ಲಾ ತಮ್ಮ ತಾಯಿ ದಿವಂಗತ ಹನುಮಕ್ಕ ರವರೇ ಪ್ರೇರಣೆಯಂತೆ, ಸೇವಾ ಕಾರ್ಯದಲ್ಲಿ ತಮ್ಮ ಮಡದಿಯವರಾದ ಶಿಕ್ಷಕಿ ಆರ್.ಗಾಯತ್ರಿ ಅವರ ಸಹಕಾರ ಅನನ್ಯ ಎನ್ನುತ್ತಾರೆ ಶ್ರೀಕಾಂತ್ ,ಆರ್ಥಿಕ ಸಂಕಷ್ಟದಲ್ಲಿ ರುವ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯೇ ಇವರ ಜೀವನದ ಪ್ರಮುಖ ಗುರಿ ಯಾಗಿದೆಯಂತೆ. ಸoಕಷ್ಟದಲ್ಲಿರುವ ಯಾರೇ ಪ್ರತಿಭಾನ್ವಿತ ವಿದ್ಯಾರ್ಥಿಗೆ ಅಗತ್ಯ ನೆರವು ನೀಡುವಲ್ಲಿ ಎಂದೆದಿಗೂ ಸಿದ್ಧರಿರುವ,ಯುವ ಶಿಕ್ಷಕ ಶ್ರೀಕಾಂತ್ ರ ಹೃದಯ ಶ್ರೀಮಂತಿಕೆಗೆ ಸರಿಸಾಟಿ ಯಾದೂ ಇಲ್ಲ ಎನ್ನುತ್ತಾರೆ ಅವರ ಸಹಪಾಟಿಗಳು. ಇವರ ವಯಸ್ಸಿಗೆ ಮೀರಿದ ಸೇವಾ ಮನೋಭಾವ ಮನವರಿಕೆ ಮಾಡಿಕೊಂಡ ಕೆಲ ಸಂಘ ಸಂಸ್ಥೆಗಳು ಇವರನ್ನ ಸನ್ಮಾನಿಸಿವೆ, ಇಲಾಖಾ ಕೆಲ ಉನ್ನಧಿಕಾರಿಗಳು ಇವರ ಸೇವಾ ಕಾರ್ಯವನ್ನು ಪ್ರಶಂಸೆ ವ್ಯಕ್ತಪಡಿಸಿ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇವರು ಈವರೆಗೂ ಸೇವೆ ಸಲ್ಲಿಸಿರುವ ಪ್ರತಿ ಪ್ರೌಢಶಾಲೆಗಳಲ್ಲಿ,ಇವರಿಂದ ಪ್ರಭಾವಿತರಾದ ಹಾಗೂ ಅಗತ್ಯ ನೆರವು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಮೂಹ ಇದೆ. ಇವರು ಶಿಕ್ಷಣ ಇಲಾಖೆ ತಮಗೆ ನಿಯೋಜಿಸಿರುವ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿ,ಜೊತೆಗೆ ತಮ್ಮ ವಿಶಿಷ್ಟ ಸೇವಾ ಕಾರ್ಯವನ್ನು ನಿಭಾಯಿಸುವಲ್ಲಿ ಯಶಸ್ಸು ಕಾಣಲಿದ್ದಾರೆ.ಈ ಮೂಲಕ ಶಿಕ್ಷಕ ಶ್ರೀಕಾಂತ ರವರುಪ್ರತಿಯೊಬ್ಬ ವಿದ್ಯಾರ್ಥಿಗಳ ಮನದಾಳದಲ್ಲಿ ಮನೆಮಾಡಿದ್ದಾರೆ, ಇಲಾಖೆಯ ಉನ್ನತಾಧಿಕಾರಿಗಳ ಮನಸ್ಸನ್ನ ಗೆದ್ದಿದ್ದಾರೆ ಹಾಗೂ ಗ್ರಾಮೀಣ ಜನತೆಯ ಮನಸೂರೆಗೊಳಿಸಿದ್ದಾರೆ. ಅವರು ಈವರೆಗೂ ಕರ್ತವ್ಯ ನಿರ್ವಹಿಸುವ ಪ್ರೌಢಶಾಲೆಯ ಸಿಬ್ಬಂದಿಯ ಚಿತ್ತವನ್ನ ತಮ್ಮತ್ತ ಸೆಳೆಯೋ ಮೂಲಕ ,ಸೇವಾ ಮನೋಭಾವದ ಇವರು ಎಲ್ಲರ ಪಾಲಿಗೆ ಮನಸೆಳೆಯೋ “ಶ್ರೀ’ಕಾಂತ” ಅವರಾಗಿದ್ದಾರೆ.ಇವರಿಗೆ ಜಿಲ್ಲಾಡಾಳಿತ ತಾಲೂಕಾಡಳಿತಗಳು ಹಾಗೂ ಇಲಾಖಾ ಉನ್ನತಾಧಿಕಾರಿಗಳು, ಇವರನ್ನ ಸತ್ಕರಿಸಿ ಸಮ್ಮಾನಗಳನ್ನು ನೀಡಬೇಕಿದೆ. ಸೇವೆಯನ್ನ ಗುರುತಿಸಿ ಪುರಸ್ಕಾರ ಗಳನ್ನು ನೀಡಿ ಪ್ರೋತ್ಸಾಯಿಸಬೇಕಿದೆ ಎಂದು ಗ್ರಾಮಗಳ ವಿವಿಧ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಣ ಪ್ರಿಮಿಗಳು, ಹಿರಿಯ ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

error: