May 18, 2024

Bhavana Tv

Its Your Channel

ಮರಗಮ್ಮದೇವಿ ನೂತನ ಮಂದಿರದ ಉದ್ಘಾಟನೆ ಹಾಗೂ ಕಳಸಾರೋಹಣ ಧರ್ಮಸಭೆಯ ಸಮಾರಂಭ

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಮರಗಮ್ಮದೇವಿ ನೂತನ ಮಂದಿರದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಹಾಗೂ ಧರ್ಮಸಭೆಯ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೆರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಮಾತನಾಡಿ. ಧೂಳಖೇಡ ಗ್ರಾಮ ದಕ್ಷಭ್ರಮ ಯಜ್ಞಮಾಡಿದ ಪುಣ್ಯ ಭೂಮಿಯಲ್ಲಿ ಇಂದು ಶ್ರೀಮರಗಮ್ಮದೇವಿ, ಶ್ರೀ ಲಕ್ಷ್ಮೀ ದೇವಿ, ಶ್ರೀ ಹುಡೇದ ಲಕ್ಷ್ಮೀ ದೇವಿ, ಶ್ರೀ ಸಂಭಸ್ತಾನಿ.ದೇವರುಗಳ ನೂತನ ಕಟ್ಟಡಗಳ ಜಿರ್ಣೋದ್ದಾರ ಮಾಡಿ ಇಂದು ಉದ್ಘಾಟನೆಯನ್ನು ನೆರವೇರಿಸಿ ನಮ್ಮ ಊರಿಗೆ ಯಾವುದೆ ರೋಗಗಳು ಬಾರದಿರಲೇಂದು ಸಂಕಲ್ಪ ಮಾಡಿ, ಪುಣ್ಯ ಕಾರ್ಯಮಾಡಿದ್ದು ಸಂತೋಷ ವಾಗಿದೆ ಎಂದು ಹೇಳಿದರು. ಭಾರತಿಯ ಸಂಸ್ಕೃತಿ ಪರಂಪರೆಯಲ್ಲಿ ಶಕ್ತಿ ದೇವತೆಗಳಿಗೆ ಪೂಜೆನೀಯ ಸ್ಥಾನವಿದೆ, ವಿಶೇಷವಾಗಿ ನಮ್ಮ ಜನಪದರು ಗ್ರಾಮದ ಒಳತಿಗಾಗಿ ಹಲವಾರು ದೇವತೆಗಳಿಗೆ ಆರಾಧನೆ ಮಾಡುತಿದ್ದರು ಇಂದು ಧೂಳಖೇಡ ಗ್ರಾಮದ ಯುವಕರು ಇಂತಹ ಕೆಲಸ ಮಾಡಿದ್ದು ಸ್ವಾಗತಾರ್ಹ ಎಂದರು.
ಭೀಮಾಶAಕರ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಸುರೇಶಗೌಡ ಪಾಟೀಲರು ಮಾತನಾಡುತ್ತಾ ಮರಗಮ್ಮದೇವರು ನಮ್ಮ ಗ್ರಾಮವನ್ನು ಕರೋನಾ ರೋಗದಿಂದ ರಕ್ಷಿಸಿದ ಮಹಾತಾಯಿ.ಸಾನಿದ್ಯವನು ವಹಿಸಿ ಆಶೀರ್ವಚನ ನೀಡಿದ ವೇ.ಮೂ.ಮಹಾಂತೇಶ ಹಿರೇಮಠ ಸ್ವಾಮಿಗಳು ಧೂಳಖೇಡ ಗ್ರಾಮ ದಕ್ಷಿಣದ ಕಾಶಿ ಎಂದು ಖ್ಯಾತಿ ಪಡೆದ ಗ್ರಾಮವಾಗಿದ್ದು ಇಂತಹ ಗ್ರಾಮದಲ್ಲಿ ಇಂದು ಮರಗಮ್ಮದೇವಿಯ ನೂತನ ಮಂದಿರದ ಉದ್ಘಾಟನಾ ಹಾಗೂ ಕಳಸಾರೋಹಣ ಮಾಡಿ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದು ಸಂತೋಷವಾಗಿದೆ

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಂ ಅಧ್ಯಕ್ಷ ಪಾರ್ವತಿ ಗುಮಾಸ್ತೆ,ಹಣಮಂತ ಕುರೆ, ಮಾಜಿ ಪುರಸಭಾ ಸದಸ್ಯರಾದ ಸಿದ್ದು ಡಂಗಾ, ಮಹಾದೇವ ನಗರೆ, ಬಸವರಾಜ ಪಾಟೀಲ,ಘೇನಬರಾಯಗೌಡ ಪಾಟೀಲ, ಶೈಲ ನಿಲೂರೆ,ಬಂದೆನವಾಜ ಮುಲ್ಲಾ,ದೀಲಿಪ ಶಿವಶರಣ, ರೇವಣಸಿದ್ದ ಭಂಡಾರೆ, ಸುರೇಶ್ ಕಯಕಂಬಾರ.ರಾಜಕುಮಾರ ಕಾಳೆ.ರಾಜಕುಮಾರ ಬಿರಾದಾರ,ಶಿವಾನಂದ ಘಂಟೆ,ಸAಜೀವ ಭೈರಗೋಂಡ,ಗಪೂರ ಮುಲ್ಲಾ, ಸುಧಾಕರ ಕಂಭಾರ, ಸುರೇಶ್ ಬಡಿಗೇರ,ಸಾಹೇಗೌಡ ಪಾಟೀಲ, ಇಬ್ರಾಹಿಂ ಶೇಕ್, ಸಿರಾಜ್ ಮುಲ್ಲಾ, ಮುಂತಾದವರು ಉಪಸ್ಥಿತರಿದ್ದರು

ವರದಿ. ಬಿ ಎಸ್ ಹೊಸೂರ.

error: