May 18, 2024

Bhavana Tv

Its Your Channel

” ಮೊಹರಂ ಆಚರಣೆಗೆ ಕೋರೋನಾ ಕರಿನೆರಳು: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬಕ್ಕೆ ಮಹಾಮಾರಿಯ ಕೊಡಲಿಯೇಟು”

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಶುಕ್ರವಾರ ಕೊನೆಯ ದಿನವಾದ ಮೊಹರಂ, ಹತ್ತನೆಯ ದಿನದ ಮೊಹರಂ ಹಬ್ಬವು ಸರಳವಾಗಿ ಆಚರಣೆ ಮಾಡಲಾಯಿತು.

ಮೊಹರಂ ಹಬ್ಬವೆಂದರೆ ಹಿಂದೂ-ಮುಸ್ಲಿಂ ಭಾವೈಕೈತೆ ಸಾರುವ ದೊಡ್ಡ ಸಾಂಪ್ರದಾಯಕ ಆಚರಣೆ. ಗ್ರಾಮೀಣ ಭಾಗಗಳಲ್ಲಿ ಹಿಂದುಗಳು ಹೆಚ್ಚಾಗಿ ಸಂಭ್ರಮ ಸಡಗರದಿಂದ ಮೊಹರಂ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೋರೋನಾದಿಂದ ಈ ಬಾರಿಯ ಮೊಹರಂ ಹಬ್ಬ ಫುಲ್ ಮಂಕಾಗಿದೆ.
ಮೊಹರA ಹಬ್ಬವನ್ನು ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಜನರು ಸಡಗರ-ಸಂಭ್ರಮದಿoದ ಆಚರಣೆ ಮಾಡುತ್ತಾರೆ. ಹಿಂದೂ-ಮುಸ್ಲಿA ಭೇದಭಾವವಿಲ್ಲದೆ ಜನರು ಭಾವೈಕ್ಯತೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ದೂರದ ನಗರಗಳಿಗೆ ದುಡಿಯಲು ಹೋದವರು ಮೊಹರಂ ಹಬ್ಬಕ್ಕೆ ತಪ್ಪದೇ ಊರಿಗೆ ಮರಳಿ ಬರುತ್ತಾರೆ. ಹಬ್ಬದ ಕೆಲವು ದಿನಗಳ ಮುಂಚಿತವಾಗಿಯೇ ತಮ್ಮ ತಮ್ಮ ಗ್ರಾಮಗಳಿಗೆ ಬಂದು ಸೇರುತ್ತಾರೆ.
ಮತ್ತೆ ಹಬ್ಬ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಪಟ್ಟಣಗಳಿಗೆ ತೆರಳುತ್ತಾರೆ. ಆದರೆ ಈ ಬಾರಿ ಮೊಹರಂ ಆಚರಣೆ ಸರ್ಕಾರದ ಆದೇಶದಂತೆ ನಡೆದಿದೆ. ಗುದ್ದಲಿ ಆಗುವುದಿಲ್ಲ, ಮೊಹರಂ ಕುಣಿತವಿಲ್ಲ ,ಜನ ಸೇರುವಂತಿಲ್ಲ ಇದು ಸರ್ಕಾರದ ಆದೇಶವಾಗಿದೆ. ಇದಕ್ಕೆಲ್ಲ ಕಾರಣ ಮಹಾಮಾರಿ ಕೋರೋನಾ. ಕೇವಲ ಸಾಂಕೇತಿಕ ಆಚರಣೆಗೆ ಮಾತ್ರ ಸೀಮಿತವಾಗಿದೆ.
ಮೊಹರಂ ಬರುವುದಕ್ಕಿಂತ ತಿಂಗಳ ಮುಂಚಿತವಾಗಿಯೇ ಗ್ರಾಮೀಣ ಪ್ರದೇಶದ ಜನರು ಮನೆ ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ಕಂಗೊಳಿಸುವAತೆ ಮಾಡುತ್ತಾರೆ. ಕುಟುಂಬದಲ್ಲಿರುವ ಎಲ್ಲಾ ಸದಸ್ಯರಿಗೂ ಬಣ್ಣಬಣ್ಣದ ಹೊಸಬಟ್ಟೆಗಳನ್ನು ಖರೀದಿಸಲಾಗುತ್ತದೆ. ತಮ್ಮ ಬಂಧುಬಾAಧವರನ್ನು ಕರೆಸಿ ಕಂದುರಿ ಮಾಡಿಸಿ ಊಟ ನೀಡಲಾಗುತ್ತದೆ. ಹಾಡುಗಳ ಸ್ಪರ್ಧೆ ಏರ್ಪಡಿಸಿ ರಾತ್ರಿಯಿಡೀ ಗೀಗಿ ಪದ, ಸವಾಲ್ ಪದ, ಜವಾಬು ಪದ ನಡೆಯುತ್ತದೆ. ಅಡ್ಡ ಸೋಗು ಪಾತ್ರಗಳು ಕಂಡುಬರುತ್ತದೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಛತ್ರಿ ಹಿಡಿದುಕೊಂಡು ತಾಳಕ್ಕೆ ತಕ್ಕಂತೆ ಕುಣಿಯುವುದು ತಂಡಗಳು ಬಹಳ ರಂಜನೀಯವಾಗಿರುತ್ತದೆ. ದೇವರು ಕುಳಿತ ಸ್ಥಳದಲ್ಲೇ ಅಲೆಕುಣಿ ತೆಗೆದು ಅದರಲ್ಲಿ ಬೆಂಕಿ ಹಚ್ಚಿ ಅದರ ಸುತ್ತಲೂ ತಮ್ಮ ಬೇಡಿಕೆಗಳ ಈಡೇರಿಸಿ ಕೊಳ್ಳುತ್ತಾ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಕೆಲವರು ಬೆಂಕಿಯಲ್ಲಿ ನಡೆಯುತ್ತಾರೆ.
ದೇವರ ಎದುರು-ಬದುರು ಅಪ್ಪಿಕೊಳ್ಳುವುದು ನಡೆಯುತ್ತದೆ. ಆದರೆ ಈ ಬಾರಿ ಕರೋನಾ ಹಿನ್ನೆಲೆ ದೇವರಿಗೆ ಕೂಡಿಸುವುದು ಕಡಿಮೆ. ಜನರ ಮನದಲ್ಲಿ ಸ್ಮರಿಸುವಂತಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಜನರ ಬದುಕಿಗೆ ರಂಗು ನೀಡುವ ಮೊಹರಂ ಕೊರೋನಾದ ಕರಿನೆರಳು ಬಿದ್ದಿದೆ.

ವರದಿ:ಮಲ್ಲಿಕಾರ್ಜುನ ಬುರ್ಲಿ

error: