May 18, 2024

Bhavana Tv

Its Your Channel

ನಾದದಿಂದ ಮಸಳಿಗೆ ಹೋಗುವ ಮುಖ್ಯ ರಸ್ತೆಯ ದುರಸ್ತಿ ಮಾಡಲಾಗುವುದು-ಸಹಾಯಕ ಕಾಯ೯ನಿವಾ೯ಹ ಅಭಿಯಂತರರ ಭರವಸೆ.

ವರದಿ: ಬಸವರಾಜ ಇಂಡಿ

ಇಂಡಿ ತಾಲೂಕಿನ ನಾದ ಬಿ.ಕೆ ಗ್ರಾಮದಿಂದ ಮಸಳಿಗೆ ಹೋಗಲು ಸು. ೭ಕಿ.ಮಿ. ಉದ್ದವಿರುವ ಡಾಂಬರೀಕರಣ ರಸ್ತೆಯು ೫೦ ವಷ೯ಗಳ ಹಿಂದೆ ಸಾರಿಗೆ ವಾಹನಗಳು ಹೋಗಲು ಅನುಕೂಲವಾಗಿತ್ತು.ಆದರೆ ತದನಂತರ ರಸ್ತೆಯ ದುರಸ್ತಿ ಯ ಅವ್ಯವಸ್ಥೆಯಿಂದ ರಸ್ತೆಯು ಸಂಪೂರ್ಣವಾಗಿ ಸ್ಮಶಾನದ ಆಗರದಂತಾಗಿದೆ.ರಸ್ತೆಯನ್ನೆ ಅವಲಂಬಿಸಿ ತಮ್ಮ-ತಮ್ಮ ಜಮೀನುಗಳಿಗೆ ಹೋಗುವ ರೈತಾಪಿ ವರ್ಗವು ಆ ರಸ್ತೆಯ ಮೇಲೆ ಹಾದು ಹೋಗಲು ಕಣ್ಣೀರಿನ ಕೈ ತೊಳೆಯುತ್ತಿದ್ದಾರೆ.ಅಷ್ಟೇ ಅಲ್ಲದೆ ಈ ಭಾಗದ ರೈತರು ಹೆಚ್ಚಾಗಿ ತಮ್ಮ-ತಮ್ಮ ಜಮೀನುಗಳಲ್ಲಿಯೇ ವಾಸವಾಗಿರವುದರಿಂದ ಶಿಕ್ಷಣ ಕಲಿಯಲು ಮಕ್ಕಳು ಗ್ರಾಮಕ್ಕೆ,ಪಟ್ಟಣಗಳಿಗೆ ಹೋಗಲು ಹರಸಹಾಸ ಪಡಬೇಕಾಗಿದೆ. ಮಳೆಗಾಲದಲ್ಲಿ ಈ ರಸ್ತೆಯ ಮೇಲೆ ನಡೆಯಬೇಕಾದರೆ ನತ೯ನ ಮಾಡುತ್ತ ವೇಷಗಳನ್ನು ಬದಲಿಸುತ್ತಾ ಸಾಗುವ ಸ್ಥಿತಿಯಾಗಿದ್ದು,ಈ ಸಮಸ್ಯೆ ಕುರಿತು ಸಾವ೯ಜನಿಕರು ಅನೇಕ ಬಾರಿ ಹಲವಾರು ಮನವಿಗಳನ್ನು ಮಾನ್ಯ ಸಂಸದರು ವಿಜಯಪುರ, ಶಾಸಕರು ಇಂಡಿ, ಹಾಗೂ ಇತರೆ ಸಂಬAಧಿಸಿದ ಅಧಿಕಾರಿಗಳಿಗೆ ಸಲ್ಲಿಸಿರುತ್ತಾರೆ .ಆದರೆ ಈ ಎಲ್ಲಾ ಸಮಸ್ಯೆಯ ಸುರಿಮಳೆ ಅರಿತು ಇಂದು ದಿ.೨೪.೦೮.೨೦೨೧ ರಂದು ಮಾನ್ಯ ಸಹಾಯಕ ಕಾಯ೯ನಿವಾ೯ಹಕ ಅಭಿಯಂತರರಾದ ರಾಜಕುಮಾರ ತೊರವಿ ಸಾಹೇಬರು ಸಮಸ್ಯೆಯ ಸ್ಥಳಕ್ಕೆ ಭೇಟಿ ಮಾಡಿ ರಸ್ತೆ ಪರಿಸೀಲಿಸಿ ನಿಜವಾದ ಸಮಸ್ಯೆ ಅರಿತು ಇನ್ನೂ ತಕ್ಷಣದ ಕೆಲವೇ ದಿನಗಳಲ್ಲಿ ರೈತರ ಸಮ್ಮುಖದಲ್ಲಿ ರಸ್ತೆ ನಿಮ೯ಣದ ದುರಸ್ಥಿಯ ಕಾಮಗಾರಿ ಮಾಡಲಾಗುವುದೆಂದು ಹೇಳಿದರು. ಆ ಗ್ರಾಮದ ರೈತ ಪ್ರಮುಖರು ಸೇರಿ ಈ ರಸ್ತೆಯು ದುರಸ್ಥಿಯಾಗದಿದ್ದರೆ ಮುಂಬರುವ ಎಲ್ಲಾ ಚುನಾವಣೆಗೆ ಬಹಿಷ್ಕಾರ ಹಾಕಲು ಸದಾ ಸಿದ್ಧರಾಗಿದ್ದೇವೆ .ಇದರಲ್ಲಿ ಎರಡು ಮಾತಿಲ್ಲ.ಮಾತು ತಪ್ಪದ ರೈತರ ಗ್ರಾಮವಿದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಜಯಶೀಲ. ಶಿ.ಅವಜಿ,ದೇವದಾಸ ಅಂಬಾರಿಗೆ,ಕಲ್ಲಪ್ಪ.ಶಿ.ಅವಜಿ,ರೈತ ಮುಖಂಡರಾದ ಲಗಮಣ್ಣ ತಳವಾರ,ಆದಶ೯ ಶಿಕ್ಷಕರಾದ ಶಿವರಾಜ .ಜಿ.ತೇಲಿ, ಬಸವರಾಜ ಬಡಿಗೇರ,ಬಸವರಾಜ ರೂಗಿ,ಹಣಮಂತ ಖೇಡ,ಬಸಪ್ಪ ಹೂಗಾರ,ಯುವ ಪಡೆಯ ನಾಯಕರಾದ ಸಚೀನ ಕ್ಷತ್ರಿ ,ಜಟ್ಟೆಪ್ಪ ಮೂಲಿ, ಅನಿಲ ಗೌಡ,ಅಳ್ಳಗಿ,ಚಿಚ್ಚೋಲ ಮೂಲಿ,ಇತರರು ಭಾಗಿಯಾಗಿದ್ದರು.

error: