May 3, 2024

Bhavana Tv

Its Your Channel

ಬಸವನಬಾಗೇವಾಡಿ ಪುರಸಭೆಯ ಉಪಚುನಾವಣೆಯಲ್ಲಿ ನಗೆ ಬೀರಿದ ಕಮಲದ ಬೆಂಬಲಿಗ

ಬಸವನಬಾಗೇವಾಡಿ : ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದ್ದ ಸ್ಥಳೀಯ ಪುರಸಭೆ ಉಪಚುನಾವಣೆಯಲ್ಲಿ ಕೈ ನಾಯಕರುಗಳಿಗೆ ಬಾರಿ ಹಿನ್ನಡೆಯಾಗಿದ್ದು, ಕಮಲ ಬೆಂಬಲಿತ ಅಭ್ಯರ್ಥಿ ವಿಜಯಶಾಲಿಯಾಗಿರುವ ಮೂಲಕ ನಗೆ ಬೀರಿದ್ದಾರೆ.

ಪಟ್ಟಣದ ವಾರ್ಡ್ ಸಂಖ್ಯೆ ೨೧ರ ರಾಜು ಭೂತನಾಳ ಅವರ ನಿಧನದ ಹಿನ್ನೆಲೆ, ಉಪ ಚುನಾವಣೆ ನಡೆದಿದ್ದು, ಇಂದು ಸೋಮವಾರ ಮುಂಜಾನೆ ಮತಎಣಿಕೆ ಕಾರ್ಯ ಜರಗಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ವಿಜಯಕುಮಾರ ನೀಲು ನಾಯಕ ಅವರು ೧೩೭ ಮತಗಳ ಅಂತರದಿAದ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಹಳ್ಳಿಯವರನ್ನು ಸೋಲಿಸಿದ್ದಾರೆ.

ಕೈ ನಾಯಕ ಶರಣಪ್ಪ ಹಳ್ಳಿಯವರು ಒಟ್ಟು ೩೫೮ ಮತಗಳು ಪಡೆದರೆ, ವಿಜಯಕುಮಾರ್ ನೀಲು ನಾಯಕ್ ಒಟ್ಟು ೪೯೫ ಮತಗಳನ್ನು ಪಡೆದಿದ್ದಾರೆ. ಇನ್ನು ನೋಟಾಗೆ ೧೨ ಮತಗಳು ಬಂದಿದೆ. ೧೩೭ ಮತಗಳ ಅಂತರದಿAದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಪಕ್ಷದ ಶಾಸಕ ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕೈ ಅಭ್ಯರ್ಥಿಗೆ ಪರವಾಗಿ ಶಾಸಕರ ಪುತ್ರಿ ಸೇರಿದಂತೆ ಸ್ಥಳೀಯ ನಾಯಕರುಗಳು ಕೂಡ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿ ನಾಯಕರು ಸೈಲೆಂಟಾಗಿಯೇ ಮತ ಸೆಳೆದು ಇಂದು ಗೆಲುವಿನ ಸಂಭ್ರಮ ತಮ್ಮದಾಗಿಸಿಕೊಂಡು ಕೈ ನಾಯಕರುಗಳಿಗೆ ಶಾಕ್ ನೀಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಬುರ್ಲಿ

error: