April 27, 2024

Bhavana Tv

Its Your Channel

ಮಾದಿಗ ದಂಡೋರ ಸಮಿತಿ ಕಾರ್ಯಕರ್ತರ ವಿರುದ್ಧ ಬಂಜಾರಾ ಸಮಾಜದ ಆಕ್ರೋಶ

ವರದಿ.ಬಿ ಎಸ್ ಹೊಸೂರ

ಚಡಚಣ: ಸಂತ ಸೇವಾಲಾಲ್ ಮಹಾರಾಜರಿಗೆ ಹಾಗೂ ಸಚಿವ ಪ್ರಭು ಚವ್ಹಾಣ ಅವರಿಗೆ ಅವಹೇಳನ: ಮಾದಿಗ ದಂಡೋರ ಸಮಿತಿ ಕಾರ್ಯಕರ್ತರ ವಿರುದ್ಧ ಬಂಜಾರಾ ಸಮಾಜದ ಆಕ್ರೋಶ: ಸದಾಶಿವ ಆಯೋಗ ಅಸಂವಿಧಾನೀಕ, ನಮ್ಮ ಸಮುದಾಯದಿಂದ ವಿರೋಧ”

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಬಂಜಾರಾ ಧರ್ಮಗುರು ಸಂತ ಸೇವಾಲಾಲ್ ಮಹಾರಾಜರನ್ನು ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರನ್ನು ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಭರದಲ್ಲಿ ಏಕ ವಚನದಲ್ಲಿ ಮಾತನಾಡಿ ನಮ್ಮ ಲಂಬಾಣಿ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಈ ಕಿಡಗೇಡಿಗಳ ಮೇಲೆ ಕಾನೂನು ಕ್ರಮ ವಹಿಸಬೇಕೆಂದು ಆಗ್ರಹಿಸಿ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ವತಿಯಿಂದ ಪ್ರತಿಭಟಿಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು…

ವಿಜಯಪೂರ ಜಿಲ್ಲೆಯ ಚಡಚಣ ಪಟ್ಟಣದ ಪ್ರವಾಸಿ ಮಂದಿರದಿAದ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ನೂರಾರು ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಛೇರಿ ತಲುಪಿ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ, ಬಳಿಕ ತಹಶೀಲ್ದಾರ್ ಸುರೇಶ ಚವಲರ್ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು…

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ರವಿದಾಸ ಜಾಧವ ಮಾತನಾಡಿ, ನಮ್ಮ ಬಂಜಾರಾ ಸಮಾಜದ ಧರ್ಮಗುರು ಸಂತ ಸೇವಾಲಾಲ್ ಅವರು ಹಾಗೂ ಸಚಿವ ಪ್ರಭು ಚವ್ಹಾಣ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದನ್ನು ತಿವ್ರವಾಗಿ ವಿರೋಧಿಸುತ್ತೇವೆ. ಸದಾಶಿವ ಆಯೋಗಕ್ಕೆ ನಮ್ಮ ಲಂಬಾಣಿ ಸಮಾಜದಿಂದ ಭಾರಿ ವಿರೋಧವಿದೆ. ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮವಹಿಸಬೇಕೆಂದು ಬಂಜಾರಾ ಸಮಾಜದ ಪರವಾಗಿ ಆಗ್ರಹಿಸಿದರು…

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜು ಜಾಧವ ಮಾತನಾಡಿ, ನಮ್ಮ ಸಮುದಾಯ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಿಂದ ಸೌಲಭ್ಯ ವಂಚಿತ ಲಂಬಾಣಿ ಸಮಾಜ. ದಶಕಗಳಿಂದ ದಬ್ಬಾಳಿಕೆಯನ್ನು ಸಹಿಸಿಕೊಂಡು ಬಂದಿದ್ದೇವೆ. ಬಂಜಾರಾ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸದಾಶಿವ ಆಯೋಗ ಅಸಂವಿಧಾನೀಕವಾಗಿದ್ದು, ನಾವು ವಿರೋಧಿಸುತ್ತೇವೆ ಎಂದರು.

error: