April 26, 2024

Bhavana Tv

Its Your Channel

“ಬೆನ್ನಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಆರೋಗ್ಯತಪಾಸಣೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮ”

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ ೮/೧೧/೨೧ ರಂದು ನಡೆದ ಆರೋಗ್ಯತಪಾಸಣೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ ಸಾಬೀರ ಪಟೇಲ್ (ತಾಲೂಕ ಹಿರಿಯ ವೈದ್ಯಾಧಿಕಾರಿಗಳು ಬಸವನಬಾಗೇವಾಡಿ) ಬೆನ್ನುಹುರಿ ಒಳಗಾದ ವ್ಯಕ್ತಿಗಳಿಗೆ ಮತ್ತು ಪೋಷಕರಿಗೆ ಅವರ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಿ ಮತ್ತು ಸಾಮಾಜಿಕವಾಗಿ ಕಾಯಕ ಚಟುವಟಿಕೆಯಲ್ಲಿ ಭಾಗವಹಿಸಿ ಸ್ವಾವಲಂಬನೆಯಾಗಿ ಸಂತೋಷದಿAದ ಜೀವನ ಸಾಗಿಸಬೇಕು ಹಾಗೂ ಆತ್ಮಸ್ಥೈರ್ಯ ತುಂಬಿದರು ಮತ್ತು ನಮ್ಮ ಇಲಾಖೆಯಿಂದ ನಿಮಗೆ ಅವಶ್ಯಕ ಅನುಗುಣವಾಗಿ ಒದಗಿಸಿ ಕೊಡುತ್ತೇನೆ ಎಂದು ಭರವಸೆ ಕೊಟ್ಟರು.
ಈ ಸಭೆಯ ಅಧ್ಯಕ್ಷರಾದ ಈರಣ್ಣ ಬಿರಾದಾರ್ ಶಾಖೆಯ ವ್ಯವಸ್ಥಾಪಕರು ಎಪಿಡಿ ಸಂಸ್ಥೆ ವಿಜಯಪುರ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎಪಿಡಿ ಸಂಸ್ಥೆ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮತ್ತು ಬೆನ್ನುಹುರಿಗೆ ಅಪಘಾತ ಗೊಳಗಾದ ವ್ಯಕ್ತಿಗಳಿಗೆ ತಮ್ಮ ಸ್ಥಳೀಯ ಸರ್ಕಾರಿ ಇಲಾಖೆಗಳಿಂದ ಹಾಗೂ ದಾನಿಗಳಿಂದ ಸೇವೆಗಳನ್ನು ಪಡೆದುಕೊಂಡು ಕಾಯಕ ನಿರ್ವಹಿಸುತ್ತವ ಸರ್ಕಾರವಾಗಿದೆ ಎಂದು ತಿಳಿಸಿದರು.
ಓ ಪಾಲಸ್ವಾಮಿ ಎಪಿಡಿ ಸಂಸ್ಥೆ ನಿರೂಪಣೆ ,ಪ್ರಾರ್ಥನೆ ಈರಮ್ಮ ಹಾದಿಮನಿ ಎಪಿಡಿ ಸಂಸ್ಥೆ ವಿಜಯಪುರ ಇವರು ಮಾಡಿದರು.
ಶಿವಶಂಕರ್ ಬುರ್ಲಿ ಎಪಿಡಿ ಸಂಸ್ಥೆ ವಿಜಯಪುರ ಇವರು ಸ್ವಾಗತ ಕೋರಿದರು.
ಮುಖ್ಯ ಅತಿಥಿ ರಮೇಶ್ ಆಲಮೇಲಕರ ವಹಿಸಿದರು. ಅಂಬಿಕಾ ರಜಪೂತ್ ಎಬಿಡಿ ಸಂಸ್ಥೆ ವಿಜಯಪುರ ಇವರು ವಂದನಾರ್ಪಣೆ ಮಾಡಿದರು.
ಈ ಶಿಬಿರದಲ್ಲಿ ೩೦ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳು ಹಾಗೂ ಅವರ ಪೋಷಕರು ಭಾಗವಹಿಸಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವರದಿ: ಮಲ್ಲಿಕಾರ್ಜುನ್ ಬುರ್ಲಿ

error: