April 27, 2024

Bhavana Tv

Its Your Channel

ಸಂಗೊಳ್ಳಿ ರಾಯಣ್ಣನ ಮೂರ್ತಿ ತೆರವು ಖಂಡಿಸಿ ಹಾಲುಮತ ಮಹಾ ಸಭಾ ವತಿಯಿಂದ ತಹಶೀಲ್ದಾರರಿಗೆ ಮನವಿ.

ವಿಜಯಪುರ: ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಹುತಾತ್ಮ ಕ್ರಾಂತ್ರಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಇಂಡಿ ತಾಲೂಕ ಹಾಲುಮತ ಮಹಾ ಸಭಾ ವತಿಯಿಂದ ತಹಶಿಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಇಂಡಿ ತಾಲೂಕ ಜೆಡಿಎಸ್ ಮುಖಂಡರಾದ ಮಹಿಬೂಬ ಬೇನೂರ ಮಾತನಾಡಿ. ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಹುತಾತ್ಮ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಗಷ್ಟ ೧೫ ರಂದು ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನದಂದು ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಅಧಿಕಾರಿಗಳು ಹಾಗೂ ಕೆಲವೊಂದು ಕಿಡಿಗೇಡಿಗಳು ಏಕಾಏಕಿ ನಿರ್ದಾಕ್ಷಣ್ಯವಾಗಿ ತೆಗೆದುಹಾಕಿ ಅಲ್ಲಿಂದ ಮೂರ್ತಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದು ಅಲ್ಲದೇ ಸ್ಥಳಿಯರ ಮೇಲೆ ಹಲ್ಲೆ ಕೂಡಾ ನಡೆಸಿರುತ್ತಾರೆ ಈ ಘಟನೆ ದುರಾದ್ರಷ್ಟಕರವಾಗಿದ್ದು ರಾಜ್ಯ ಸರಕಾರವು ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇಶಭಕ್ತ ಹುತಾತ್ಮರಿಗೆ ಗೌರವ ಸಲ್ಲಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು ಈ ಸಂದರ್ಭದಲ್ಲಿ ಹಾಲುಮತ ಮಹಾ ಸಭಾದ ತಾಲೂಕ ಅಧ್ಯಕ್ಷ ಮಾಳು ಮ್ಯಾಕೇರಿ. ವಿಠ್ಠಲ್ ಹಳ್ಳಿ.ಕುಮಾರ ಸುರಗಿಹಳ್ಳಿ. ಜೆಡಿ ಎಸ್ ಮುಖಂಡರಾದ ಮಹಿಬೂಬ ಬೇನೂರ. ಪುರಸಭೆ ಸದಸ್ಯ ಶ್ರಿಶೈಲ ಪೂಜಾರಿ.ಬಿ.ಡಿ ಪಾಟೀಲ ಅಭಿಮಾನಿಬಳಗ ಅಧ್ಯಕ್ಷ ದುಂಡು ಬಿರಾದಾರ. ಪಂಡರಿನಾಥ ಪಾಟಿಲ .ಶ್ರೀಶೈಲ ಗುನ್ನಾಪೂರ.ಮಳಗು ಪೂಜಾರಿ.ಮಂಜು ತಾವರಖೇಡ.ಸಿದ್ರಾಮ ಹಂಜಗಿ.ಸಿoದೂರ ಪೂಜಾರಿ ಮತ್ತಿತ್ತರರು ಇದ್ದರು

ವರದಿ. ಬಿ ಎಸ್ ಹೊಸೂರ

error: