April 30, 2024

Bhavana Tv

Its Your Channel

ಸ್ವಚ್ಛತೆ ಮರೀಚಿಕೆ, ಮಡುಗಟ್ಟುವ ಕೊಳಚೆ ನೀರು.

ಬಾಗೇಪಲ್ಲಿ: ಮೂಗಿಗೆ ಮಾಸ್ಕ್ ಹಾಕಿ, ಹೊರಗಡೆಯಿಂದ ಮನೆಯೊಳಗೆ ಬಂದ ಕೂಡಲೇ ಸೋಪಿನಿಂದ ಕೈ ತೊಳೆಯಿರಿ ಎಂದು ಕಡ್ಡಾಯವಾಗಿ ಸೂಚಿಸುತ್ತಿರುವ ಕೊರೋನಾ ಆತಂಕದ ಈ ಸಂದರ್ಭದಲ್ಲಿ ಸ್ವಚ್ಛತೆ ಮರೀಚಿಕೆಯಾಗಿ ಗ್ರಾಮದ ಜನರಿಗೆ ಮತ್ತಷ್ಟು ರೋಗರುಜುನೆಗಳನ್ನು ಸೃಷ್ಟಿಸುವ ಆತಂಕವು ಎದುರಾಗಿದೆ.

ಹೌದು ಬಾಗೇಪಲ್ಲಿ ತಾಲ್ಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಚ್ಚಲವಾರಪಲ್ಲಿ ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಹೂಳು ತುಂಬಿದ್ದು, ಗಬ್ಬು ನಾರುತ್ತಿವೆ. ಮಳೆಗಾಲದಲ್ಲಿ ಗ್ರಾಮದ ತಗ್ಗು ಪ್ರದೇಶದ ಮನೆಗಳಲ್ಲಿ ವಾಸ ಮಾಡುವವರಿಗೆ ಮನೆಯಲ್ಲಿ ಕೂತು ಊಟ ಮಾಡಕ್ಕೂ ಬೇಸರವಾಗುವಷ್ಟು ಕೊಳಚೆ ನೀರು ತಂಬಿ ಹೋಗುತ್ತವೆ. ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಹಾಗೂ ಐದಾರು ವರ್ಷಗಳು ಕಳೆದರೂ ಸ್ವಚ್ಛಗೊಳಿಸದ ಚರಂಡಿಗಳಿAದಾಗಿ ತಗ್ಗು ಪ್ರದೇಶದ ಮನೆಗಳ ಮುಂಭಾಗದಲ್ಲಿ ಗಬ್ಬು ನೀರು ಮಡುಗಟ್ಟುತ್ತದೆ. ಇದರಿಂದಾಗಿ ಮಕ್ಕಳು, ಮುದುಕರ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಮಲೇರಿಯಾ, ಡೇಂಗಿನAತಹ ರೋಗಗಳು ಹರಡುವ ಭೀತಿಯಲ್ಲಿ ಜನ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ನೋವನ್ನು ಹೇಳಿಕೊಂಡರು.
ಇನ್ನಾದರೂ ಈ ಗ್ರಾಮದ ಚರಂಡಿಗಳ ಸ್ವಚ್ಛತೆ ಸೇರಿದಂತೆ ಅವೈಜ್ಞಾನಿಕ ಚರಂಡಿ ಕಾಮಗಾರಿಗಳನ್ನು ಸರಿಪಡಿಸಿ, ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಪ್ಪಿಸಲಿ ಎಂಬುದೇ ಪ್ರಜ್ಞಾವಂತರ ಕೂಗು.

ವರದಿ: ಗೋಪಾಲ ರೆಡ್ಡಿ ಬಾಗೆಪಲ್ಲಿ

error: