April 30, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಭಾರಿ ಮಳೆ;30ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ.

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಭಾರೀ ಮಳೆ ಬೂಕನಕೆರೆ ಮತ್ತು ಅಕ್ಕಿಹೆಬ್ಬಾಳು ಹೋಬಳಿಗಳಲ್ಲಿ ಭಾರೀ ನಷ್ಠ 30ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ. ನೂರಾರು ತೆಂಗಿನ ಮರಗಳು ಧರೆಗೆ ಉರುಳಿ ಲಕ್ಷಾಂತರ ರೂ ನಷ್ಠ..ಮನೆಯ ಗೋಡೆಯ ಕೆಳಗಿ ಸಿಕ್ಕಿ ಒಂದು ಎಮ್ಮೆ ಹಾಗೂ ಎರಡು ಕುರಿಗಳು ಸಾವು..ತಹಶೀಲ್ದಾರ್ ರೂಪ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು ..

ಕೆ.ಆರ್.ಪೇಟೆ ತಾಲ್ಲೂಕಿನ ಬೆಟ್ಟದಹೊಸೂರು, ಐಚನಹಳ್ಳಿ, ಬೂಕನಕೆರೆ, ಆಲಂಬಾಡಿಕಾವಲು, ಕಟ್ಟಹಳ್ಳಿ, ಆಲಂಬಾಡಿ, ಸೋಮನಹಳ್ಳಿ, ಪುರ ಗ್ರಾಮಗಳಿಗೆ ಅಧಿಕಾರಿಗಳ ತಂಡದೊAದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ರೂಪ ಜೀವನಾಧಾರವಾಗಿದ್ದ ವಾಸದ ಮನೆಗಳು, ತೆಂಗು ಮತ್ತು ಬಾಳೆಯ ತೋಟಗಳನ್ನು ಕಳೆದುಕೊಂಡಿರುವ ರೈತ ಬಾಂಧವರಿಗೆ ಸಮಾಧಾನ ಮಾಡಿ ನಿಮ್ಮೊಂದಿಗೆ ಸರ್ಕಾರವಿದೆ, ಸರ್ಕಾರದ ಪ್ರತಿನಿಧಿಯಾಗಿ ಸಚಿವರಿದ್ದಾರೆ. ತಾಲ್ಲೂಕಿನಲ್ಲಿ ಬಿರುಗಾಳಿ ಮಳೆಯಿಂದ ಆಗಿರುವ ನಷ್ಠದ ವರದಿಯನ್ನು ಸಚಿವರಿಗೆ ನೀಡುತ್ತೇನೆ. ಮನೆಯನ್ನು ಕಳೆದುಕೊಂಡಿರುವ ರೈತಬಾಂಧವರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಪ್ರಾಕೃತಿಕ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಸಹಾಯ ಧನವನ್ನು ನೀಡುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬಿದರು..

ಬೂಕನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿಮಂಜು, ಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಮುಖಂಡರಾದ ಹೆಳವೇಗೌಡ ರವಿ, ರಾಜು, ವಸಂತಕುಮಾರ್, ಬೆಟ್ಟದಹೊಸೂರು ಪ್ರಕಾಶ್, ಗಿರೀಶ್, ಶ್ಯಾಂಪ್ರಸಾದ್, ಎ.ಎಂ.ಸAಜೀವಪ್ಪ, ರಾಜಶ್ವನಿರೀಕ್ಷಕ ರಾಜಮೂರ್ತಿ, ಗ್ರಾಮಲೆಕ್ಕಾಧಿಕಾರಿ ಆನಂದ್, ಶಿವಮ್ಮ, ದಶರಥ ಪ್ರಸಾದ್, ನಂದೀಶ್, ಮೂರ್ತಿ, ಭೈರವ, ನರೇಂದ್ರನಾಯಕ, ರಫಿ, ಸೈಯ್ಯದ್ ಅಹಮದ್, ಸಚಿವರಾದ ಡಾ.ನಾರಾಯಣಗೌಡರ ಆಪ್ತಸಹಾಯಕ ದಯಾನಂದ ಸೇರಿದಂತೆ ನೂರಾರು ಜನರು ತಹಶೀಲ್ದಾರ್ ರೂಪ ಅವರ ಭೇಟಿಯ ಸಮಯದಲ್ಲಿ ಉಪಸ್ಥಿತರಿದ್ದರು..

ಬೂಕನಕೆರೆ ನಾಡಕಛೇರಿ ಹಾಗೂ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ರೂಪ ..

ಮಳೆ ಹಾನಿ ಹಾಗೂ ನಷ್ಠದ ವೀಕ್ಷಣೆಗೆ ಬೂಕನಕೆರೆ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿದ್ದ ತಹಶೀಲ್ದಾರ್ ರೂಪ ಬೂಕನಕೆರೆ ಹೋಬಳಿ ಕೇಂದ್ರದಲ್ಲಿ ನಾಡಕಛೇರಿ ಹಾಗೂ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು..ಭಾರಿ ಮಳೆಯಿಂದಾಗಿ ಸೋರುತ್ತಿರುವ ಶಿಥಿಲವಾದ ಕಟ್ಟಡದಿಂದ ನಾಡಕಛೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸುವAತೆ ಉಪತಹಶೀಲ್ದಾರ್ ಲಲಿತ ಮತ್ತು ಬೂಕನಕೆರೆ ಹೋಬಳಿಯ ರಾಜಶ್ವನಿರೀಕ್ಷಕ ರಾಜಮೂರ್ತಿ ಅವರಿಗೆ ಸೂಚನೆ ನೀಡಿದರು.. ಬೂಕನಕೆರೆ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಅಧ್ಯಕ್ಷೆ ಜ್ಯೋತಿ ಮಂಜು ಹಾಗೂ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಆದಷ್ಟು ಜರೂರಾಗಿ ಮಾಡಿಕೊಡಬೇಕು. ಪ್ರಸ್ತುತ ಮಳೆಯಿಂದ ಸಂಕಷ್ಠಕ್ಕೆ ಒಳಗಾಗಿರುವ ಮನೆಗಳ ಮಾಲೀಕರಿಗೆ ಪರಿಹಾರ ಪಡೆಯಲು ಬೇಕಾದ ಅಗತ್ಯ ದಾಖಲೆಗಳನ್ನು ಕೂಡಲೆ ಒದಗಿಸಿಕೊಡುವಂತೆ ನಿರ್ದೇಶನ ನೀಡಿದರು…

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .

error: