November 15, 2024

Bhavana Tv

Its Your Channel

ಶ್ರೀ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ೨೦ ನೇ ವಾರ್ಷಿಕೋತ್ಸವ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಇದರ ೨೦ ನೆ ವಾರ್ಷಿಕೋತ್ಸವದ ಅಂಗವಾಗಿ ೨೦೨೨-೨೩ ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ನಡೆಯಿತು

ಈ ಕಾರ್ಯಕ್ರಮ ಚಿಲುಮೆ ಹಸ್ತಪ್ರತಿಯನ್ನು ಬಿಡುಗಡೆಗೊಳಿಸುವ ಮುಖಾಂತರ ಉದ್ಘಾಟನೆಗೊಂಡಿತು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಎಸ್ ಎಸ್ ಹಾಲವರ್ ಅವರು ಶ್ರೀ ಹುಚ್ಚೇಶ್ವರ ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆಯನ್ನು ಅತಿ ಎತ್ತರ ಮಟ್ಟಕ್ಕೆ ತಂದುಕೊಟ್ಟ ಎಲ್ಲಾ ಶಿಕ್ಷಕರ ಗಳಿಗೆ ಅಭಿನಂದಿಸಿದರು ಈ ಶಾಲೆಯು ೨೦ ವರ್ಷಗಳಿಂದ ಒಳ್ಳೆಯ ಶಿಕ್ಷಣವನ್ನು ನೀಡುತ್ತಾ ಬಂದಿದೆ ಮುಂದೆ ಇದೇ ರೀತಿ ಒಳ್ಳೆಯ ಶಿಕ್ಷಣವನ್ನು ನೀಡುತ್ತಾ, ಮಕ್ಕಳಿಗೆ ಸಂಸ್ಕಾರವನ್ನು ನೀಡಿ ಹಾಗೂ ಅವರ ಬೆಳವಣಿಗೆಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಅವರ ಬಾಳು ಬೆಳಗಲಿ ಎಂದು ಎಲ್ಲ ಮಕ್ಕಳಿಗೆ ಹಾರೈಸಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಈ ಸಂಘವು ೨೦ ವರ್ಷಗಳಿಂದ ಏರಿಳಿತವನ್ನು ಕಂಡು ಈಗ ೨೦ ವರ್ಷವನ್ನು ಪೂರೈಸಿ ಮುನ್ನಡೆಯುತ್ತಿದೆ ಎಂದು ಹಾರೈಸಿದರು ಈ ಶಿಕ್ಷಣ ಸಂಸ್ಥೆಯನ್ನು ಉತ್ತಮವಾಗಿ ಬೆಳೆಸಿದ ಎಲ್ಲ ಶಿಕ್ಷಕ ವೃಂದಕ್ಕೆ ಅಭಿನಂದಿಸಿದರು ಹಾಗೂ ಇದೇ ರೀತಿ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಿ ಮುಂದೆ ದೊಡ್ಡಮಟ್ಟದ ಪ್ರಶಸ್ತಿಯನ್ನು ಲಭಿಸಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಎಸ್ ಎಸ್ ಹಾಳವರ ಅವರಿಗೆ ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿ ಇದರ ಅಧ್ಯಕ್ಷರಾದ ಹುಚ್ಚೇಶ್ವರ ಮಹಾಸ್ವಾಮಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ್ ಎಸ್ ಕುಮಚಗಿ ಹಾಗೂ ವಾರ್ಷಿಕ ಸಂಚಿಕೆ ಬಿಡುಗಡೆಯನ್ನು ವಿದ್ಯಾಧರ್ ಆರ್ ಮಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಎಸ್ ಹಾಲವರ ವಿಷಯ ಪರಿವೀಕ್ಷಕರು ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿಗಳು ಬಾಗಲಕೋಟೆ ಹಾಗೂ ಇನ್ನೋರ್ವ ಅತಿಥಿಗಳಾದ ಆರ್ ಎಸ್ ಭಾಪ್ರಿ ಕೋಶಾಧ್ಯಕ್ಷರು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿ ಹಾಗೂ ಅತಿಥಿಗಳಾಗಿ ಶ್ರೀ ಅನಿಲ್ ಕುಮಾರ್ ಎಸ್ ಹುಚ್ಚೇಶ್ವರ ಮಠ ಹಾಗೂ ಶ್ರೀ ಅನಿಲ್ ಕುಮಾರ್ ಕಲ್ಯಾಣ ಶೆಟ್ಟಿ ಹಾಗೂ ಶ್ರೀ ಎ ಎಚ್ ಗೌಡರ್ ಹಾಗೂ ಪಿಎಸ್‌ಎಲ್ ಚೌಹಾನ್ ಸಿ ಆರ ಪಿ , ಬಿ ಎಸ್ ನಿಡಗುಂದಿ ಶಾಲೆಯ ಮುಖ್ಯ ಗುರುಗಳು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪಾಲಕರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು
ನAತರ ಮಕ್ಕಳಿಂದ ಮನರಂಜನ ಕಾರ್ಯಕ್ರಮಗಳು ನಡೆದವು
ವರದಿ:- ನಿಂಗಪ್ಪ ಕೆ ಬಾಗಲಕೊಟೆ

error: