April 29, 2024

Bhavana Tv

Its Your Channel

೬೭ ನೇ ವನ್ಯಜೀವಿ ಸಪ್ತಾಹ: ಕಾಡನ್ನು ಉಳಿಸಿ ವನ್ಯಜೀವಿಗಳ ಸಂರಕ್ಷಿಸಿ ಕುರಿತು ಮಕ್ಕಳಿಂದ ಜನಜಾಗೃತಿ ಜಾಥಾ

ಬಾಗೇಪಲ್ಲಿ:- ಪ್ರಾದೇಶಿಕ ಅರಣ್ಯ ಇಲಾಖೆ ಚಿಕ್ಕಬಳ್ಳಾಪುರ, ಪ್ರಾದೇಶಿಕ ಅರಣ್ಯ ವಲಯ ಬಾಗೇಪಲ್ಲಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗೇಪಲ್ಲಿ ಇವರ ಸಹಯೋಗದೊಂದಿಗೆ ಬಾಗೇಪಲ್ಲಿ ಪಟ್ಟಣದಲ್ಲಿ ೬೭ ನೇ ವನ್ಯಜೀವಿಗಳ ಸಪ್ತಾಹ ಕಾರ್ಯಕ್ರಮ ನಡೆಯಿತು.

ಬಾಗೇಪಲ್ಲಿ ತಾಲ್ಲೂಕು ವಿವಿಧ ಸರ್ಕಾರಿ ಶಾಲಾ ಮಕ್ಕಳಿಂದ ಬಾಗೇಪಲ್ಲಿ ಪಟ್ಟಣದ ಮುಖ್ಯ ರಸ್ತೆ ನ್ಯಾಷನಲ್ ಕಾಲೇಜುನಿಂದ ಹೊರಟ ಮಕ್ಕಳ ಜನಜಾಗೃತಿ ಜಾಥಾ ಶುದ್ದ ಜಲಕ್ಕಾಗಿ ಜಲಚರಗಳ ಸಂರಕ್ಷಣೆ ಘೋಷಣೆಯಡಿ ೬೭ನೇ ವನ್ಯಜೀವಿ ಸಪ್ತಾಹ ನಡೆಯಿತು.

ವನ್ಯಜೀವಿಗಳ ಸಂರಕ್ಷಣೆಯ ಮಹತ್ವದೊಂದಿಗೆ ಪರಿಸರ ಪ್ರತಿಜ್ಞಾ ವಿಧಿ
ಭೋಧಿಸಿದ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿ ಪೂರ್ಣಿಕಾ ರಾಣಿ ಮಾತನಾಡಿ, ವನ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಈ ಸಪ್ತಾಹ ನಡೆಸುತ್ತಾ ಬಂದಿದ್ದೇವೆ. ಇದರಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ವನ್ಯಜೀವಿಗಳ ಸಂರಕ್ಷಣೆಗೆ ಪೂರಕವಾಗಿದೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದೆ” ಎಂದರು.

ಶಾಲಾ ವಿದ್ಯಾರ್ಥಿಗಳು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ವಿವಿಧ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು ಮುಂದಿನ ಪೀಳಿಗೆಗೂ ವನ್ಯಜೀವಿ ಹಾಗೂ ಕಾಡನ್ನು ಉಳಿಸಿ ಎಂಬ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಅಣ್ಣಪ್ಪ,ರಾಘವೇಂದ್ರ, ಅರಣ್ಯ ರಕ್ಷಕರಾದ ನರಸಿಂಹಪ್ಪ, ಶ್ರೀರಾಮಲು, ವೆಂಕಟೇಶ್ ರಾಮಾಂಜಿ,ಈಶ್ವರಪ್ಪ,ಅಶ್ವಥಪ್ಪ,ಯರಪ್ಪ ಹಾಗೂ ಅರಣ್ಯ ಇಲಾಖೆಯ ಚಾಲಕ ಮಧು ಹಾಗೂ ವಿವಿಧ ಶಾಲೆಯ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: