July 14, 2024

Bhavana Tv

Its Your Channel

ಚಿರತೆ ಚರ್ಮ ವಶ

ಭಟ್ಕಳ: ಅನಧೀಕೃತವಾಗಿ ಚಿರತೆಯ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಭಟ್ಕಳ ತಾಲೂಕಿನ ಕಟಗಾರಕೊಪ್ಪದ ಕಬ್ರೆ ಬಸ್ ನಿಲ್ದಾಣದ ಹತ್ತಿರ ಮೋಟಾರ್ ಸೈಕಲ್ ಮೇಲೆ ಸಾಗಿಸುತ್ತಿದ್ದ ಚಿರತೆ ಚರ್ಮ, ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದು ಆರೋಪಿ ಅತ್ತಿಬಾರ್ ನಿವಾಸಿ ಬೈರಾ ರಾಮ ಗೊಂಡ ಎನ್ನುವನನ್ನು ಬಂಧಿಸಿರುವ ಕುರಿತು ವರದಿಯಾಗಿದೆ.
ಉತ್ತರಕೊಪ್ಪ-ಕಟಗಾರಕೊಪ್ಪ ಮಾರ್ಗವಾಗಿ ವ್ಯಕ್ತಿಯೋರ್ವನು ಚಿರತೆಯ ಚರ್ಮವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುವ ಕುರಿತು ಕಾರವಾರದ ಕ್ರೆöÊಂ ಬ್ರಾಂಚ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಅವರಿಗೆ ಮಾಹಿತಿ ಲಭ್ಯವಾಗಿತ್ತು ಎನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅವರು ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ ಭಟ್ಕಳದ ಎ.ಸಿ.ಎಫ್. ಸುದರ್ಶನ ಜಿ.ಕೆ. ಅವರ ಸಹಾಯ ಪಡೆದು ಆರೋಪಿಯು ಕಟಗಾರಕೊಪ್ಪ ಕಬ್ರೆಯ ಬಸ್ ನಿಲ್ದಾಣದ ಹತ್ತಿರ ಬರುತ್ತಿರುವಾಗ ಆತನನ್ನು ಹಿಡಿದು ಆತನ ವಶದಲ್ಲಿದ್ದ ಸುಮಾರು ೧೫ ಲಕ್ಷ ಬೆಲೆ ಬಾಳುವ ಚಿರತೆಯ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ್ದು ಸೂಕ್ತ ಕಾನೂನು ಕ್ರಮದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸುವ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಉಮೇಶ ನಾಯ್ಕ, ಮಂಜುನಾಥ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಮೋದ ಬಿ., ಮಧುಕರ ವಿ.ನಾಯ್ಕ, ಕಾಡಪ್ಪ ಗೋಲಬಾವಿ, ಸಣ್ಣಯ್ಯ ಗೊಂಡ ಮುಂತಾದವರು ಭಾಗವಹಿಸಿದ್ದರು.

error: