December 6, 2024

Bhavana Tv

Its Your Channel

ಸಿಂದಗಿ ನಗರ ಸುಧಾರಣೆ ವೇದಿಕೆಯಿಂದ ಕೊರೋನಾ ಜಾಗೃತಿ ಅಭಿಯಾನ ಕಾರ್ಯಕ್ರಮ

ಸಿಂದಗಿ ನಗರ ಸುಧಾರಣಾ ಸಮಿತಿ ಕೊರೋನ ವೈರಸ್ ಕುರಿತು ಇಂದು ಸಿಂದಗಿ ನಗರದಲ್ಲಿ ಸ್ವಾಮಿ ವಿವೇಕಾನಂದ ವೃತ್ತದಿಂದ ಅಭಿಯಾನವು ಪ್ರಾರಂಭಗೊಂಡು . ಮುಖ್ಯ ರಸ್ತೆಯ ಟಿಪ್ಪು ಸರ್ಕಲ್ ಮುಖಾಂತರ ಅಂಬೇಡ್ಕರ್ ಸರ್ಕಲ್ ನಲ್ಲಿ ಸಮಾರೋಪ ನಡೆಯಿತು.
ಸಿಂದಗಿ ನಗರ ಸುಧಾರಣೆ ಸಮಿತಿಯಿಂದ “ಅಭಿಯಾನ ನಮ್ಮದು.” ಜಾಗೃತಿ ನಿಮ್ಮದು.
ಕೊರೋನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಕೊರೋನಾ ಓಡಿಸಿ ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ‌ ಎಂಬ ಘೋಷಣೆಯೊಂದಿಗೆ ಜನರಲ್ಲಿ ಜಾಗೃತಿ ಡಿಸಲಾಯಿತು,

ಸಿಂದಗಿ ನಗರ ಸುಧಾರಣಾ ವೇದಿಕೆಯ ಅಧ್ಯಕ್ಷ ಅಶೋಕ್ ಅಲ್ಲಾಪುರ ಮಾತನಾಡಿ ಕರೋನಾ ವೈರಸನಿಂದ ಆಗುವ ಅನಾಹುತಗಳು ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಿಸುವಂಥ ಕೆಲಸಗಳು ಆಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವಾರು ಜನರು ನಗರ ಸುಧಾರಣಾ ವೇದಿಕೆಯ ಸದಸ್ಯರು ಮಾತನಾಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಕೆ ಡಿ ಪೂಜಾರಿ ,ಶ್ರೀಶೈಲ ಯಳಮೇಲಿ , ಸಲೀಂ ಜುಮ್ನಾಳ,ಚೇತನ ಗುತ್ತೇದಾರ, ಬೋರಮ್ಮ ಕರ್ಪೂರ ಮಠ, ಮಹಾದೇವಿ ಹಿರೇಮಠ , ಶೇಖರ್ ಬಿರಾದಾರ್, ಪ್ರಧಾನ ಕಾರ್ಯದರ್ಶಿ ಎಂ ಎ ಖತೀಬ್. ಅಧ್ಯಕ್ಷರಾದ ಅಶೋಕ ಅಲ್ಲಾಪುರ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಶಿವಾನಂದ ತಾವರಖೇಡ ವಂದನಾರ್ಪಣೆಯನ್ನು ಸಲ್ಲಿಸಿದರು.

error: