May 23, 2024

Bhavana Tv

Its Your Channel

ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ

ಕುಮಟಾ:
೨೦೧೯ -೨೦ ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿ ೨೦ ಲಕ್ಷ ರೂ ವೆಚ್ಚದಲ್ಲಿ ಕುಮಟಾ ತಾಲೂಕಿನ ದೀವಗಿ ಗ್ರಾ.ಪಂ ವ್ಯಾಪ್ತಿಯ ಗುಳ್ಳೆಬೈಲ್ ರಸ್ತೆ ಹಾಗೂ ೩೦ ಲಕ್ಷ ರೂ ವೆಚ್ಚದಲ್ಲಿ ಮಿರ್ಜಾನ ಗ್ರಾ.ಪಂ. ವ್ಯಾಪ್ತಿಯ ಯಲವಳ್ಳಿ ಮರಾಠಕೇರಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು,” ಕುಮಟಾ ಹೊನ್ನಾವರ ಕ್ಷೇತ್ರದ ಬಹುತೇಕ ಭಾಗಗಳಲ್ಲಿ ಅಲ್ಲಿನ ಅಗತ್ಯತೆ ಅರಿತು ನೂತನ ರಸ್ತೆ ನಿರ್ಮಾಣ, ರಸ್ತೆ ಸುಧಾರಣೆಗೆ ಹಣ ಮಂಜೂರಾತಿ ನೀಡಿದ್ದು ಎಲ್ಲೆಡೆ ಗುಣಮಟ್ಟದ ಕೆಲಸ ನಡೆಯುತ್ತಿದೆ. ಕಳಪೆ ಕಾಮಗಾರಿ ಸಹಿಸಲಾಗದು. ಜನರು ಮುಂದಾಗಿ ನಿಂತು ಕಾಮಗಾರಿ ವೇಳೆ ಉತ್ತಮ ರೀತಿಯಾಗಿ ಕೆಲಸ ಮಾಡಿಸಿಕೊಳ್ಳಬೇಕು “ಎಂದರು.

ಈ ಸಂದರ್ಭದಲ್ಲಿ ಬಿಜೆಪಿಯ ಸ್ಥಳೀಯ ಘಟಕಾಧ್ಯಕ್ಷ ಬಾಳಾ ಡಿಸೋಜಾ, ಬಸ್ತೆಂವ ಪುರ್ಟಾಡೋ ಹಾಗೂ ಪ್ರದೀಪ ಹೆಗಡೆ, ದೀವ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೌಡ, ತಾ.ಪಂ ಅದಸ್ಯೆ ಅನುಸೂಯ ಅಂಬಿಗ, ಪಂಚಾಯತ್ ರಾಜ್ ದ ಆರ್.ಜಿ.ಗುನಗಿ ಸೇರಿದಂತೆ ಗ್ರಾಮದ ಅನೇಕ ಹಿರಿಯರು ಪಾಲ್ಲೊಂಡು ಶಾಸಕರಿಗೆ ಅಭಿನಂದಿಸಿದರು.

error: