ಹೋಳಿ ಹಬ್ಬದ ಹೆಸರಲ್ಲಿ ಸಂಗ್ರಹಿಸಿದ ಹಣವನ್ನು ವಿಶೇಷ ಚೇತನ ವ್ಯಕ್ತಿಗೆ ನೀಡುವ ಮೂಲಕ ಖುಷಿಗೆ ಆಚರಿಸುವ ಹಬ್ಬವನ್ನೂ ಮಾನವೀಯ ಕಾರ್ಯಗಳಿಗೆ ನೆರವಾಗಬಹುದು ಎಂದು ತೋರಿಸಿಕೊಟ್ಟವರು ಹೊನ್ನಾವರ ತಾಲೂಕಿನ ರಾಘು ಪ್ರೆಂಡ್ಸ್ ಕಾಸರಕೋಡ ತಂಡದ ಉತ್ಸಾಹಿ ಯುವಕರು.
ಕಳೆದ ಮೂರ್ನಾಲ್ಕು ವರ್ಷದಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿರುವ ಕಟ್ಟೆ ಬಾಯ್ಸ್ ಹೋಳಿ ಹಬ್ಬದಂದು ಬಣ್ಣ ಎರಚಿ ಹಾಡಿ ಕುಣಿದು ಸಂಭ್ರಮಿಸುತ್ತಾರೆ. ವಿವಿಧ ವೇಷ ತೊಟ್ಟು ಮನೆ ಮನೆಗೆ ತೆರಳಿದಾಗ ಸಾರ್ವಜನಿಕರು ಸಂತೋಷದಿAದ ಒಂದಿಷ್ಟು ಹಣವನ್ನು ದಾನವಾಗಿ ನೀಡುತ್ತಾರೆ. ರಸ್ತೆಯಲ್ಲಿಯೂ ವಾಹನ ಸವಾರರು ನೀಡುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ಮಜಾ ಮಾಡಲು ಬಳಸದೇ ದೈಹಿಕವಾಗಿ ನ್ಯೂನತೆ ಹೊಂದಿದವರಿಗೆ ಅಥವಾ ಸಮಾಜದಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾರೆ ಹಬ್ಬದ ಹೆಸರಲ್ಲಿ ಸಾರ್ವಜನಿಕರು ನೀಡಿದ ಹಣವನ್ನು ಅಸಹಾಯಕರಿಗೆ ನೀಡುವ ಮೂಲಕ ತಮ್ಮೊಳಗಿನ ಮಾನವೀಯತೆಯನ್ನು ತೋರಿಸಿದ್ದಾರೆ. ೧೨ ಸಾವಿರ ರುಪಾಯಿಯನ್ನು ಹೊಸಪಟ್ಟಣದ ವಿಶೇಷಚೇತನ ಲೋಲೇಶ ಶೇಟ್ ಅವರಿಗೆ ನೀಡಿದ್ದಾರೆ. ಯುವಕರ ಕಾರ್ಯಕ್ಕೆ ಸಾರ್ವಜನಿಕರು ಎಲ್ಲಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.