ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾAಬಾ ಪ್ರೌಢಶಾಲೆ ಯಲ್ಲಿ ಮೆಟ್ರಿಕ್ ಮೇಳವನ್ನು ಬುಧವಾರ ಆಯೋಜಿಸಿಲಾಗಿದ್ದು ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಿದ್ದ ವಿದ್ಯಾರ್ಥಿಗಳು ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡಲು ಕುಳಿತಿದ್ದರು.ಶಾಲಾ ಆವರಣದಲ್ಲಿ ತಮ್ಮ ಮನೆಗಳಿಂದ ತಂದ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ಗಿಡಗಳನ್ನು ಪೈಪೋಟಿಗೆ ಬಿದ್ದವರಂತೆ ವ್ಯಾಪಾರ ಮಾಡಿ, ಲಾಭ ಗಳಿಸಿ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಕೈತುಂಬ ಹಣ ಸಂಪಾದಿಸಿದರು. ಬೆಳಗ್ಗೆಯಿಂದಲೇ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಇದಕ್ಕೆ ವೇದಿಕೆಯಾದದ್ದು ವಿದ್ಯಾರ್ಥಿಗಳ ಮೆಟ್ರಿಕ್ ಮೇಳ. ಗ್ರಾಹಕರು ಚೌಕಾಶಿ ಮಾಡಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ಕೆಲವು ಗ್ರಾಹಕರು ಚರ್ಚೆ ಮಾಡದೆ, ವಿದ್ಯಾರ್ಥಿಗಳು ನಿಗದಿ ಪಡಿಸಿದ ದರಕ್ಕೇ ಸೊಪ್ಪು- ತರಕಾರಿ ಖರೀದಿಸಿದರು. ವಿದ್ಯಾರ್ಥಿಗಳು ತಾವು ತಂದಿದ್ದ ಎಲ್ಲ ವಸ್ತುಗಳನ್ನೂ ಮಾರಾಟ ಮಾಡಿ, ಲಾಭ ಜೇಬಿಗಿಳಿಸಿಕೊಂಡರು. ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರೇ ಗ್ರಾಹಕರಾಗಿದ್ದರು.
ಇನ್ನೂ ಶಾಲೆಯ ಚೇರ್ಮನ್ ಗಜಾನನ ಗುನಗ,ಮಾತನಾಡಿ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವುದು, ತರಗತಿಯಲ್ಲಿ ಪಡೆದ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು,ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ . ಹೀಗೆ ವ್ಯಾಪಾರ ಮಾಡುವುದರಿಂದ ಗಣಿತದ ಲೆಕ್ಕಗಳನ್ನು ಸರಳಗೊಳಿಸುವ ತಂತ್ರವನ್ನು ವಿದ್ಯಾರ್ಥಿಗಳು ಅರಿಯುತ್ತಾರೆ. ಗೇಣು, ಮಾರು, ಮೊಳ ಮುಂತಾದವುಗಳ ಅರಿವು ಪಡೆದುಕೊಳ್ಳುವುದು ಮತ್ತು ಕೌಶಲ ಬೆಳೆಸುವ ಮತ್ತು ಸಂತಸದ ಕಲಿಕೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಜುಕೇಶನ್ ಕಮೀಟಿಯ ಅಧ್ಯಕ್ಷರಾದ ಪುರುಷೋತ್ತಮ ಶಾನಭಾಗ, ಹೆಗಡೇಕರ ಕಾರ್ಯದರ್ಶಿ ಗಣೇಶ ಶಿಂಗನಕುಳಿ, ಮುಖ್ಯಾಧ್ಯಾಪಕರಾದ ಎಸ್. ಬಿ. ನಾಯ್ಕ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದು ನಿರ್ಣಾಯಕರಾಗಿ ಹೊನ್ನಾವರ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀ ಪ್ರಸನ್ನ ಹೆಬ್ಬಾರ ಮತ್ತು ಕತಗಾಲಿನ ಅಭ್ಯುದಯ ಬೋಧನಾಲಯದ ಶಿಕ್ಷಕಿ ಕುಮಾರಿ ಮಮತಾ ನಾಯ್ಕ ಇವರು ಉಪಸ್ಥಿತರಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.