
ಉತ್ತರಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ೨೦೧೯-೨೦೨೦ ನೇ ಸಾಲಿನ ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ವಿಭಾಗವಾದ ಭಾಷಣ ಸ್ಪರ್ಧೆಯಲ್ಲಿ ಜನತಾ ವಿದ್ಯಾಲಯ ಮುರ್ಡೇಶ್ವರದ ವಿದ್ಯಾರ್ಥಿನಿಯಾದ ಕುಮಾರಿ ನಾಗಶ್ರೀ ಅಣ್ಣಪ್ಪ ನಾಯ್ಕ ಇವಳು ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ ಉತ್ತರಕನ್ನದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯ, ಕಾರವಾರ ಇವರು ದಿನಾಂಕ ೦೨-೦೨-೨೦೨೦ ರಂದು ಉತ್ತರಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ೨೦೧೯-೨೦೨೦ ನೇ ಸಾಲಿನ ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ವಿಭಾಗವಾದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜನತಾ ವಿದ್ಯಾಲಯ ಮುರ್ಡೇಶ್ವರ ತಾ|| ಭಟ್ಕಳದ ವಿದ್ಯಾರ್ಥಿನಿಯಾದ ಕುಮಾರಿ ನಾಗಶ್ರೀ ಅನ್ನಪ್ಪ ನಾಯ್ಕ ಇವಳು ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ. ಜೊತೆಗೆ ಧಾರವಾಡದಲ್ಲಿ ನಡೆಯುವ ವಿಭಾಗಮಟ್ಟದ ಸ್ಪರ್ಧೆಗೆ ಬಾಲಕಿ ಆಯ್ಕೆಯಾಗಿರುತ್ತಾಳೆ. ವಿಜೇತ ವಿದ್ಯಾರ್ಥಿಯ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಲಮಾಣಿಯವರು ಸಿಬ್ಬಂದಿ ವರ್ಗದವರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಎಸ್. ಕಾಮತ್‌ರವರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ