September 14, 2024

Bhavana Tv

Its Your Channel

ಕುಮಟಾ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಪುರಸಭೆ ಅಧಿಕಾರಿಗಳು

ಕುಮಟಾ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಸಂಕಲ್ಪ ತೊಟ್ಟಿರುವ ಪುರಸಭೆ ಅಧಿಕಾರಿಗಳು ಬುಧವಾರ ಸಂತೆಯಲ್ಲಿ ಮಾರಾಟ ಮಾಡಲು ತಂದಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದರು.

ಈ ಕುರಿತು ಮಾತನಾಡಿದ ಮುಖ್ಯಾಧಿಕಾರಿ ಸುರೇಶ್ ಎಮ್.ಕೆ ಮಾತನಾಡಿ ”ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ ಸೇರಿದಂತೆ ಪ್ಲಾಸ್ಟಿಕ್ ನೀರಿನ ಲೋಟ, ಕಾಫಿ ಲೋಟ ಮಾರಾಟ ಮಾಡಬಾರದೆಂದು ಈ ಹಿಂದೆ ಹಲವು ಬಾರಿ ಎಲ್ಲ ಅಂಗಡಿ, ಹೋಟೆಲ್‌ಗಳು, ಬೇಕರಿ ಹಾಗೂ ಬಟ್ಟೆ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಕರಪತ್ರದ ಮೂಲಕ ಪ್ರಚಾರ ನಡೆಸಲಾಗಿದೆ. ಆದಾಗ್ಯೂ ಕೆಲವರು ಹಟಕ್ಕೆ ಬಿದ್ದವರಂತೆ ಅದೇ ಚಾಳಿಯನ್ನು ಮುಂದುವರಿಸುತ್ತಿದ್ದಾರೆ ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ಪರಿಸರಕ್ಕೆ ಧಕ್ಕೆಯಾಗಿ ಸಮಾಜದ ಸ್ವಾಸ್ತ್ಯ ಹಾಳಾಗುತ್ತದೆ. ಪಟ್ಟಣವನ್ನು ಸಂಪೂರ್ಣ ಪ್ಲಾಸ್ಟಿಕ್‌ಮುಕ್ತ ಕುಮಟಾವನ್ನಾಗಿಸುವ ಮೂಲಕ ಉತ್ತಮ ಪರಿಸರ ಸೃಷ್ಟಿಸುವುದೇ ಪುರಸಭೆ ಮುಖ್ಯ ಉದ್ದೆ?ಶ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಇದನ್ನು ಅರ್ಥ ಮಾಡಿಕೊಂಡು ಇನ್ನು ಮುಂದಾದರೂ ಪ್ಲಾಸ್ಟಿಕ್ ಕವರ್‌ಗಳ ಮಾರಾಟವನ್ನು ಕೆ?ಬಿಟ್ಟು ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ವೇಳೆ ಎನ್ವರ್ಮೆಂಟ್ ಇಂಜಿನಿಯರ್ ಮಹೇಂದ್ರ,ಪುರಸಭೆ ಸಿಬ್ಬಂದಿ ಸುಧೀರ್ ಗೌಡ, ಗೋವಿಂದ, ಚೆಲುವರಾಜ್ ಸೇರಿದಂತೆ ಪೌರ ಕಾರ್ಮಿಕರು ಇದ್ದರು..

error: