July 11, 2024

Bhavana Tv

Its Your Channel

ಭಟ್ಕಳದ ಗ್ರಾಮ ದೇವತೆ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಇದೆ ಎಪ್ರೀಲ್ ೨ ರಂದು ನಡೆಯಲಿದ್ದು ದೇಶದ್ಯಾದ್ಯಂತ ಮಹಾಮಾರಿ ಕೊರೊನ ವೈರಸ್ ಪಸರಿಸುತ್ತಿದ್ದರಿಂದ ಅದರ ಮುನ್ನೆಚ್ಚರಿಕೆಯಾಗಿ ರಥೋತ್ಸವ ಮುಂದೂಡುವ ಕುರಿತು ಚರ್ಚಿಸಲು ತಾಲೂಕಾಡಳಿತ ಸಾರ್ವಜನಿಕ ಸಭೆ ಕರೆಯಲಾಗಿತ್ತು

ಉಪವಿಭಾಗಾಧಿಕಾರಿ ಭರತ ಕೆ ಮಾತನಾಡಿ ಕರೊನಾ ಮಹಾಮಾರಿ ತನ್ನ ವ್ಯಾಪ್ತಿ ಮೀರಿ ಪಸರಿಸುತ್ತಿದ್ದು ಸಭೆ, ಸಮಾರಂಭ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಶಾಸ್ತ್ರದ ಪ್ರಕಾರ ಎಪ್ರಿಲ್ ೨ ರಂದು ನಡೆಸಿ ಬಳಿಕ ಒಂದು ತಿಂಗಳ ಬಳಿಕ ನಡೆಸಬಹುದಾಗಿದೆ. ಹಾಗಾಗಿ ಭಟ್ಕಳದಲ್ಲಿ ಎಪ್ರಿಲ್ ೨ರಂದು ನಡೆಯುವ ರಥೋತ್ಸವನ್ನು ಮುಂದೂಡಬೇಕು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಡಿವೈಎಸ್‌ಪಿ ಗೌತಮ ಮಾತನಾಡಿ ಸಾವಿರಾರು ಜನರು ಸೇರುತ್ತಿರುವದರಿಂದ ಸಾಂಕ್ರಮಿಕ ಖಾಯಿಲೆ ಇನ್ನಷ್ಟು ಪಸರಿಸುತ್ತದೆ. ಹಾಗಾಗಿ ಸರ್ಕಾರ ನೀಡಿದ ಆದೇಶವನ್ನು ಪಾಲನೆ ಮಾಡುವದು ನಮ್ಮ ಕರ್ತವ್ಯ
ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಹಿಂದೂ ಧರ್ಮದ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವ ನಡೆಸಲು ಸುತ್ತೊಲೆ ತರುವ ನೀವು ಅನ್ಯ ಧರ್ಮಿಯ ಪ್ರಾರ್ಥನೆ ಮಾಡಲು ಯಾಕೆ ವಿರೋಧಿಸುತ್ತಿಲ್ಲ. ವರ್ಷಕೊಮ್ಮೆ ಬರುವ ಜಾತ್ರೆಯನ್ನು ಮುಂದೂಡುವದಾದರೆ ವಾರಕೊಮ್ಮೆ ನಡೆಸುವ ನಮಾಜನ್ನು ಯಾಕೆ ಮುಂದೂಡುತ್ತಿಲ್ಲ ಎಂದರು. ಅದಕ್ಕೆ ತಹಸೀಲ್ದಾರ ವಿ.ಪಿ. ಕೊಟ್ರಳ್ಳಿ ಮಾತನಾಡಿ ನೀವು ಜಾತ್ರೆಯ ವಿಷಯವನ್ನಷ್ಟೆ ಮಾತನಾಡಿ ಬೇರೆ ಸಂಗತಿ ಅವಶ್ಯವಿಲ್ಲ ಎಂದರು. ಮತ್ತಷ್ಟು ಆಕ್ರೋಶಗೊಂಡ ಜನತೆ ನಾವು ಜಾತ್ರೆಯನ್ನು ನಡೆಸಿಯೆ ಸಿದ್ಧ ಎಂದು ಕೂಗಲು ಆರಂಭಿಸಿದರು.

ಇದಕ್ಕೆ ಮಧ್ಯ ಪ್ರವೇಶಿಸಿದ ಡಿವೈಎಸ್‌ಪಿ ಗೌತಮ ಒಂದು ವೇಳೆ ಅಂದು ೧೪೪ ಸೆಕ್ಷನ ಹಾಕಿದರೆ ಎನು ಮಾಡುತ್ತಿರಿ ಎಂದಾಗ ಬಿಜೆಪಿ ಮುಖಂಡ ಕೃಷ್ಣಾ ನಾಯ್ಕ ಮಾತನಾಡಿ ನೀವು ಯಾವ ೧೪೪ ಸೆಕ್ಷನ್ ಬೇಕಾದರೂ ಹಾಕಿ ನಾವು ಜಾತ್ರೆ ಮಾಡಿಯೆ ಸಿದ್ದ. ಜನ ಸೇರಿಸಿ ಜಾತ್ರೆ ನಾವು ಮಾಡುತ್ತೇವೆ ಎಂದು ಆಕ್ರೋಶ ಭರಿತರಾಗಿ ಮಾತನಾಡಿ ಕಾನೂನು ಮಾಡುವುದಾದರೆ ಎಲ್ಲರಿಗೂ ಒಂದೇ ಮಾಡಿ ಅನ್ಯ ಧರ್ಮದವರಿಗಿಲ್ಲದ ಕಟ್ಟಲೆ ಹಿಂದೂ ಧರ್ಮಕ್ಕೆ ಮಾತ್ರ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೊಂದಲ್ಲದಲ್ಲೆ ನಡೆದ ಸಭೆಯ ಕೊನೆಯಲ್ಲಿ ರಥೋತ್ಸವ ಮುಂದೂಡುವ ತೀರ್ಮಾನ ಕೈಗೊಳ್ಳಲಾಯಿತು. ತಾಲೂಕಾಡಳಿತದ ತಾರತಮ್ಯ ನಡೆಸುತ್ತಿದೆ. ಇದು ಸರಿಯಲ್ಲ ಎನ್ನುವ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು.
ಕೊನೆಯಲ್ಲಿ ಸಾರ್ವಜನಿಕರು ಜಾತ್ರೆಯನ್ನು ಮೂಂದೂಡುವ ತೀರ್ಮಾನ ಕೈಗೊಂಡಿದ್ದಾದರು ಅನ್ಯ ಧರ್ಮದವರಿಗೂ ಈ ಕಾನೂನನ್ನು ಪಾಲನೆ ಮಾಡುವಂತೆ ಖಡಕ ಸೂಚನೆ ಪಾಲಿಸುವಂತೆ ತಾಲೂಕಾಢಳಿತ, ಪೊಲೀಸ್ ಅಧಿಕಾರಿಗಳಲ್ಲಿ ಪ್ರಶ್ನಿಸುತ್ತಾ ಆಕ್ರೋಶದ ಮಾತುಗನ್ನಾಡಿದರು.

ಈ ಸಂದರ್ಬದಲ್ಲಿ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಎ. ಮೊಗೇರ, ಪ್ರ.ಕಾರ್ಯದರ್ಶಿ ಶಿವರಾಮ ಟಿ. ನಾಯ್ಕ, ಉಮಾನಾಥ ಭಟ್ಕಳ, ಲತಾ ಪೈ, ಮಂಗಳ ಟಿ ಗೊಂಡ, ನಾಗೇಶ ಎಂ ಪೈ, ಗಣಪತಿ ಆಚಾರ್ಯ, ವಿನಾಯಕ ಭಟ್ ಸೇರಿದಂತೆ ಶ್ರೀಪಾದ ಕಂಚುಗಾರ, ಸುಬ್ರಾಯ ಕಾಮತ, ವಿನಾಯಕ ಕಾಮತ, ಶ್ರೀಧರ ನಾಯ್ಕ ಆಸರಕೇರಿ, ಬಿಜೆಪಿ ಜಿಲ್ಲಾ ಪ್ರ.ಕಾ ಗೋವಿಂದ ನಾಯ್ಕ, ಬಾಬು ಮಾಸ್ಟರ್, ಶಾಂತರಾಮ ಭಟ್ಕಳ ಸೇರಿದಂತೆ ಊರಿನ ಪ್ರಮುಖರು ಇದ್ದರು.

error: