
ಕೆಲ ದಿನಗಳಿಂದ ವಿಜಯಪುರದ ಭೀಮಾ ತೀರ ಅಫರಾಧ ಚಟುವಟಿಕೆಯ ಹಣೆಪಟ್ಟಿಯಿಂದ ಹೊರಬಿದ್ದಿತ್ತು. ಈದೀಗ ಮತ್ತೊಮ್ಮೆ ಭೀಮಾತೀರ ಸುದ್ದಿಯಾಗಿದ್ದು ಶುಕ್ರವಾರ ಆಸಿಡ್ ಸುರಿದು ವ್ಯಕ್ತಿಯೊಬ್ಬರ ಬರ್ಬರ ಕೊಲೆ ಮಾಡಿರುವ ಘಟನೆ ಸಂಭವಿಸಿದೆ. ವಿಜಯಪೂರ ಜಿಲ್ಲೆಯ ಚಡಚಣ ತಾಲೂಕಿನ ದೂಳಖೇಡ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯ ಮುಖದ ಮೇಲೆ ಆಸಿಡ್ ಸುರಿದು ಹಂತಕರು ಕೊಲೆ ಮಾಡಿದ್ದಾರೆ. ಹತ್ಯೆಯಾದವನು ಸರಿ ಸುಮಾರು ೩೮ ವರ್ಷದ ವ್ಯಕ್ತಿಯಾಗಿದ್ದು ಅಪರಿಚಿತ ದುಷ್ಕರ್ಮಿಗಳು ಹತ್ಯೆ ನಡೆದಿದ್ದು ಕೊಲೆ ಮಾಡಿ ಮುಖ ಗುರುತುಸಿಗದಂತೆ ಆಸಿಡ್ ಸುರಿದಿದ್ದಾರೆ ಇನ್ನು ಕೊಲೆಯಾದ ಸ್ಥಳಕ್ಕೆ ಝಳಕಿ ಫೊಲಿಸ್ ರು ದೌಡಾಯಿಸಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.