September 18, 2024

Bhavana Tv

Its Your Channel

ಅಕ್ರಮ ಸಕ್ರಮದ ಬಿಗ್ ಪೈಟ್ ಪುರಸಭಾ ಸದಸ್ಯ ಲೋಕೇಶ ವಿರುದ್ದ ತೊಡೆ ತಟ್ಟಿದ ಸದಸ್ಯ ಸಂತೋಷ

ಕೃಷ್ಣರಾಜಪೇಟೆ ಪುರಸಭೆಯ ಸದಸ್ಯ ಹೆಚ್.ಆರ್.ಲೋಕೇಶ್ ಅಕ್ರಮ ಸರ್ಕಾರಿ ನಿವೇಶನಗಳನ್ನು ಸಕ್ರಮಗೊಳಿಸಿಕೊಳ್ಳಲು ಸದಸ್ಯರಾಗಿದ್ದಾರೆ.ಇಂತಹ ಸ್ವಾರ್ಥ ಸಾಧಕರು ಹಾಗೂ ಹೊಗಳು ಭಟ್ಟರನ್ನು ಸಚಿವ ನಾರಾಯಣಗೌಡ ದೂರವಿಡಲು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಆಗ್ರಹ ….

ನಾನು ಮಾಡದ ತಪ್ಪಿಗಾಗಿ ಜೈಲಿಗೆ ಹೋಗಿ ಬಂದಿದ್ದೇನೆ. ಸರ್ಕಾರಿ ಆಸ್ತಿಪಾಸ್ತಿಯ ಉಳಿವಿಗಾಗಿ ಮತ್ತೊಮ್ಮೆ ಹೋರಾಟ ಮಾಡಿ ಜೈಲಿಗೆ ಮತ್ತೊಮ್ಮೆ ಹೋಗಲು ಸಿದ್ಧ.ಅಕ್ರಮ ಆಸ್ತಿಯನ್ನು ಪುರಸಭೆಯ ಸದಸ್ಯ ಲೋಕೇಶ್ ಸಕ್ರಮ ಮಾಡಿಕೊಳ್ಳಲು ಬಿಡಲ್ಲ.ನ್ಯಾಯ, ನೀತಿ ಸತ್ಯ ಧರ್ಮದ ಉಳಿವಿಗೆ ನನ್ನ ಹೋರಾಟ ನಿರಂತರವಾಗಿ ನಡೆಯಲಿದೆ.ನೂರು ಜನರು ಲೋಕೇಶ್‌ರಂತಹ ಸ್ವಾರ್ಥಸಾಧಕರು ಅಡ್ಡಿಮಾಡಿದರೂ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ ಪುರಸಭೆಯ ಸದಸ್ಯ ಸಂತೋಷ್. ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ವಿಶಾಲವಾದ ಜಾಗದಲ್ಲಿ ಸುಸಜ್ಜಿತವಾದ ಉದ್ಯಾನವನ ನಿರ್ಮಾಣವಾಗಬೇಕು. ಪಾರ್ಕಿನ ತಡೆಗೋಡೆಯ ನಿರ್ಮಾಣ ಕೆಲಸವು ಸಂಪೂರ್ಣವಾಗಬೇಕು ಎನ್ನುವುದು ಬಡಾವಣೆಯ ನಿವಾಸಿಗಳ ಒತ್ತಾಯವಾಗಿದೆ.ಪೋರ್ಜರಿ ದಾಖಲೆಗಳನ್ನು
ನಿರ್ಮಿಸಿಕೊಂಡಿರುವ ಕೋಟಿಗಟ್ಟಲೆ ಬೆಲೆಬಾಳುವ ನಿವೇಶನವನ್ನು ಲೋಕೇಶ್ ತಮ್ಮದಾಗಿದ್ದು ಕ್ರಮಬದ್ಧವಾಗಿದ್ದರೆ ಏಕೆ ಖಾತೆ ಮಾಡಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದ ಸಂತೋಷ್ ಪುರಸಭೆಯಲ್ಲಿ ಆಸ್ತಿ ಸುಂರಕ್ಷಣೆಗಾಗಿ ಹಾಕಿರುವ ಬೇಲಿಯನ್ನೇ ಕತ್ತರಿಸಿ ಲೋಕೇಶ್ ಅವರಂತಹ ಸ್ವಾರ್ಥ ಸಾಧಕರು ಸರ್ಕಾರಿ ಆಸ್ತಿ ಕಬಳಿಸಲು ಸಂಚು ಮಾಡುತ್ತಿದ್ದಾರೆ.. ಸಚಿವ ನಾರಾಯಣಗೌಡರು ಲೋಕೇಶ್ ಅವರಂತಹ, ಸ್ವಾರ್ಥಿ ಅವರ ಮಾತಿಗೆ ಮರುಳಾಗಿ ಅನ್ಯಾಯಕ್ಕೆ, ಅಕ್ರಮಕ್ಕೆ ಸಾಥ್ ನೀಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿಕೆಜಿ ಮಹೇಶ್, ನಾಗರಾಜೇಗೌಡ, ಕುಮಾರ್, ಲೋಕೇಶ್ ಗೌಡ, ಅರ್ಜುನ ಮತ್ತಿತರರು
ಉಪಸ್ಥಿತರಿದ್ದರು…..

error: