October 5, 2024

Bhavana Tv

Its Your Channel

ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿ ನಿಜ ಎಂದು ಭಾವಿಸಿ ಕರ್ನಾಟಕ ಬ್ಯಾಂಕ್ ಮುಗಿ ಬಿದ್ದ ಬ್ಯಾಂಕ್ ಗ್ರಾಹಕರು.

ಬ್ಯಾಂಕನಲ್ಲಿಟ್ಟ ಠೇವಣೆ ಖಾತೆಯ ಹಣ ವಾಪಸ್ಸು ಪಡೆಯಿರಿ ಇಲ್ಲವಾದರೆ ನಿಮ್ಮ ಹಣ ಕೈಗೆ ಸಿಗುವುದಿಲ್ಲ ಎಂದು ಕಿಡಿಗೇಡಿಗಳು ಹಚ್ಚಿದ್ದ ಸುಳ್ಳು ಸುದ್ದಿ ನಿಜ ಎಂದು ಭಾವಿಸಿದ ಸಾಲ್ಕೋಡ್ ಸುತ್ತಮುತ್ತಲಿನ ಗ್ರಾಮಸ್ಥರು ಹೊಸಾಕುಳಿ ಬ್ಯಾಂಚ್‌ನತ್ತ ಬೆಳಗಿನಿಂದಲೇ ಕ್ಯೂ ನಿಂತಿದ್ದರು. ಇದು ಕಳೆದ ನಾಲ್ಕು ದಿನದಿಂದ ಗ್ರಾಮದಲ್ಲಿ ಕೊರೊನಾಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆದಿತ್ತು.
ಕಳೆದ ನಾಲ್ಕು ದಿನದಿಂದ ಗ್ರಾವದೆಲ್ಲಡೆ ಕೇಳಿ ಬರುತ್ತಿರುತ್ತಿರುದರಿಂದ ಅರೇಅಂಗಡಿಯಲ್ಲಿರುವ ಹೊಸಕುಳಿ ಬ್ರಾಂಚ್ ಮುಂದೆ ನೂರಾರು ಸಂಖ್ಯೆಯ ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣ ತೆಗೆಯಲು ಜಮಾವಣೆಗೊಂಡಿದ್ದರು. ಬ್ಯಾಂಚ್ ಆರಂಭಗೊAಡು ೪೦ ವರ್ಷ ಕಳೆದಿದ್ದು ೪೫೦೦ಕ್ಕೂ ಹೆಚ್ಚು ಗ್ರಾಹಕರು ಇಷ್ಟು ವರ್ಷದಿಂದ ನಂಬಿ ಹಣವನ್ನು ಇಟ್ಟಿದ್ದರು. ಗ್ರಾಹಕರ ವಿಶ್ವಾಸವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿದ್ದ ಸಿಬ್ಬಂದಿಗಳಿಗೆ ೪ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಬೆಚ್ಚಿಬೀಳಿಸಿತ್ತು. ಅಲ್ಲದೇ ಈ ಬಗ್ಗೆ ಬ್ಯಾಂಕಿಗೆ ಆಗಮಿಸಿದ ಗ್ರಾಹಕರಿಗೆ ಎಷ್ಟೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಜಿಲ್ಲೆಯ ವಿವಿದಡೆ ಬ್ಯಾಂಚ್ ಗಳಿದ್ದು ಒಟ್ಟು ೮೪೦ಕ್ಕೂ ಅಧಿಕ ಭಾಗದಲ್ಲಿ ಗ್ರಾಹಕರ ವಿಶ್ವಾಸ ಇಲ್ಲಿಯಾಕೆ ಕಳೆದುಕೊಂಡಿತ್ತು ಎನ್ನುವುದಕ್ಕೆ ಮುಖ್ಯ ಕಾರಣ ಗ್ರಾಮದವರ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಬ್ಯಾಂಕಿಗೆ ಆಗಮಿಸಿದ ಒರ್ವರಿಗೆ ನೀವು ನೀಡಿದ ದಾಖಲಾತಿಗಷ್ಟೆ ಸಾಲ ನೀಡಬಹುದು ಅದಕ್ಕಿಂತ ಹೆಚ್ಚುವರಿ ನೀಡಲು ಬರುವುದಿಲ್ಲ ಎನ್ನುವ ಸಿಬ್ಬಂದಿ ಉತ್ತರಕ್ಕೆ ಸೇಟು ತೀರಿಸಿಕೊಳ್ಳುವುದಕ್ಕೆ ಈ ಅಸ್ತç ಬಳಸಿಕೊಂಡಿದ್ದಾರೆ ಎನ್ನುವ ಮಾತು ಇದರ ಜೊತೆ ಇನ್ನೊರ್ವರಿಗೆ ಬ್ಯಾಂಕ್ ಆಗಮಿಸಿದಾಗ ಸಾಮನ್ಯ ಗ್ರಾಹಕರಿಗೆ ನೀಡುವಂತೆ ಗೌರವ ನೀಡಿರುವುದು ಗೌರವಾನ್ವಿತರ ಸ್ಥಾನ ತೋರಿಸಲ್ಲ ಎನ್ನುವ ಕಾರಣದಿಂದ ಇರ್ವರು ಒಟ್ಟಾಗಿ ಉಳಿದ ಸಾರ್ವಜನಿಕರ ಮೂಲಕ ಈ ಸುಳ್ಳು ಸುದ್ದಿಯನ್ನು ನಿಜ ಎಂದು ಬಿಂಬಿಸಿ ಸೋಶೀಯಲ್ ಮೀಡಿಯಾ ಮೂಲಕ ಹರಿ ಬಿಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ. ಬಡ ಮಧ್ಯಮ ವರ್ಗದ ಗ್ರಾಹಕರು ತಮಗೆ ಕಷ್ಟ ಕಾಲದಲ್ಲಿ ಅನೂಕೂಲವಾಗಲಿ ಎಂದು ಕೂಡಿಟ್ಟ ಹಣ ಕೈ ತಪ್ಪಬಹುದೆನ್ನುವ ಆತಂಕದಿAದ ಈ ಸುಳ್ಳು ಸುದ್ದಿ ನಿಜ ಎಂದು ಭಾವಿಸಿ ಬೆಳಿಗ್ಗೆಯಿಂದಲೇ ಬ್ಯಾಂಕ್ ಮುಂದೆ ಕಾಯುತ್ತಾ ತಮ್ಮ ಹಣ ವಾಪಸ್ಸು ಪಡೆಯುತ್ತಿದ್ದರು. ಇದನ್ನು ಗಮನಿಸಿದ ಗ್ರಾಮದ ಪ್ರಜ್ಞಾವಂತರು ತಿಳಿ ಹೇಳುತ್ತಾ ಬಂದರೂ ನಂಬಲಿಲ್ಲ. ಕೊನೆಗೆ ಉಡುಪಿ ಪ್ರಧಾನ ಕಛೇರಿಯ ಮುಖ್ಯಸ್ಥರನ್ನು ಶಾಖೆಗೆ ಕರೆಯಿಸಿ ಮಾಹಿತಿ ನೀಡಿದರು. ಈಗಾಗಲೇ ನಮ್ಮ ಬ್ಯಾಂಕ್ ಆಡಳಿತ ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಖಾಸಗಿ ವಲಯದ ನಮ್ಮ ಬ್ಯಾಂಕ್ ಮುಚ್ಚುವುದಿಲ್ಲ. ಬ್ಯಾಂಕ್‌ನ ಠೇವಣಿದಾರು ಹಾಗೂ ಶೇರುದಾರರಿಗೆ ಭಯಬೇಡ. ಭಾರತದ ರಿಸರ್ವ ಬ್ಯಾಂಕ್ ಮಾರ್ಚ ೫ರಂದು ಯೆಸ್ ಬ್ಯಾಂಕ್ ನಿರ್ಭಂದ ಹೇರಿತ್ತು. ಇಂಡಿಯಾ ಟುಡೆ ಸುದ್ದಿ ವಾಹಿನಿ ತಪ್ಪು ಮಾಹಿತಿ ಮೇರೆಗೆ ನಮ್ಮ ಬ್ಯಾಂಕ್ ಹೆಸರು ಹೇಳಿದೆ ದೇಶ ವಿದೇಶಗಳಲ್ಲಿ ತಪ್ಪದೆ ಪಾಲಿಸಿಕೊಂಡು ಬಂದಿರುವ ಬಂಡವಾಳ ಪರ್ಯಾಪ್ತತಾ ಅನುಪಾತವೇ ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾಗಿಯೇ ಹೊರತು ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅರ್ಥವಿಲ್ಲದ ಎಂ-ಕ್ಯಾಪ್ ಅನುಪಾತ ಅಲ್ಲ ಎಂದು ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ .ಸ್ಟಷ್ಟಪಡಿಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಕಲ್ಲ ಎಂದರು.
ಈ ಎಲ್ಲಾ ಬೆಳವಣೆಗೆಯ ನಂತರವು ಕೆಲ ಗ್ರಾಹಕರು ಸುಳ್ಳು ಸುದ್ದಿ ಹರಡಿದವರಿಗೆ ಹಿಡಿಶಾಪ ಹಾಕುತ್ತಾ ಬ್ಯಾಂಕ್‌ನಿAದ ನಿರ್ಗಮಿಸಿದರೆ ಇನ್ನು ಕೆಲವರು ಗೊಂದಲದಲ್ಲಿಯೇ ಇದ್ದರು. ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್ ಬಗ್ಗೆ ಸುಳ್ಳು ಮಾಹಿತಿ ಹರಿಬಿಟ್ಟವರ ವಿರುದ್ದ ಕಾನೂನು ಸಮರಕ್ಕೆ ಮುಂದಾಗಿರುವ ಬ್ಯಾಂಕ್ ಸೈಬರ್ ಕ್ಲೆöÊಂ ದೂರು ದಾಖಲಿಸಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಶೋಸಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಈ ವಿಷಯ ಬ್ಯಾಂಕ್ ಸಿಬ್ಬಂದಿಗಳಿಗೆ ಕೋರೋನಾ ಭೀತಿ ಮಾರ್ಚ ಅಂತ್ಯದ ಒತ್ತಡದ ಮಧ್ಯೆ ಗೋಂದಲವುAಟು ಮಾಡಿದ್ದು ಹೈರಾಣಾಗಿದ್ದಾರೆ. ಸಾರ್ವಜನಿಕರು ಈಗಲಾದರೂ ಎಚ್ಚೆತ್ತುಕೊಂಡು ಸುಳ್ಳುಸುದ್ದಿ ನಿಜ ಹೇಳುವುದು ಬಿಟ್ಟು ಬ್ಯಾಂಕ್‌ನ ಮೇಲೆ ವಿಶ್ವಾಸ ಇಟ್ಟುಕೊಂಡು ಶಾಖೆಯ ಅಸ್ಥಿತ್ವ ಉಳಿಸಿಕೊಳ್ಳಲು ಮುಂದಾಗಬೇಕಿದೆ

error: