ಹೊನ್ನಾವರ ಬಂದರ್ ಭಾಗದಲ್ಲಿ ಪ್ರತಿ ಶನಿವಾರದಂತೆ ಇಂದು ನಡೆಯಬೇಕಿದ್ದ ವಾರದ ಸಂತೆ ಬಂದ್ ಆಗಿದ್ದರರಿಂದ ಜನದಟ್ಟತೆ ಹೊನ್ನಾವರದಲ್ಲಿ ಕಡಿಮೆಯಾಗಿತ್ತು ಶುಕ್ರವಾರ ಸಂಜೆ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದಂತೆ ಶನಿವಾರದಿಂದ ಮುಂದಿನ ಆದೇಶ ಬರುವವರೆಗೆ ಇಡಗುಂಜಿಯಲ್ಲಿ ಭಕ್ತರಿಗೆ ಸಾರ್ವಜನಿಕ ದರ್ಶನ, ಸೇವೆಯ ಅವಕಾಶವನ್ನು ನಿಲ್ಲಿಸಲಾಗಿದೆ. ಅರ್ಚಕರು ಅಭಿಷೇಕ ಮತ್ತು ತ್ರಿಕಾಲ ಪೂಜೆಯನ್ನು ನಡೆಸಿದರು. ಗಣಹವನ, ಮೊದಲಾದ ಸೇವೆಗಳು ನಡೆದಿಲ್ಲ ಎಂದು ದೇವಾಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ ಗ್ರಾಮೀಣ ಭಾಗದಿಂದ ಪಟ್ಟಣದತ್ತ ಮುಖ ಮಾಡುವ ಜನ ಮುಖಕ್ಕೆ ಟವೆಲ್ ಕಟ್ಟಿಕೊಂಡಿರುವುದು ಕಂಡುಬAತು. ಬಸ್‌ಸ್ಟಾö್ಯಂಡ್ ಬಳಿ ರಿಕ್ಷಾ ಚಾಲಕರು ಮತ್ತು ಗ್ರಾಮೀಣ ಭಾಗದಿಂದ ತರಕಾರಿ ತಂದು ಮಾಡುವ ಹೆಂಗಸರೂ ಸಹ ಇಂದು ಮುಖಕ್ಕೆ ಟವೆಲ್ ಕಟ್ಟಟಿಕೊಂಡಿದ್ದರು. ನಿತ್ಯ ವ್ಯವಹರಿಸಿ ಹೊಟ್ಟೆ ತುಂಬಿಸಿಕೊಳ್ಳುವ ಇಂತಹ ಶ್ರಮಿಕ ವರ್ಗಕ್ಕೆ ಕೊರೋನಾ ಡಬಲ್ ಹೊಡೆತ ನೀಡಿದೆ. ಅನಿವಾರ್ಯವಾಗಿ ಎಲ್ಲರೂ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳುವಷ್ಟು ಜಾಗೃತಿ ಬಂದಿದೆ. ಶನಿವಾರದ ಸಂತೆ ಬಂದ್ ಆಗಿರುವುದನ್ನು ಮುಂಚಿತವಾಗಿ ತಿಳಿಸದ ಕಾರಣ ಸಾಗರ ಭಾಗದಿಂದ ತರಕಾರಿ ವಾಹನಗಳು ಬಂದಿದ್ದವು. ಅವರನ್ನು ಊರ ಹೊರಗೆ ಕಳಿಸಲಾಯಿತು. ಅಲ್ಲಿ ದೂರದೂರ ಕುಳಿತು ತಂದಷ್ಟು ಮಾರಿಹೋಗಲು ನಿಶ್ಚಯಿಸಿದಾಗ ಅಲ್ಲಿಂದಲೂ ಓಡಿಸಲಾಯಿತು. ತುಂಬಿಕೊAಡು ಬಂದ ತರಕಾರಿಯನ್ನು ಹಾಗೇ ಒಯ್ದರು.
…………………………………
ನಗರದ ರಥೋತ್ಸವ, ಉತ್ಸವ ಮುಂದಕ್ಕೆ
ಸರ್ಕಾರದ ಸಲಹೆಯಂತೆ ಜಿಎಸ್‌ಬಿ ಸಮಾಜದ ಪ್ರಮುಖ ದೇವಾಲಯವಾದ ವೆಂಕಟ್ರಮಣ ದೇವಸ್ಥಾನದ ವಾರ್ಷಿಕ ರಥೋತ್ಸವ, ಯುಗಾದಿ ಉತ್ಸವಗಳನ್ನೆಲ್ಲಾ ರದ್ದುಪಡಿಸಲಾಗಿದೆ ಮಾತ್ರವಲ್ಲ ದೇವಾಲಯದ ನಿತ್ಯ ದರ್ಶನ ಕಾರ್ಯಕ್ರಮ ಇರುವುದಿಲ್ಲ ಎಂದು ದೇವಾಲಯ ಪ್ರಕಟಿಸಿದೆ.
…………………………….
ಕೊರೋನಾ ಮುನ್ನೆಚ್ಚರಿಕೆಯ ಸಂದೇಶ ಹಳ್ಳಿಹಳ್ಳಿಗಳನ್ನು ತಲುಪಿದೆ. ಪೇಟೆಗೆ ಬರುವ ಜನರ ಸಂಖ್ಯೆ ನಿತ್ಯ ಬರುವವರಿಗಿಂತ ಶೇ. ೧೦ರಷ್ಟು ಮಾತ್ರ. ಎಲ್ಲರೂ ಮುಖಕ್ಕೆ ಟವೆಲ್ ಕಟ್ಟಿಕೊಂಡು ಬರುತ್ತಿದ್ದಾರೆ. ಅಳ್ಳಂಕಿಯ ಸ್ಪಂದನ ಸೇವಾ ಬಳಗ ಸರ್ಕಾರದ ಮಾರ್ಗದರ್ಶನದಂತೆ ದೊಡ್ಡ ಪ್ರಮಾಣದಲ್ಲಿ ಕರಪತ್ರ ಮತ್ತು ಪೋಸ್ಟರ್‌ಗಳನ್ನು ಪ್ರಕಟಿಸಿದೆ.
…………………………….
ಸೇಫ್‌ಸ್ಟಾರ್ ಸೌಹಾರ್ದ ಸಂಸ್ಥೆ ತನ್ನ ಎಲ್ಲ ಸಿಬ್ಬಂದಿಗಳಿಗೆ ಮುಖವಸ್ತç ನೀಡಿದೆ. ಸಂಸ್ಥೆಯ ಅರ್ಧಬಾಗಿಲು ಹಾಕಲಾಗಿದ್ದು ಒಳಗೆ ಬರುವವರು ಸ್ಯಾನಿಟೈಸರ್‌ನಿಂದ ಕೈ ಒರಸಿಕೊಂಡು ಬರಬೇಕು ಎಂದು ಸೂಚನೆಯೊಂದಿಗೆ ಬಾಗಿಲಬಳಿಯಲ್ಲಿ ಬಾಟಲಿಗಳನ್ನು ಇಟ್ಟಿದೆ.
…………………………….
ದಿನಕ್ಕೆ ರಾಜಧಾನಿಗೆ ೩೬ಬಸ್ ಓಡಿಸುತ್ತಿದ್ದ ಶ್ರೀಕುಮಾರ ಸಂಸ್ಥೆಯ ಕೇವಲ ೪ಬಸ್ಸುಗಳು, ಕೆಲವೇ ಲಾರಿಗಳು ಹೋಗಿ ಬರುತ್ತಿದ್ದವು. ಇಂದಿನಿAದ ಲಾರಿ ಸಂಚಾರ ಇಲ್ಲ, ಒಂದು ಬಸ್ ಬೆಂಗಳೂರಿಗೆ ಹೊರಟಿದೆ.
…………………………….
ನೀಲಗೋಡು ಕ್ಷೇತ್ರದಲ್ಲಿ ನಡೆಯುವ ದರ್ಶನ ಮತ್ತು ಅಮವಾಸ್ಯೆಯ ವಿಶೇಷ ಪೂಜೆಗಳನ್ನು, ತೀರ್ಥಸ್ನಾನಗಳನ್ನು ರದ್ದುಪಡಿಸಲಾಗಿದೆ, ಭಕ್ತರು ಸಹಕರಿಸಬೇಕು ಎಂದು ಕೋರಿದ್ದಾರೆ.
ಒಟ್ಟಾರೆ ತಾಲೂಕು ಸ್ಥಭವಾಗಿದ್ದು ಕರೋನಾ ಮುನ್ನೆಚ್ಚರಿಕೆಯ ಕ್ರಗಳನ್ನು ಸಾರ್ವಜನಿಕರು ಪಾಲಿಸುತ್ತಿದ್ದಾರೆ ಅಧಿಕಾರಿಗಳು ಭಯಬೇಡ ಜಾಗೃತಿ ಎನ್ನುವ ಮೂಲಕ ಸುರಕ್ಷತಾ ಕ್ರಮ ಕೈಗೊಳ್ಳಲು ಸಜ್ಜಾಗಿದ್ದು ತಾಲೂಕಿನ ಒಳ ಭಾಗಕ್ಕೆ ಬರಲು ಚಂದಾವರ ಗೇರುಸೊಪ್ಪಾ ಸಮೀಪ ಚೆಕ್ ಪೊಸ್ಟ ತೆರೆಯಲಾಗಿದೆ
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.