October 5, 2024

Bhavana Tv

Its Your Channel

ಕುಮಟಾ ಪಟ್ಟಣದ ಮೂರೂರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಆವಾರದಲ್ಲಿ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕ ದಿನಕರ ಶೆಟ್ಟಿ ಶನಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯು ಈವರೆಗೆ ತಾತ್ಕಾಲಿಕ ಚಿಕ್ಕ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು ದೊಡ್ಡ ಕಟ್ಟಡದ ಅಗತ್ಯವಿತ್ತು. ಈ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಗೆ ಮಂಜೂರಾತಿ ದೊರೆತು ಸಮಾಜ ಕಲ್ಯಾಣ ಇಲಾಖೆಗೆ ಸುಸಜ್ಜಿತ ಕಚೇರಿ ಕಟ್ಟಡವನ್ನು ೧.೮೧ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವ ಬಗ್ಗೆ ನಿರ್ಮಿತಿಯವರಿಗೆ ಸೂಚಿಸಿದ್ದೇನೆ ಎಂದರು.
ತಾಲೂಕಿನಾದ್ಯಂತ ಹಾಳಾದ ರಸ್ತೆಗಳನ್ನು ಮಳೆಗಾಲದೊಳಗೆ ಪುನಃ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಅದರಂತೆ ಈಗಾಗಲೇ ಎಲ್ಲೆಡೆ ರಸ್ತೆ ಕಾಮಗಾರಿಗಳನ್ನು ಆರಂಭಿಸಿದ್ದು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಈ ವೇಳೆ ನಿರ್ಮಿತಿ ಯೋಜನಾಧಿಕಾರಿ ಹರ್ಷ, ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರಿ, ಸುಮಂಗಲಾ ಭಟ್ಟ, ಪುರಸಭೆಯ ಸದಸ್ಯ ಸಂತೋಷ ನಾಯ್ಕ, ಹೇಮಂತಕುಮಾರ, ವಿನಾಯಕ ನಾಯ್ಕ ಇನ್ನಿತರರು ಇದ್ದರು.
ನಂತರ ಹೆಗಡೆಯ ತಣ್ಣೀರಕುಳಿಯಲ್ಲಿ ೨೫ ಲಕ್ಷರೂ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. ಜಿಪಂ ಸದಸ್ಯ ರತ್ನಾಕರ ನಾಯ್ಕ, ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ಹೆಗಡೆ ಪಂಚಾಯಿತಿ ಅಧ್ಯಕ್ಷ ಮಂಜು ಪಟಗಾರ, ಸದಸ್ಯ ಬಿ.ಜಿ.ಶಾನಭಾಗ ಇನ್ನಿತರರು ಇದ್ದರು.

error: