May 23, 2024

Bhavana Tv

Its Your Channel

ಕರೋನಾ ಎಫೆಕ್ಟ ಹೊನ್ನಾವರ ಬಸ್ ನಿಲ್ದಾಣ ಖಾಲಿ ಖಾಲಿ, ಬಾರ್ ಮುಂದೆ ಮಧ್ಯ ಪಡೆಯಲು ಮೀಟರ್ ಅಳತೆ.

ಹೊನ್ನಾವರ ಪಟ್ಟಣ ಪ್ರತಿ ಸೋಮವಾರದಂತೆ ಇರದಿದ್ದರೂ ಬೈಕ್ ಕಾರುಗಳ ಓಡಾಟಕ್ಕೆ ಭರವಿರಲಿಲ್ಲ. ಕೇಲವೇ ಕೆಲವು ಜನರು ಮಾಸ್ಕ್ ಧರಿಸಿದ್ದರೆ ಹಲವರು ಇದಕ್ಕೂ ತಮಗೂ ಸಂಭದವಿಲ್ಲAದAತೆ ಸಂಚರಿಸುತ್ತಿದ್ದರು. ಬಸ್ ನಿಲ್ದಾಣದಿಂದ ಗ್ರಾಮೀಣ ಭಾಗಕ್ಕೆ ಯಾವುದೇ ಬಸ್ ಸಂಚಾರವಿರಲಿಲ್ಲ. ಇನ್ನೊಂದಡೆ ಭಟ್ಕಳ, ಕುಮುಟಾ, ಗೇರುಸೋಪ್ಪಾ, ಚಂದಾವರ ಭಾಗಕ್ಕೆ ಸಂಚರಿಸುವ ಮ್ಯಾಕ್ಸಿ ಕ್ಯಾಬ್ ಸಂಚಾರ ನಡೆಸದೇ ಇರುವುದರಿಂದ ಗ್ರಾಮೀಣ ಭಾಗದವರು ಪಟ್ಟಣಕ್ಕೆ ಹೆಚ್ಚಿನವರು ಬರಲು ಸಾಧ್ಯವಾಗಲಿಲ್ಲ. ಇನ್ನು ಪಟ್ಟಣ ಬಾಗದವರು ಹೆಚ್ಚಿನವರು ಬುದ್ದಿವಂತರಾದರೂ ಮಾಸ್ಕ ಧರಿಸದೇ ಪಟ್ಟಣದಲ್ಲಿ ತಮ್ಮ ದಿನನಿತ್ಯದ ವಹಿವಾಟು ನಡೆಸಲು ಬಂದಿದ್ದರು.


೧೪೪ ಸೆಕ್ಷನ್ ಜಾರಿಯಾದ ಹಿನ್ನಲೆಯಲ್ಲಿ ೫ ಜನಕ್ಕಿಂತ ಹೆಚ್ಚು ಜನರು ಗುಂಪು ಗುಂಪಾಗಿ ಕಾಣಿಸಿಕೊಳ್ಳುವಂತಿಲ್ಲ ಎನ್ನುವ ಅರಿವಿದ್ದೂ ಅದನ್ನು ಲೆಕ್ಕಿಸದೇ ಗುಂಪು ಗುಂಪಾಗಿ ಸಾಗುವುದು, ಮೀನು, ತರಕಾರಿ, ದಿನಸಿ ಮುಂತಾದವುಗಳನ್ನು ಖರೀದಿಸಲು ಮುಗಿಬಿದ್ದಿರುವುದು ಆತಂಕವನ್ನು ಮೂಡಿಸಿತು. ಪಟ್ಟಣದಲ್ಲಿನ ದೇವಾಲಯಗಳು ಇಂದೂ ಬಾಗಿಲು ಮುಚ್ಚಿದ್ದವು. ಬಾರ್‌ಗಳು ಬಂದ್ ಆಗಿದ್ದರೂ ವೈನ್ ಶಾಪ್‌ಗಳು ತೆರೆದಿದ್ದವು. ವೈನ್ ಶಾಪ್‌ಗಳಿಂದ ಮದ್ಯ ಖರೀದಿಸುವವರಿಗೆ ಅಂಗಡಿಯೆದುರು ಕನಿಷ್ಠ ೩ ಅಡಿಯ ಅಂತರವಿರುವ ಟ್ರಾö್ಯಕ್ ಬರೆದು ಸರತಿ ಸಾಲಿನಲ್ಲಿ ಬಂದು ಮದ್ಯ ಖರೀದಿಸುವುದಕ್ಕೆ ಸೂಚಿಸಲಾಗಿತ್ತು. ಇದಕ್ಕೆ ಚಕಾರವೆತ್ತದ ಕುಡುಕರು ಶಿಸ್ತಿನಲ್ಲಿಯೇ ತಮಗೆ ಬೇಕಾದ ಬ್ರಾö್ಯಂಡಿನ ಮದ್ಯವನ್ನು ಖರೀದಿಸಿಕೊಂಡು ಹೋಗುತ್ತಿರುವುದು ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು ಹೊನ್ನಾವರ ಪಟ್ಟಣದಲ್ಲಿರುವ ಚಿತ್ರಮಂದಿರ ಬಾಗಿಲು ತೆರೆದಿರಲಿಲ್ಲ. ಪ್ರಸಿದ್ದ ಧಾರ್ಮಿಕ ಕ್ಷೇತ್ರ ಪ್ರವಾಸಿತಾಣಗಳಿಗೆ ತೆರಳಲು ಅವಕಾಶವಿಲ್ಲ ಎಂದು ಬೋರ್ಡ ನೇತುಹಾಕಲಾಗಿತ್ತು.
ಪಟ್ಟಣದಲ್ಲಿ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಗ್ರಾಮೀಣಭಾಗದಲ್ಲಿ ಇಂದೂ ಸಹ ಹಲವು ಅಂಗಡಿಯವರು ಬಾಗಿಲು ತೆರೆಯಲಿಲ್ಲ.

error: