September 13, 2024

Bhavana Tv

Its Your Channel

ಬಂಗಾರಮಕ್ಕಿ ಬ್ರಹ್ಮರಥೋತ್ಸವ ಮುಂದಕ್ಕೆ

ಕೋವಿಡ್-೧೯ (ಕರೋನಾ ವೈರಸ್) ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ದಿನಾಂಕ ೨೪-೦೩-೨೦೨೦ರಿಂದ ೩೦-೦೩-೨೦೨೦ರವರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ. ಆದರಿಂದ ಹೊನ್ನವರ ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ದಿನಾಂಕ ೦೮-೦೪-೨೦೨೦ರಂದು ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆಚರಿಸಬೇಕೆಂದಿರುವ ಬ್ರಹ್ಮರಥೋತ್ಸವವನ್ನು ಭಕ್ತರ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಅನಿರ್ದಿಷ್ಟ ದಿನಗಳವರೆಗೆ ಮುಂದೂಡಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಸರ್ಕಾರದ ಮುಂದಿನ ಆದೇಶದವರೆಗೆ ಸಹಕರಿಸಬೇಕಾಗಿ ವಿನಂತಿ. ಮುಂದಿನ ದಿನಾಂಕವನ್ನು ಭಕ್ತರು ಮತ್ತು ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: