September 14, 2024

Bhavana Tv

Its Your Channel

ಹೆತ್ತ ಹಸುಗೂಸನ್ನೆ ಕೊಂದ ಪಾಪಿಗಳು ಪೋಲಿಸರ ವಶಕ್ಕೆ

ಹೆತ್ತ ಹಸುಗೂಸನ್ನು ಪೊದೆಗೆ ಎಸೆದ ನಿಷ್ಕರುಣಿ ತಾಯಿ.


ಕೊರೊನಾ ಗದ್ದಲದ ನಡುವೆ ಹಳದಿಪುರದಲ್ಲೊಂದು ಅಮಾನವೀಯ ಘಟನೆ.


ಮದುವೆಗೆ ಮುನ್ನ ಮೈಮರೆತ ಪ್ರೇಮಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಣ್ಣುಬಿಡದ ಮಗುವನ್ನು ಕೊಂದುಬಿಟ್ಟರು..

ಹೊನ್ನಾವರ: ಕೊರೊನಾ ಭಯದಲ್ಲಿ ಎಲ್ಲರೂ ಮನೆಯೊಳಗೆ ತಣ್ಣನೆ ಕುಳಿತಿರುವ ಹೊತ್ತಲ್ಲಿ ತಾಲೂಕಿನ ಹಳದಿಪುರದಲ್ಲಿ ಪಾಪಿ ತಾಯಿಯೊಬ್ಬಳು ಹೆತ್ತ ಹಸುಗೂಸನ್ನು ಸ್ಮಶಾನದಂಚಿನ ಪೊದೆಗೆ ಎಸೆದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಹೊನ್ನಾವರ ತಾಲೂಕಿನ ಹಳದಿಪುರ ಸಾಲಿಕೇರಿ ಸ್ಮಶಾನದ ಪಕ್ಕದ ಗುಡ್ಡದ ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು ಎಸೆದು ಸಾಯಿಸಿದ್ದಲ್ಲದೆ ಮಗುವಿನ ಜನನವನ್ನು ಮುಚ್ಚಿಡುವ ದುರುದ್ದೇಶದಿಂದ ಈ ಕೃತ್ಯ ಎಸಗಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡದಲ್ಲಿ ನವಜಾತ ಶಿಶು ಅನಾಥವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯವರು ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಪಟಗಾರ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವ ಗೌರವವನ್ನು ಹೆತ್ತವಳಿಗೆ ನೀಡುವ ಸಮಾಜದಲ್ಲಿ ಹೆಣ್ಣಿನ ಕುಲಕ್ಕೇ ಕಳಂಕ ತರುವ ಕೆಲಸ ಮಾಡಿದ ಪಾಪಿ ತಾಯಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಒಂದೇ ಒಂದು ಕರುಳ ಕುಡಿಗಾಗಿ ಜೀವನವೆಲ್ಲಾ ಪರಿತಪಿಸುತ್ತಿರುವ ಅದೆಷ್ಟೋ ಮಹಿಳೆಯರಿರುವಾಗ ಅದಾಗ ತಾನೇ ಜನಿಸಿದ ಮಗುವನ್ನು ಕೊಲ್ಲುವ ಆ ಹೆಣ್ಣಿನ ಹೃದಯ ಅದೆಷ್ಟು ಕಠೋರವಾಗಿರಬಹುದೆನ್ನುವ ಬಗ್ಗೆ ಜನರು ಆಡಿಕೊಳ್ಳುತ್ತಿದ್ದಾರೆ.

ಮದುವೆಗೆ ಮುನ್ನ ಮೈಮರೆತ ಪ್ರೇಮಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಣ್ಣುಬಿಡದ ಮಗುವನ್ನು ಕೊಂದುಬಿಟ್ಟರು..

ತಾಲೂಕನ್ನೇ ತಲ್ಲಣಗೊಳಿಸಿದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ನವಜಾತ ಶಿಶುವಿನ ಸಾವಿಗೆ ಕಾರಣರಾದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರ ಕರ್ಕಿಯ ನಿವಾಸಿ ಹಾಗೂ ಅಪರಾಧಕ್ಕೆ ನೆರವಾದ ಹುಡುಗಿಯ ತಂದೆ ತಾಯಿ ಬಂಧಿತ ಆರೋಪಿಗಳಾಗಿದ್ದಾರೆ.

ಕರ್ಕಿಯ ಯುವಕ ಬಡಗಣಿಯ ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವಿನ ಪ್ರೀತಿ ಪ್ರೇಮ ಕಾಮಕ್ಕೆ ತಿರುಗಿ ಲೈಂಗಿಕ ಸಂಪರ್ಕದವರೆಗೂ ಮುಂದುವರಿದಿದೆ. ಇದರ ಪರಿಣಾಮ ಯುವತಿ ಗರ್ಭದರಿಸಿದ್ದರೂ ಹುಡುಗಿಯ ಮನೆಯವರ ಪ್ರತಿರೋಧವಿಲ್ಲದ ಕಾರಣ ಇಬ್ಬರ ನಡುವಿನ ಸಂಬAಧ ನಿರಾತಂಕವಾಗಿ ಮುಂದುವರಿದಿದೆ. ಮದುವೆಯಾಗುತ್ತೇನೆ ಎಂದು ಪುಸಲಾಯಿಸುತ್ತಲೇ ಕಾಲ ಕಳೆದ ಯುವಕ ಹಾಗೂ ಆತನ ಪ್ರೇಯಸಿ ಇಬ್ಬರಿಗೂ ಕಾಮಸುಖ ಬೇಕಿತ್ತೇ ಹೊರತು ಕಾಮದ ಪ್ರತಿಫಲವಾಗಿ ಬೆಳೆಯುತ್ತಿದ್ದ ಮಗು ಬೇಕಾಗಿರಲಿಲ್ಲ. ಇಬ್ಬರೂ ಸೇರುವಾಗ ಇಲ್ಲದ ಸಮಾಜದ ಅಂಜಿಕೆ ಮದುವೆಗೂ ಮೊದಲೇ ಮಗುವಾದರೆ ಸಮಾಜದ ದೃಷ್ಟಿಯಲ್ಲಿ ಮರ್ಯಾದೆ ಇರುವುದಿಲ್ಲ ಎಂದುಕೊAಡ ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರ ಮಾತ್ರ ಯಾವುದನ್ನೂ ಅರಿಯದೇ ಪ್ರಪಂಚಕ್ಕೆ ಬಂದ ಹಸುಗೂಸನ್ನು ಬಲಿತೆಗೆದುಕೊಂಡುಬಿಟ್ಟಿದೆ.

ಹೆತ್ತ ಮಗುವನ್ನು ಗುಡ್ಡದಲ್ಲಿ ಬೀಸಾಕಿ ಬಂದ ಮಗಳನ್ನು ಮನೆಯಲ್ಲಿರಿಸಿಕೊಂಡ ತಂದೆ ತಾಯಿ ಎನಿಸಿಕೊಂಡವರು ರಕ್ತಸಿಕ್ತವಾಗಿದ್ದ ಮಗಳಿಗೆ ಸ್ನಾನ ಮಾಡಿಸುವಷ್ಟೂ ಜವಾಬ್ಧಾರಿಯನ್ನು ಹೊಂದಿಲ್ಲ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಸುಗೂಸಿನ ಕೊಲೆ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಯುವಕ ಇದೀಗ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾನೆನ್ನಲಾಗಿದೆ. ಇದೇ ಕೆಲಸವನ್ನು ಕೆಲ ದಿನಗಳ ಹಿಂದೆ ಮಾಡಿದ್ದರೆ ಹಸುಗೂಸು ಉಳಿಯುತ್ತಿತ್ತಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪಿ ಪ್ರೇಮಿಗಳಿಬ್ಬರ ಜೊತೆ ಹುಡುಗಿಯ ತಂದೆ ತಾಯಿಯನ್ನೂ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: